ಕಲಾವಿದರಿಗೆ ಶಿವಕುಮಾರ್ ನಟ್ಟು ಬೋಲ್ಟು ಸರಿ ಮಾಡ್ತೀನಿ ಅಂತ ಹೇಳಿದ್ದು ಸರಿಯಲ್ಲ: ಆರ್ ಅಶೋಕ

|

Updated on: Mar 06, 2025 | 7:47 PM

ಅಶೋಕ ಜೊತೆ ಡಾ ಅಶ್ವಥ್ ನಾರಾಯಣ ಧ್ವನಿಗೂಡಿಸಿದಾಗ, ಸುಮ್ನೆ ಕೂತ್ಕೊಳಯ್ಯ ನಿನ್ನ ಭಾಷೆ ಗೊತ್ತಿಲ್ಲವಾ? ಗಂಡ್ಸು ಅಂತೆಲ್ಲ ಮಾತಾಡ್ತೀಯ ಅಂತ ಶಿವಕುಮಾರ್ ಹೇಳುತ್ತಾರೆ. ಅದಕ್ಕೆ ಅಶ್ವಥ್, ತಾಕತ್ತಿದ್ರೆ ಮಾಡಿದ ಕೆಲಸ ತೋರಿಸಿ ಅಂತ ಹೇಳಿದ್ದು, ರಾಮನಗರ ಜಿಲ್ಲಾಸ್ಪತ್ರೆಗೆ ಒಂದು ಕ್ಯಾಂಪಸ್ ಇರಲಿಲ್ಲ, ಐಸಿಯು ಇರಲಿಲ್ಲ, ನೀವು ಇದುವರೆಗೆ ಏನು ಕೆಲಸ ಮಾಡಿದ್ದೀರಿ ನಾನೇನು ಮಾಡಿದ್ದೇನೆ ಅಂತ ತುಲನೆ ಮಾಡಿ ನೋಡೋಣ ಅಂತ ಸವಾಲೆಸೆಯುತ್ತಾರೆ.

ಬೆಂಗಳೂರು, ಮಾರ್ಚ್ 6 : ಬಜೆಟ್ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕರು ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವೆ ಇಂದು ವಾಕ್ಸಮರ ನಡೆಯಿತು. ಡಿಕೆ ಶಿವಕುಮಾರ್ (DK Shivakumar ) ಕಲಾವಿದರ ವಿಷಯದಲ್ಲಿ ನಟ್ಟು ಬೋಲ್ಟು ಟೈಟ್ ಮಾಡ್ತೀನಿ ಅಂತ ಹೇಳಿದ್ದು ಸರಿಯಲ್ಲ, ಅವರ ಹೃದಯದಲ್ಲಿ ಕೆಟ್ಟ ಭಾವನೆಯೇನೂ ಇರಲಿಕ್ಕಿಲ್ಲ, ಅದರೆ ಅವರು ಬಳಸಿದ ಭಾಷೆ ತಪ್ಪು ಸಂದೇಶ ರವಾನಿಸುತ್ತದೆ ಮತ್ತು ದೀರ್ಘಕಾಲ ಮಾಯಲಾರದ ಘಾಸಿಯನ್ನುಂಟು ಮಾಡುತ್ತದೆ ಎಂದು ಆರ್ ಅಶೋಕ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಸಿನಿಮಾರಂಗದವರು ನಾನಾಡಿದ ಮಾತುಗಳನ್ನು ಟೀಕಿಸಲಿ ಅಂತಲೇ ಹಾಗೆಲ್ಲ ಮಾತಾಡಿದ್ದು: ಡಿಕೆ ಶಿವಕುಮಾರ್