‘ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲವೇ ಇಲ್ಲ’: ನೇರವಾಗಿ ಹೇಳಿದ ಜನಾರ್ದನ ರೆಡ್ಡಿ ಪುತ್ರ ಕಿರೀಟಿ

Edited By:

Updated on: Mar 05, 2022 | 10:20 AM

‘ರಾಜಕೀಯದ ಬಗ್ಗೆ ನಾನು ಎಂದಿಗೂ ಯೋಚನೆ ಮಾಡಿಲ್ಲ. ಅದರ ಮೇಲೆ ನನಗೆ ಆಸೆಯೂ ಇಲ್ಲ’ ಎಂದು ಜನಾರ್ದನ ರೆಡ್ಡಿ ಪುತ್ರ ಕಿರೀಟಿ ಹೇಳಿದ್ದಾರೆ.

ರಾಜಕಾರಣಿಗಳ ಮಕ್ಕಳು ಸಿನಿಮಾ ರಂಗಕ್ಕೆ ಕಾಲಿಡುವುದು ಹೊಸದೇನೂ ಅಲ್ಲ. ಆ ಸಾಲಿಗೆ ಮಾಜಿ ಸಚಿವ ಜನಾರ್ದನ ರೆಡ್ಡಿ (Janardhan Reddy) ಅವರ ಪುತ್ರ ಕಿರೀಟಿ ರೆಡ್ಡಿ ಕೂಡ ಸೇರಿಕೊಂಡಿದ್ದಾರೆ. ಮೊದಲ ಚಿತ್ರದಲ್ಲಿಯೇ ಅವರು ದೊಡ್ಡ ನಿರ್ಮಾಣ ಸಂಸ್ಥೆ ‘ವಾರಾಹಿ ಫಿಲ್ಮಂ ಪ್ರೊಡಕ್ಷನ್’ ಜೊತೆ ಕೈ ಜೋಡಿಸಿದ್ದಾರೆ. ಈ ಸಿನಿಮಾದಲ್ಲಿ ರವಿಚಂದ್ರನ್​, ಜೆನಿಲಿಯಾ ಮುಂತಾದ ಸ್ಟಾರ್​ ಸೆಲೆಬ್ರಿಟಿಗಳು ನಟಿಸುತ್ತಿದ್ದಾರೆ. ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳಬೇಕು ಎಂಬ ಕನಸು ಇಟ್ಟುಕೊಂಡಿರುವ ಕಿರೀಟಿ (Kireeti) ಅವರು ಸಾಕಷ್ಟು ತಯಾರಿ ಮಾಡಿಕೊಂಡು ಬಂದಿದ್ದಾರೆ. ತಂದೆ ರಾಜಕೀಯದಲ್ಲಿ ಹೆಸರು ಮಾಡಿದ್ದರೂ ಕೂಡ ಕಿರೀಟಿಗೆ ಆ ಕಡೆ ಆಸಕ್ತಿ ಇಲ್ಲ. ಆ ಬಗ್ಗೆ ಅವರು ನೇರವಾಗಿ ಮಾತನಾಡಿದ್ದಾರೆ. ‘ನಾನು ಚಿಕ್ಕ ಹುಡುಗ ಆಗಿದ್ದಾಗಿನಿಂದಲೂ ನನಗೆ ಇದ್ದ ಒಂದೇ ಆಸೆ ಎಂದರೆ ನಟ ಆಗಬೇಕು ಎಂಬುದು. ಕನ್ನಡ ಚಿತ್ರರಂಗದಲ್ಲಿ ಒಬ್ಬ ನಟನಾಗಿ ನಾನು ಉಳಿದುಕೊಳ್ಳಬೇಕು. ರಾಜಕೀಯದ ಬಗ್ಗೆ ನಾನು ಎಂದಿಗೂ ಯೋಚನೆ ಮಾಡಿಲ್ಲ. ಅದರ ಮೇಲೆ ನನಗೆ ಆಸೆಯೂ ಇಲ್ಲ. ಮುಂದೆ ಯಾರು ಪ್ರಶ್ನೆ ಕೇಳಿದರೂ ನನ್ನ ಉತ್ತರ ಇದೇ ಆಗಿರುತ್ತದೆ. ನನಗೆ ರಾಜಕೀಯಕ್ಕೆ ಹೋಗುವ ಉದ್ದೇಶ ಇಲ್ಲ’ ಎಂದು ಕಿರೀಟಿ ರೆಡ್ಡಿ (Kireeti Reddy) ಹೇಳಿದ್ದಾರೆ.

ಇದನ್ನೂ ಓದಿ:

ಜನಾರ್ದನ್​ ರೆಡ್ಡಿ ಮಗ ಕಿರೀಟಿ ಬಗ್ಗೆ ಎಸ್​.ಎಸ್​. ರಾಜಮೌಳಿ ಹೇಳಿದ್ದೇನು?

ಚಿತ್ರರಂಗಕ್ಕೆ ಕಾಲಿಡುವುದಕ್ಕೂ ಮೊದಲು ಪುನೀತ್​ರನ್ನು ನೆನೆದ ಜನಾರ್ದನ ​ರೆಡ್ಡಿ ಮಗ ಕಿರೀಟಿ