ಜನರೊಂದಿಗೆ ಜನತಾದಳ ಕಾರ್ಯಕ್ರಮ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸನ್ನು ತರುತ್ತಿದೆ: ನಿಖಿಲ್ ಕುಮಾರಸ್ವಾಮಿ

Updated on: Jul 01, 2025 | 8:11 PM

ಸಿದ್ದರಾಮಯ್ಯ ಮತ್ತು ಬಿಆರ್ ಏಕಕಾಲಕ್ಕೆ ಜೆಡಿಎಸ್​ನಿಂದ ಹೊರಬಿದ್ದವರು, ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಪಾಟೀಲ್ ಅವರ ಕ್ಷೇತ್ರದ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿಲ್ಲ, ಇವತ್ತು ನಮ್ಮ ಕಾರ್ಯಕರ್ತರ್ಯಾರೋ ಪಾಟೀಲ್ ಅವರು ಸಿದ್ದರಾಮಯ್ಯ ಒಬ್ಬ ಲಾಟರಿ ಮುಖ್ಯಮಂತ್ರಿ ಅಂತ ಹೇಳಿರುವ ವಿಡಿಯೋ ತೋರಿಸಿದರು, ಇದಕ್ಕೆಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯವರೇ ಉತ್ತರ ಕೊಡಬೇಕು ಎಂದು ನಿಖಿಲ್ ಹೇಳಿದರು.

ಮಂಡ್ಯ, ಜುಲೈ 1: ಮಂಡ್ಯದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಜೆಡಿಎಸ್ ಯುವನಾಯಕ (Young JDS leader) ನಿಖಿಲ್ ಕುಮಾರಸ್ವಾಮಿ ‘ಜನರೊಂದಿಗೆ ಜನತಾದಳ’ ಕಾರ್ಯಕ್ರಮ ಬಹಳ ಚೆನ್ನಾಗಿ ನಡೆಯುತ್ತಿದೆ, ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಕಂಡು ಬರುತ್ತಿದೆ, ಜೆಡಿಎಸ್ ಪಕ್ಷವನ್ನು ಬೇರುಮಟ್ಟದಿಂದ ಬಲಪಡಿಸುವ ಕೆಲಸವನ್ನು ಮಾಡುತ್ತಿದ್ದೇವೆ, ಈಗಾಗಲೇ ನಾಲ್ಕು ಜಿಲ್ಲೆಗಳಲ್ಲಿ ಸುತ್ತಾಡಿದ್ದೇನೆ, ಮುಂದೆ ಕಲ್ಯಾಣ ಕರ್ನಾಟಕ ಕಡೆ ಹೋಗುವ ಯೋಜನೆ ಇದೆ ಎಂದು ನಿಖಿಲ್ ಹೇಳಿದರು. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಎದುರು ನೋಡುತ್ತಿದ್ದೇವೆ, ಈ ಚುನಾವಣೆಗಳಲ್ಲಿ ಜೆಡಿಎಸ್ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಇದೆ ಎಂದು ನಿಖಿಲ್ ಹೇಳಿದರು.

ಇದನ್ನೂ ಓದಿ:  ಮಳೆಯಲ್ಲಿ ನೆನೆದುಕೊಂಡು ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶಕ್ಕೆ ಆಗಮಿಸಿದ ನಿಖಿಲ್ ಕುಮಾರಸ್ವಾಮಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ