AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮಮಂದಿರ ಪ್ರಾಂಗಣದಲ್ಲಿ ಮಗ ನಿಖಿಲ್​ನೊಂದಿಗೆ ಕಾಣಿಸಿದ ಹೆಚ್ ಡಿ ಕುಮಾರಸ್ವಾಮಿ

ರಾಮಮಂದಿರ ಪ್ರಾಂಗಣದಲ್ಲಿ ಮಗ ನಿಖಿಲ್​ನೊಂದಿಗೆ ಕಾಣಿಸಿದ ಹೆಚ್ ಡಿ ಕುಮಾರಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 22, 2024 | 12:07 PM

Share

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ತಮ್ಮ ಕುಟುಂಬದೊಂದಿಗೆ ರಾಮಮಂದಿರದ ಕಡೆ ಸಂತಸದಿಂದ ಹೆಜ್ಜೆ ಹಾಕುತ್ತಿರುವುದನ್ನು ಸಹ ವಿಡಿಯೋದಲ್ಲಿ ನೋಡಬಹುದು. ಇಂಗ್ಲಿಷ್ ಸುದ್ದಿಸಂಸ್ಥೆಯೊಂದರ ವರದಿಗಾರನೊಂದಿಗೆ ಮಾತಾಡಿರುವ ಅವರು, ‘ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶ ಸಿಕ್ಕಿರೋದು ದೇವರಿಂದ ಸಿಕ್ಕ ವರವೆಂದು ಭಾವಿಸುತ್ತೇನೆ, ನಮ್ಮ ಕುಟುಂಬ ಅತೀವ ಸಂತೋಷದಲ್ಲಿದೆ,’ ಎಂದು ಹೇಳಿದರು.

ಅಯೋಧ್ಯೆ: ಧಾರ್ಮಿಕನಗರಿ ಅಯೋಧ್ಯೆಯಲ್ಲಿ ತಲೆಯೆತ್ತಿರುವ ಭವ್ಯ ರಾಮಮಂದಿರದ ಉದ್ಘಾಟನೆ (Ram Temple Consecration Ceremony) ಸಮಾರಂಭಕ್ಕೆ ಗಣ್ಯಾತಿಗಣ್ಯರು ಆಗಮಿಸಿದ್ದಾರೆ. ರಾಮಜನ್ಮಭೂಮಿ ಟ್ರಸ್ಟ್ ವತಿಯಿಂದ ಆಮಂತ್ರಣ ಪಡೆದಿರುವ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ಪಕ್ಷದ ರಾಜ್ಜಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ತಮ್ಮ ಮಗ ಹಾಗೂ ಪಕ್ಷದ ಯುವನಾಯಕ ನಿಖಿಲ್ ಕುಮಾರ ಸ್ವಾಮಿಯೊಂದಿಗೆ (Nikhil Kumaraswamy) ರಾಮಮಂದಿರದ ಆವರಣದಲ್ಲಿ ಕಾಣಿಸಿದರು. ನಿಖಿಲ್ ಗೆ ಇವತ್ತು ಹುಟ್ಟುಹಬ್ಬ ಕೂಡ ಆಗಿರುವುದರಿಂದ ಮತ್ತೂ ವಿಶೇಷ ದಿನವಾಗಿದೆ. ಮಂದಿರದ ಅವರಣದಲ್ಲಿ ಅವರು ಕೆಲವರೊಂದಿಗೆ ಮಾತಾಡುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಅವರ ಮೇಲ್ಭಾಗದಲ್ಲಿ ಕುಮಾರಸ್ವಾಮಿ ಇದ್ದಾರೆ. ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ತಮ್ಮ ಕುಟುಂಬದೊಂದಿಗೆ ರಾಮಮಂದಿರದ ಕಡೆ ಸಂತಸದಿಂದ ಹೆಜ್ಜೆ ಹಾಕುತ್ತಿರುವುದನ್ನು ಸಹ ವಿಡಿಯೋದಲ್ಲಿ ನೋಡಬಹುದು. ಇಂಗ್ಲಿಷ್ ಸುದ್ದಿಸಂಸ್ಥೆಯೊಂದರ ವರದಿಗಾರನೊಂದಿಗೆ ಮಾತಾಡಿರುವ ಅವರು, ‘ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶ ಸಿಕ್ಕಿರೋದು ದೇವರಿಂದ ಸಿಕ್ಕ ವರವೆಂದು ಭಾವಿಸುತ್ತೇನೆ, ನಮ್ಮ ಕುಟುಂಬ ಅತೀವ ಸಂತೋಷದಲ್ಲಿದೆ,’ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ