ರಾಮಮಂದಿರ ಉದ್ಘಾಟನೆ; ಮನೆ ಮುಂದೆ ಹಣತೆ ಹಚ್ಚಿ ಭಕ್ತಿ, ಸಂಭ್ರಮ ಆಚರಿಸಿ: ಸಚಿವ ಧರ್ಮೇಂದ್ರ ಪ್ರಧಾನ್ ಕರೆ

Dharmendra Pradhan: ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಜನರು ಮನೆ ಮುಂದೆ ಹಣತೆ ಹಚ್ಚಬೇಕೆಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಕರೆನೀಡಿದ್ದಾರೆ. ಜನವರಿ 22, ಸಂಜೆ ಎಲ್ಲರೂ ಮನೆ ಮುಂದೆ ದೀಪ ಹಚ್ಚಿ ದೀಪಾವಳಿಯಂತೆ ಆಚರಿಸಬೇಕೆಂದು ಮನವಿ ಮಾಡಿದ್ದಾರೆ. ಜನವರಿ 22ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ಬೆಳಗ್ಗೆ 6:30ಕ್ಕೆ ಆರತಿ ನಡೆಯಲಿದೆ. 12:30ಕ್ಕೆ ಪ್ರಾಣ ಪ್ರತಿಷ್ಠಾಪನೆಯಾಗಲಿದೆ.

ರಾಮಮಂದಿರ ಉದ್ಘಾಟನೆ; ಮನೆ ಮುಂದೆ ಹಣತೆ ಹಚ್ಚಿ ಭಕ್ತಿ, ಸಂಭ್ರಮ ಆಚರಿಸಿ: ಸಚಿವ ಧರ್ಮೇಂದ್ರ ಪ್ರಧಾನ್ ಕರೆ
ಧರ್ಮೇಂದ್ರ ಪ್ರಧಾನ್
Follow us
|

Updated on: Jan 21, 2024 | 6:27 PM

ನವದೆಹಲಿ, ಜನವರಿ 21: ನಾಳೆ ನಡೆಯಲಿರುವ ರಾಮ ಮಂದಿರ ವಿಗ್ರಹ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ (Ram temple consecration ceremony) ಹಿನ್ನೆಲೆಯಲ್ಲಿ ಸೋಮವಾರದಂದು ದೇಶವಾಸಿಗಳು ತಮ್ಮ ಮನೆ ಮುಂದೆ ದೀಪ (ligh the lamp) ಹಚ್ಚಿಸುವಂತೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಮನವಿ ಮಾಡಿದ್ದಾರೆ. ‘ಈ ಒಂದು ಸಂದರ್ಭಕ್ಕಾಗಿ ಇಡೀ ದೇಶ ಕಾಯುತ್ತಿದೆ. ಜನವರಿ 22ರಂದು ಸಂಜೆ ದೇಶದ ಎಲ್ಲಾ ಜನರೂ ತಮ್ಮ ಮನೆಗಳ ಮುಂದೆ ಹಣತೆ ಹಚ್ಚಿ ದೀಪಾವಳಿ ಆಚರಿಸಬೇಕೆಂಬುದು ನನ್ನ ಮನವಿ’ ಎಂದು ಸಚಿವರು ಕರೆ ನೀಡಿದ್ದಾರೆ.

‘ನಂಬಿಕೆಯ ದೀಪ ಹಚ್ಚಿಸೋಣ, ಮತ್ತೊಮ್ಮೆ ಧಾಮ್ ಧೂಮ್ ಎಂದು ದೀಪಾವಳಿ ಆಚರಿಸೋಣ’ ಎಂದು ಧರ್ಮೇಂದ್ರ ಪ್ರಧಾನ್ ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಅವರು ತಮ್ಮ ಕುಟುಂಬ ಸದಸ್ಯರು ಹಾಗೂ ನೆರೆ ಹೊರೆಯವರೊಂದಿಗೆ ಸೇರಿ ದೀಪಗಳಿಗೆ ಬತ್ತಿ ಹೊಸೆದು ಸಿದ್ಧಗೊಳಿಸುತ್ತಿರುವ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.

ಜನವರಿ 22ರಂದು ಏನಿವೆ ಕಾರ್ಯಕ್ರಮಗಳು

ಉತ್ತರಪ್ರದೇಶ ರಾಜ್ಯದ ಅಯೋಧ್ಯೆಯಲ್ಲಿ ನೂತನವಾಗಿ ಮರುನಿರ್ಮಿಸಲಾಗಿರುವ ರಾಮಮಂದಿರದ ಬಾಲ ರಾಮನಗ ವಿಗ್ರಹ ಪ್ರಾಣಪ್ರತಿಷ್ಠಾಪನಾ ಮಹೋತ್ಸವ ಸೋಮವಾರ 12:15ರಿಂದ 12:45ರ ವೇಳೆಗೆ ನಡೆಯಲಿದೆ. ದೈವಿಕ ಶಕ್ತಿಯನ್ನು ವಿಗ್ರಹಕ್ಕೆ ಆಹ್ವಾನಿಸಲು ಧಾರ್ಮಿಕ ವಿಧಿವಿಧಾನಗಳ ಪ್ರಕಾರ ನಡೆಯಲಿದೆ.

ಇದನ್ನೂ ಓದಿ: Casinos Closure: ರಾಮಮಂದಿರ ಕಾರ್ಯಕ್ರಮ: ಕ್ಯಾಸಿನೋವಾಗಳು ಬಂದ್; ಇತರ ಉದ್ಯಮ ವಲಯದ ಸ್ಪಂದನೆ ಹೇಗೆ?

ಸೋಮವಾರ ಬೆಳಗ್ಗೆಯಿಂದಲೇ ಸಾರ್ವಜನಿಕರಿಗೆ ದೇವಸ್ಥಾನದ ದರ್ಶನದ ಅವಕಾಶ ನೀಡಲಾಗುತ್ತದೆ. 11:30ಕ್ಕೆ ದರ್ಶನ ನಿಲ್ಲಿಸಲಾಗುತ್ತದೆ. ಪ್ರಾಣ ಪ್ರತಿಷ್ಠಾಪನೆಯಾದ ಬಳಿಕ ಮಧ್ಯಾಹ್ನ 2ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಸಾರ್ವಜನಿಕರಿಗೆ ದರ್ಶನಕ್ಕೆ ಮತ್ತೆ ಅವಕಾಶ ಕೊಡಲಾಗುತ್ತದೆ.

ಬೆಳಗ್ಗೆ 6:30, ಮಧ್ಯಾಹ್ನ 12 ಹಾಗೂ ಸಂಜೆ 7:30 ಈ ಮೂರು ಅವಧಿಯಲ್ಲಿ ಆರತಿ ಎತ್ತಲಾಗುತ್ತದೆ. ದೇಶದ ವಿವಿಧ ದೇವಸ್ಥಾನಗಳಲ್ಲಿ ಕಳೆದ ಎರಡು ಮೂರು ದಿನಗಳಿಂದಲೇ ನಿತ್ಯ ದೇವರ ಪ್ರಾರ್ಥನೆ, ಪೂಜೆ, ಪುನಸ್ಕಾರ, ಭಜನೆಗಳು ನಡೆಯುತ್ತಿವೆ. ಜನವರಿ 22ರಂದೂ ಎಲ್ಲೆಡೆ ಪೂಜೆಗಳು ಇರುತ್ತವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ