AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Casinos Closure: ರಾಮಮಂದಿರ ಕಾರ್ಯಕ್ರಮ: ಕ್ಯಾಸಿನೋವಾಗಳು ಬಂದ್; ಇತರ ಉದ್ಯಮ ವಲಯದ ಸ್ಪಂದನೆ ಹೇಗೆ?

Ram Mandir Prana Pratishtapana: ರಾಮಮಂದಿರ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಹಲವೆಡೆ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಗೋವಾರದಲ್ಲಿ ಕ್ಯಾಸಿನೋಗಳು ಸ್ವಯಂ ಆಗಿ ಸಂಜೆ 4ರವರೆಗೆ ಬಂದ್ ಮಾಡಿವೆ. ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ತನ್ನ ಉದ್ಯೋಗಿಗಳಿಗೆ ರಜೆ ನೀಡಿದೆ.

Casinos Closure: ರಾಮಮಂದಿರ ಕಾರ್ಯಕ್ರಮ: ಕ್ಯಾಸಿನೋವಾಗಳು ಬಂದ್; ಇತರ ಉದ್ಯಮ ವಲಯದ ಸ್ಪಂದನೆ ಹೇಗೆ?
ಕ್ಯಾಸಿನೋವಾ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 21, 2024 | 5:30 PM

Share

ಅಯೋಧ್ಯೆ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ (Ram Templ Consecration Ceremony) ಇರುವ ಹಿನ್ನೆಲೆಯಲ್ಲಿ ಜನವರಿ 22, ಸೋಮವಾರದಂದು ಬಹಳಷ್ಟು ಕಡೆ ರಜೆಗಳಿವೆ. ಕೆಲ ರಾಜ್ಯಗಳ ಸರ್ಕಾರಗಳು ಅಧಿಕೃತವಾಗಿಯೇ ರಜೆ ಘೋಷಿಸಿವೆ. ಕೆಲ ಕಂಪನಿಗಳೂ ಅಂದು ರಜೆ ನೀಡಿವೆ. ಇದೇ ವೇಳೆ, ಗೋವಾದ ಪ್ರಮುಖ ಆದಾಯ ಮೂಲವಾಗಿರುವ ಕ್ಯಾಸಿನೋಗಳೂ ಕೂಡ ಸೋಮವಾರ ಬಾಗಿಲು ಬಂದ್ ಮಾಡಲಿವೆ. ಸರ್ಕಾರದ ಆದೇಶ ಇಲ್ಲದಿದ್ದರೂ ಈ ಕ್ಯಾಸಿನೋಗಳು ಸ್ವ ಇಚ್ಛೆಯಿಂದ ಬಂದ್ ಮಾಡಲು ನಿರ್ಧರಿಸಿವೆ.

ವರದಿಗಳ ಪ್ರಕಾರ ಜನವರಿ 22, ಸೋಮವಾರ ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಕ್ಯಾಸಿನೋಗಳು ಕಾರ್ಯನಿರ್ವಹಿಸುವುದಿಲ್ಲ. ಸಂಜೆ 4ರ ಬಳಿಕ ಗೇಮ್​ಗಳು ಇರುತ್ತವೆ.

‘ಎಲ್ಲರೂ ಅದನ್ನು ಮಾಡುತ್ತಿರುವಾಗ ನಾವೇಕೆ ಮಾಡಬಾರದು. ನಮಗೆ ರಾಮನಲ್ಲಿ ನಂಬಿಕೆ ಇದೆ. ನಮ್ಮ ಸಿಬ್ಬಂದಿಯೂ ರಾಮನನ್ನು ಪ್ರಾರ್ಥಿಸಲು ಮತ್ತು ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಿಸಲು ಅವಕಾಶ ಕೊಡಲು ಬಯಸುತ್ತೇವೆ,’ ಎಂದು ಕ್ಯಾಸಿನೋ ಗೇಮಿಂಗ್ ಸಂಸ್ಥೆಗಳಲ್ಲೊಂದಾದ ಮೆಜೆಸ್ಟಿಕ್ ಪ್ರೈಡ್​ನ ನಿರ್ದೇಶಕ ಶ್ರೀನಿವಾಸ್ ನಾಯಕ್ ಹೇಳಿದ್ದಾರೆ.

ಇದನ್ನೂ ಓದಿ: Ram Mandir Inauguration: ರಾಮಲಲ್ಲಾ ಪ್ರಾಣಪ್ರತಿಷ್ಠೆ ದಿನ ರಜೆ ಘೋಷಣೆ ವಿರುದ್ಧದ ಪಿಐಎಲ್ ರದ್ದುಗೊಳಿಸಿದ ಬಾಂಬೆ ಹೈಕೋರ್ಟ್​

ಗೋವಾದಲ್ಲಿ ಅಲ್ಲಿ ಸರ್ಕಾರ ಸಾರ್ವಜನಿಕ ರಜೆಯನ್ನೇ ಘೋಷಿಸಿದೆ. ಎಲ್ಲಾ ಶಾಲಾ ಕಾಲೇಜು ಮತ್ತು ಸರ್ಕಾರಿ ಕಚೇರಿಗಳು ಇಡೀ ದಿನ ಬಂದ್ ಆಗಿರುತ್ತವೆ.

ಹರ್ಯಾಣ ಸರ್ಕಾರ ಕೂಡ ರಜೆ ಘೋಷಿಸಿದೆ. ಜತೆಗೆ ಇಡೀ ದಿನ ಮದ್ಯಸೇವನೆ ನಿಷೇಧ ಮಾಡಿದೆ. ಒಡಿಶಾ, ಗುಜರಾತ್, ಮಧ್ಯಪ್ರದೇಶ ಮೊದಲಾದ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಅರ್ಧದಿನ ರಜೆ ನೀಡಲಾಗಿದೆ.

ಕೋರ್ಟ್​ಗಳ ರಜೆ?

ಕೇಂದ್ರದ ಎಲ್ಲಾ ಸರ್ಕಾರಿ ಕಚೇರಿಗಳು ಜ. 22 ಸೋಮವಾರದಂದು ಮಧ್ಯಾಹ್ನ 2:30ರವರೆಗೆ ರಜೆ ಹೊಂದಿರುತ್ತವೆ. ಹಾಗೆಯೇ, ನ್ಯಾಷನಲ್ ಕಂಪನಿ ಲಾ ಟ್ರಿಬ್ಯುನಲ್​ನ (ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ) ಎಲ್ಲಾ 15 ಶಾಖೆಗಳೂ ಕೂಡ ಅರ್ಧ ದಿನ ಬಂದ್ ಆಗಿರುತ್ತವೆ. ಮಧ್ಯಾಹ್ನ 3ಗಂಟೆಯ ಬಳಿಕ ಅವು ಕಾರ್ಯಾರಂಭಿಸಲಿವೆ.

ಇದನ್ನೂ ಓದಿ: ಹುನುಮನ ಜನ್ಮಸ್ಥಳ ಅಂಜನಾದ್ರಿಯಲ್ಲಿ ಜ.22ರಂದು ಪಂಚಲೋಹದ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ

ರಿಲಾಯನ್ಸ್ ಇಂಡಸ್ಟ್ರೀಸ್ ರಜೆ

ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕಾಗಿ ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ತನ್ನ ಉದ್ಯೋಗಿಗಳಿಗೆ ಜನವರಿ 22ರಂದು ರಜೆ ನೀಡಿದೆ. ಆರ್​ಬಿಐನ ಫಾರೆಕ್ಸ್ ರಿಸರ್ವ್ಸ್ ಮೊದಲಾದ ಮಾರುಕಟ್ಟೆಗಳು ಅರ್ಧದಿನ ಬಂದ್ ಆಗಿರುತ್ತವೆ.

ಅಮೆರಿಕದಲ್ಲಿ ಟೆಸ್ಲಾದಿಂದ ಲೈಟ್ ಅಂಡ್ ಮ್ಯೂಸಿಕ್ ಶೋ

ಅಮೆರಿಕದ ವಾಷಿಂಗ್ಟನ್ ನಗರದಲ್ಲಿ ಟೆಸ್ಲಾದ ಕಾರುಗಳನ್ನು ಬಳಸಿಕೊಂಡು ರಾಮನಿಗೆ ಗೌರವವಾಗಿ ಬೆಳಕು ಮತ್ತು ಸಂಗೀತದ ಶೋ ನೀಡಲಾಗಿತ್ತು. ಇಂಗ್ಲೀಸ್​ನ ರಾಮ್ ಅಕ್ಷರದಲ್ಲಿ ಕಾರುಗಳನ್ನು ಜೋಡಿ ಈ ಪ್ರದರ್ಶನ ಮಾಡಲಾಗಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ