ರೇವಣ್ಣರನ್ನು ನೋಡಲು ಕೇಂದ್ರೀಯ ಜೈಲಿಗೆ ಬಂದ ಜೆಡಿಎಸ್ ಶಾಸಕರು-ಎ ಮಂಜು ಮತ್ತು ಬಾಲಕೃಷ್ಣ

ರೇವಣ್ಣರನ್ನು ನೋಡಲು ಕೇಂದ್ರೀಯ ಜೈಲಿಗೆ ಬಂದ ಜೆಡಿಎಸ್ ಶಾಸಕರು-ಎ ಮಂಜು ಮತ್ತು ಬಾಲಕೃಷ್ಣ

ಅರುಣ್​ ಕುಮಾರ್​ ಬೆಳ್ಳಿ
|

Updated on: May 09, 2024 | 7:22 PM

ಜೈಲು ಮೂಲಗಳಿಂದ ಲಭ್ಯವಾಗುತ್ತಿರುವ ಮಾಹಿತಿ ಪ್ರಕಾರ ರೇವಣ್ಣ ಹೈಪರ್ ಅಸಿಡಿಟಿಯಿಂದ ಬಳಲುತ್ತಿದ್ದಾರೆ. ಹಾಗಾಗೇ, ಅವರ ಆರೋಗ್ಯ ವಿಚಾರಿಸಲು ಇಬ್ಬರು ಜೆಡಿಎಸ್ ಶಾಸಕರು-ಅರಕಲಗೂಡು ಕ್ಷೇತ್ರದ ಎ ಮಂಜು ಮತ್ತು ಶ್ರವಣಬೆಳಗೊಳ ಕ್ಷೇತ್ರದ ಸಿ ಎನ್ ಬಾಲಕೃಷ್ಣ ಜೈಲಿಗೆ ಆಗಮಿಸಿದ್ದರು.

ಬೆಂಗಳೂರು: ಮಾಜಿ ಸಚಿವ ಮತ್ತು ಹೊಳೆನರಸೀಪುರ ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ (HD Revanna) ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರೀಯ ಕಾರಾಗೃಹ ಸೇರಿ ಒಂದು ದಿನ ಕಳೆದಿದೆ. 66 ವರ್ಷಗಳ ಬದುಕನ್ನು ಸುಪ್ಪತ್ತಿಗೆಯಲ್ಲಿ ಜೀವಿಸಿ ಈಗ ಸೆರೆವಾಸ ಅನುಭವಿಸಬೇಕಾಗಿ ಬಂದಿದ್ದು ಅವರಲ್ಲಂತೂ ಗಾಬರಿ ಮೂಡಿಸಿರುತ್ತದೆ. ಜೈಲು ಮೂಲಗಳಿಂದ ಲಭ್ಯವಾಗುತ್ತಿರುವ ಮಾಹಿತಿ ಪ್ರಕಾರ ರೇವಣ್ಣ ಹೈಪರ್ ಅಸಿಡಿಟಿಯಿಂದ (hyper acidity) ಬಳಲುತ್ತಿದ್ದಾರೆ. ಹಾಗಾಗೇ, ಅವರ ಆರೋಗ್ಯ ವಿಚಾರಿಸಲು ಇಬ್ಬರು ಜೆಡಿಎಸ್ ಶಾಸಕರು-ಅರಕಲಗೂಡು ಕ್ಷೇತ್ರದ ಎ ಮಂಜು (A Manju) ಮತ್ತು ಶ್ರವಣಬೆಳಗೊಳ ಕ್ಷೇತ್ರದ ಸಿ ಎನ್ ಬಾಲಕೃಷ್ಣ (CN Balakrishna) ಜೈಲಿಗೆ ಆಗಮಿಸಿದ್ದರು. ಜೈಲಿನ ವೈದ್ಯಧಿಕಾರಿಗಳು ರೇವಣ್ಣ ಅವರಿಗೆ ಮಾತ್ರೆ ನೀಡಿರುತ್ತಾರೆ ಅದು ಬೇರೆ ವಿಷಯ. ಆದರೆ ರೇವಣ್ಣ ಮಾನಸಿಕವಾಗಿ ವಿಪರೀತ ಬಳಲಿರುತ್ತಾರೆ. ಜೈಲಿನ ವಾತಾವರಣವೇ ಹಾಗೆ, ಎಂತೆಂಥವರನ್ನೂ ಮೆತ್ತಗಾಗಿಸಿ ಬಿಡುತ್ತದೆ. ತಮ್ಮ ಪಕ್ಷದ ಶಾಸಕರನ್ನು ನೋಡಿದ ಬಳಿಕ ರೇವಣ್ಣ ನಿಸ್ಸಂದೇಹವಾಗಿ ಕೊಂಚ ಗೆಲುವಾಗಿರುತ್ತಾರೆ. ನಾವು ನಿನ್ನೆ ವರದಿ ಮಾಡಿದ ಹಾಗೆ ರೇವಣ್ಣರ ಜಾಮೀನು ಅರ್ಜಿ ತಿರಸ್ಕರಿಸಿದ ನಗರದ ನ್ಯಾಯಾಲಯವೊಂದು ಅವರನ್ನು ಮೇ 14 ರವರೆಗೆ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ನನ್ನ ಕುಟುಂಬವೇ ಬೇರೆ, ಹೆಚ್ ಡಿ ರೇವಣ್ಣ ಕುಟುಂಬವೇ ಬೇರೆ, ನಮ್ಮ ವ್ಯವಹಾರಗಳೂ ಬೇರೆ ಬೇರೆ: ಹೆಚ್ ಡಿ ಕುಮಾರಸ್ವಾಮಿ