ಬಿಹಾರದಲ್ಲಿ ಪಟಾಕಿ ಸಿಡಿಸಿ ಜೆಡಿಯು ಕಾರ್ಯಕರ್ತರ ಸಂಭ್ರಮಾಚರಣೆ

Updated on: Nov 14, 2025 | 7:05 PM

ನವೆಂಬರ್ 6ರಂದು ಮೊದಲ ಹಂತದ ಮತದಾನ ಮತ್ತು ನವೆಂಬರ್ 11ರಂದು 2ನೇ ಹಂತದ ಮತದಾನ ನಡೆಯಿತು. ಈ ವರ್ಷ ಬಿಹಾರವು ಅಭೂತಪೂರ್ವವಾಗಿ ಶೇ. 66.91ರಷ್ಟು ಮತದಾನವನ್ನು ಕಂಡಿತು. ಇದು 1951ರಿಂದೀಚೆಗೆ ಬಿಹಾರದ ಇತಿಹಾಸದಲ್ಲಿಯೇ ಅತ್ಯಧಿಕ ಮತದಾನವಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ (ECI) ತಿಳಿಸಿದೆ.

ಪಾಟ್ನಾ, ನವೆಂಬರ್ 14: ಬಿಹಾರದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎನ್‌ಡಿಎ) ಐತಿಹಾಸಿಕ ಗೆಲುವು ಸಾಧಿಸಿದೆ. ಇದು ಖಚಿತವಾಗುತ್ತಿದ್ದಂತೆ ಜೆಡಿಯು ಕಾರ್ಯಕರ್ತರು ಮತ್ತು ಬೆಂಬಲಿಗರು ಪಾಟ್ನಾದ ಪಕ್ಷದ ಕಚೇರಿಯ ಹೊರಗೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು. ಬಿಹಾರದಲ್ಲಿ ವಿಧಾನಸಭಾ ಚುನಾವಣೆಗಳು (Bihar Assembly Elections) 2 ಹಂತಗಳಲ್ಲಿ ನಡೆದವು. ನವೆಂಬರ್ 6ರಂದು ಮೊದಲ ಹಂತದ ಮತದಾನ ಮತ್ತು ನವೆಂಬರ್ 11ರಂದು 2ನೇ ಹಂತದ ಮತದಾನ ನಡೆಯಿತು. ಈ ವರ್ಷ ಬಿಹಾರವು ಅಭೂತಪೂರ್ವವಾಗಿ ಶೇ. 66.91ರಷ್ಟು ಮತದಾನವನ್ನು ಕಂಡಿತು. ಇದು 1951ರಿಂದೀಚೆಗೆ ಬಿಹಾರದ ಇತಿಹಾಸದಲ್ಲಿಯೇ ಅತ್ಯಧಿಕ ಮತದಾನವಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ (ECI) ತಿಳಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us