ಆಕರ್ಷಕ ಜಿಯೋ ಆಫರ್ಗಳೊಂದಿಗೆ ಐಪಿಎಲ್ ಎರಡನೇ ಚರಣದ ಪಂದ್ಯಗಳನ್ನು ಪೋನ್ನಲ್ಲೇ ನೋಡುವ ಅವಕಾಶ!
ಕೋವಿಡ್ನಿಂದಾಗಿ ಸ್ಥಗಿತಗೊಂಡಿದ್ದ 14 ನೇ ಸೀಸನ್ ಎರಡನೇ ಚರಣ ಕಳೆದ ರವಿವಾರ ಯುಎಈನಲ್ಲಿ ಆರಂಭವಾವಾಗುತ್ತಿದಂತಯೇ, ತಮ್ಮ ಜಿಯೋ ಚಂದಾದಾರರಿಗೆ ಅವರು ಭರ್ಜರಿ ಪ್ರೀ ಪೇಡ್ ಮತ್ತು ಪೋಸ್ಟ್ ಪೇಡ್ ಆಫರ್ ಗಳನ್ನು ನೀಡುತ್ತಿದ್ದಾರೆ.
ಇಂಡಿಯನ್ ಪ್ರಿಮೀಯರ್ ಲೀಗ್ ಸೀಸನ್ 14 ರ ಎರಡನೇ ಚರಣ ಆರಂಭವಾಗಿದೆ ಮತ್ತು ಎಂದಿನಂತೆ ಕ್ರಿಕೆಟ್ ಪ್ರೇಮಗಳು ಐಪಿಎಲ್ ಒದಗಿಸುವ ಮನರಂಜನೆಯನ್ನು ಆಸ್ವಾದಿಸುತ್ತಿದ್ದಾರೆ. ಮುಕೇಶ್ ಅಂಬಾನಿ ಅವರ ಮುಂಬೈ ಇಂಡಿಯನ್ಸ್ ಟೂರ್ನಿಯ ಭಾಗವಾಗಿರೋದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಮುಕೇಶ್ ಪಕ್ಕಾ ಬಿಸಿನೆಸ್ಮನ್. ತಮ್ಮ ರಿಲಯನ್ಸ್ ಸಂಸ್ಥೆಗೆ ಲಾಭವಾಗುವ ಯಾವುದೇ ಅವಕಾಶವನ್ನು ಹೋಗಗೊಡುವುದಿಲ. ಕ್ರಿಕೆಟ್ ಸೀಸನ್ ಬಂತೆಂದರೆ ಅದನ್ನು ಎನ್ ಕ್ಯಾಶ್ ಮಾಡಿಕೊಳ್ಳವ ಪ್ರಯತ್ನ ಅವರದ್ದಾಗಿರುತ್ತದೆ.
ಕೋವಿಡ್ನಿಂದಾಗಿ ಸ್ಥಗಿತಗೊಂಡಿದ್ದ 14 ನೇ ಸೀಸನ್ ಎರಡನೇ ಚರಣ ಕಳೆದ ರವಿವಾರ ಯುಎಈನಲ್ಲಿ ಆರಂಭವಾವಾಗುತ್ತಿದಂತಯೇ, ತಮ್ಮ ಜಿಯೋ ಚಂದಾದಾರರಿಗೆ ಅವರು ಭರ್ಜರಿ ಪ್ರೀ ಪೇಡ್ ಮತ್ತು ಪೋಸ್ಟ್ ಪೇಡ್ ಆಫರ್ ಗಳನ್ನು ನೀಡುತ್ತಿದ್ದಾರೆ. ಜಿಯೋ ವಿವಿಧ ವಿವಿಧ ಪ್ಲ್ಯಾನ್ಗಳಲ್ಲಿ ನೀವು ಡಿಸ್ನಿ + ಹಾಟ್ ಸ್ಟಾರ್ ಸೇವೆಯನ್ನು ಉಚಿತವಾಗಿ ಪಡೆದುಕೊಳ್ಳಬಹುದು.
ಮಾಸಿಕ 499 ರೂ. ಗಳ ಪ್ಲ್ಯಾನ್ ತೆಗೆದುಕೊಳ್ಳಬಯಸುವವರಿಗೆ ಡಿಸ್ನಿ + ಹಾಟ್ ಸ್ಟಾರ್ ಒಂದು ವರ್ಷ ಉಚಿತವಾಗಿ ಲಭ್ಯವಾಗಲಿದೆ. ಇದರೊಂದಿಗೆ ಜಿ ಡಾಟಾ ಉಚಿತ ಕಾಲ್ಗಳು ಹಾಗೂ 100 ಎಸ್ ಎಮ್ ಎಸ್/ ದಿನ ಕೂಡ ಉಚಿತವಾಗಿ ಸಿಗಲಿವೆ. ಅದಲ್ಲದೆ ಹೆಚ್ಚುವರಿ 6 ಜಿಬಿ ಡಾಟಾದ ಆಶ್ವಾಸನೆ ಸಹ ಅಂಬಾನಿ ನೀಡಿದ್ದಾರೆ.
ಹಾಗೆಯೇ, 56-ದಿನ ಅವಧಿಯ 666 ರೂ. ಗಳ ಪ್ಲ್ಯಾನ್ ತೆಗೆದುಕೊಂಡರೆ 2 ಗ ಜಿಬಿ ಡಾಟಾ ಮತ್ತು ಒಂದು ವರ್ಷದ ಅವಧಿಗೆ ಡಿಸ್ನಿ + ಹಾಟ್ ಸ್ಟಾರ್ ಸೇವೆ ಉಚಿತವಾಗಿ ಸಿಗಲಿದೆ. ಮೇಲೆ ಹೇಳಿರುವ ಕಾಲ್ ಮತ್ತು ಎಸ್ ಎಮ್ ಎಮ್ ಆಫರ್ಗಳು ಸಹ ಸಿಗುತ್ತವೆ.
84-ದಿನ ಅವಧಿಯ ರೂ. 888 ಗಳ ಪ್ಲ್ಯಾನ್ ನಲ್ಲಿ 5 ಜಿಬಿ ಡಾಟಾ, ಒಂದು ವರ್ಷ ಅವಧಿಗೆ ಡಿಸ್ನಿ + ಮತ್ತು ಹಾಟ್ ಸ್ಟಾರ್ ಗಳೊಂದಿಗೆ ಕಾಲ್ ಮತ್ತು ಎಸ್ ಎಮ್ ಎಮ್ ಸೇವೆ ಉಚಿತ.
ಕೊನೆಯದಾಗಿ 2599 ವಾರ್ಷಿಕ ಪ್ಲ್ಯಾನ್ನಲ್ಲಿ 2 ಜಿಬಿ ಡಾಟಾ, ಒಂದು ವರ್ಷ ಅವಧಿಗೆ ಡಿಸ್ನಿ + ಮತ್ತು ಹಾಟ್ ಸ್ಟಾರ್ಗಳೊಂದಿಗೆ ಕಾಲ್ ಮತ್ತು ಎಸ್ ಎಮ್ ಎಮ್ ಸೇವೆ ಉಚಿತ. ಇದಲ್ಲದೆ, 10 ಜಿಬಿ ಡಾಟಾವನ್ನು ಹೆಚ್ಚುವರಿಯಾಗಿ ನೀಡುವ ಪ್ರಾಮಿಸ್ ಸಹ ಅಂಬಾನಿ ಮಾಡಿದ್ದಾರೆ.
ಇದನ್ನೂ ಓದಿ: Viral Video: ಬಾಲಕಿ ಶಾಲೆಗೆ ಹೊರಟಾಗ ಕಾವಲಾಗಿ ಹಿಂಬಾಲಿಸಿದ ಮೇಕೆ; ಹೃದಯಸ್ಪರ್ಶಿ ವಿಡಿಯೋವಿದು