Jog Falls Video: ಆಹಾ! ಭೋರ್ಗರೆವ ಜೋಗ ಜಲಪಾತದ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳಿ
ಜೋಗ ಜಲಪಾತದ ರಾಜ, ರಾಣಿ, ರೋರರ್, ರಾಕೆಟ್ ನಾಲ್ಕೂ ಕಡೆಗಳಲ್ಲಿ ನೀರು ರಭಸದಿಂದ ಚಿಮ್ಮುತ್ತಿದ್ದು, ಹಾಲ್ನೊರೆಯಂತೆ ಉಕ್ಕುತ್ತಿರುವ ಜಲಪಾತ ನೋಡುಗರನ್ನು ಕೈಬೀಸಿ ಕರೆಯುತ್ತಿದೆ. ಭಾರೀ ಮಳೆಯ ನಡುವೆಯೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಜೋಗದತ್ತ ಧಾವಿಸುತ್ತಿದ್ದು, ಮಳೆಗಾಲದ ಸೊಬಗನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಶಿವಮೊಗ್ಗ: ಕಳೆದ ಕೆಲ ದಿನಗಳಿಂದ ಮಲೆನಾಡು ಜಿಲ್ಲೆಗಳಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ಹಳ್ಳ, ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದಾಗಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಜಲಪಾತಗಳು ಧುಮ್ಮಿಕ್ಕಲಾರಂಭಿಸಿವೆ. ಶಿವಮೊಗ್ಗ ಜಿಲ್ಲೆಯಲ್ಲಿರುವ ವಿಶ್ವವಿಖ್ಯಾತ ಜೋಗ ಜಲಪಾತದಲ್ಲೂ ಭಾರೀ ಪ್ರಮಾಣದಲ್ಲಿ ನೀರು ಧುಮ್ಮಿಕ್ಕುತ್ತಿದ್ದು, ಜಲಪಾತದ ದೃಶ್ಯ ವೈಭವವನ್ನು ಕಂಡು ಪ್ರವಾಸಿಗರು ಮನಸೋತಿದ್ದಾರೆ.
ಜೋಗ ಜಲಪಾತದ ರಾಜ, ರಾಣಿ, ರೋರರ್, ರಾಕೆಟ್ ನಾಲ್ಕೂ ಕಡೆಗಳಲ್ಲಿ ನೀರು ರಭಸದಿಂದ ಚಿಮ್ಮುತ್ತಿದ್ದು, ಹಾಲ್ನೊರೆಯಂತೆ ಉಕ್ಕುತ್ತಿರುವ ಜಲಪಾತ ನೋಡುಗರನ್ನು ಕೈಬೀಸಿ ಕರೆಯುತ್ತಿದೆ. ಭಾರೀ ಮಳೆಯ ನಡುವೆಯೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಜೋಗದತ್ತ ಧಾವಿಸುತ್ತಿದ್ದು, ಮಳೆಗಾಲದ ಸೊಬಗನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಮಲೆನಾಡು ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ಆತಂಕ ಸೃಷ್ಟಿಸುತ್ತಿದ್ದು, ಕೆಲವೆಡೆ ಅನಾಹುತಕ್ಕೂ ಕಾರಣವಾಗಿದೆ. ಚಿಕ್ಕಮಗಳೂರು ತಾಲೂಕಿನ ಕ್ಯಾತನಬೀಡು ಗ್ರಾಮದಲ್ಲಿ ಧಾರಾಕಾರವಾಗಿ ಸುರಿದ ಮಳೆಗೆ ದನದ ಕೊಟ್ಟಿಗೆಯ ಗೋಡೆ ಕುಸಿದು ವ್ಯಕ್ತಿಯೊಬ್ಬರು ಮೃತಪಟ್ಟ ದಾರುಣ ಘಟನೆ ನಡೆದಿದೆ. ದನಗಳಿಗೆ ಮೇವು ಹಾಕಲೆಂದು ಕೊಟ್ಟಿಗೆ ಒಳಗೆ ಹೋಗಿದ್ದ ಬಸವೇಗೌಡ (65ವರ್ಷ) ಸಾವಿಗೀಡಾಗಿದ್ದು, ಒಂದು ಹಸು ಕೂಡಾ ಮಣ್ಣಿನಡಿ ಸಿಲುಕಿ ಕೊನೆಯುಸಿರೆಳೆದಿದೆ.
ಇದನ್ನೂ ಓದಿ:
ಜಿಲ್ಲೆ, ಸ್ವಕ್ಷೇತ್ರ ಬಿಟ್ಟು ಎಲ್ಲೂ ಹೋಗಬೇಡಿ: ಮಳೆ ನಿರ್ವಹಣೆಗೆ ಉಸ್ತುವಾರಿ ಸಚಿವರು, ಶಾಸಕರಿಗೆ ಸಿಎಂ ಯಡಿಯೂರಪ್ಪ ಸೂಚನೆ
(Jog Falls in Shivamogga is attracting tourists as its beauty enhanced with Heavy Rain)