Jog Falls: ಭಾರೀ ಮಳೆಯಿಂದ ತುಂಬಿ ನಿಂತ ಶರಾವತಿ; ಜೋಗ ಜಲಪಾತಕ್ಕೆ ಜೀವಕಳೆ
ಲಿಂಗನಮಕ್ಕಿ ಜಲಾಶಯದಲ್ಲಿನ ನೀರಿನ ಮಟ್ಟವು ಹೆಚ್ಚಾದ ಕಾರಣ ಅಣೆಕಟ್ಟು ಅಧಿಕಾರಿಗಳು 15,000 ಕ್ಯೂಸೆಕ್ ನೀರನ್ನು ಹೊರಹಾಕುತ್ತಿದ್ದಾರೆ. ಇಂದು ಬೆಳಿಗ್ಗೆಯ ಹೊತ್ತಿಗೆ ಲಿಂಗನಮಕ್ಕಿ ನೀರಿನ ಮಟ್ಟವು 1,816.2 ಅಡಿಗಳಷ್ಟಿತ್ತು. ಈ ಅಣೆಕಟ್ಟೆಯ ಪೂರ್ಣ ನೀರಿನ ಮಟ್ಟ 1,819 ಅಡಿ. ಗೇಟುಗಳಿಂದ ನೀರು ಹೊರಹೋಗುವ ಅದ್ಭುತ ನೋಟವನ್ನು ನೋಡಲು ಅಕ್ಕಪಕ್ಕದ ಹಳ್ಳಿಗಳ ಅನೇಕ ನಿವಾಸಿಗಳು ಅಣೆಕಟ್ಟಿನ ಬಳಿ ಜಮಾಯಿಸಿದರು. ಈ ಅಣೆಕಟ್ಟು 151.64 ಟಿಎಂಸಿ ಅಡಿ ನೀರನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ.
ಶಿವಮೊಗ್ಗ, ಆಗಸ್ಟ್ 19: ಮಲೆನಾಡು (Malnad) ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದೆ. ಹೀಗಾಗಿ, ಇಂದು ಕರ್ನಾಟಕ ವಿದ್ಯುತ್ ನಿಗಮ ಲಿಮಿಟೆಡ್ (ಕೆಪಿಸಿಎಲ್) ಅಧಿಕಾರಿಗಳು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಶರಾವತಿ ನದಿಗೆ (Sharavati River) ಅಡ್ಡಲಾಗಿ ನಿರ್ಮಿಸಲಾದ ರಾಜ್ಯದ ಪ್ರಮುಖ ಅಣೆಕಟ್ಟುಗಳಲ್ಲಿ ಒಂದಾದ ಲಿಂಗನಮಕ್ಕಿ ಅಣೆಕಟ್ಟಿನ (Linganamakki Dam) ಕ್ರೆಸ್ಟ್ ಗೇಟ್‌ಗಳನ್ನು ತೆರೆದು ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಿದರು. ಇದರಿಂದ ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ (Jog Falls) ಜೀವಕಳೆ ಬಂದಿದೆ. ಲಿಂಗನಮಕ್ಕಿ ಜಲಾಶಯ ಮತ್ತು ಅಣೆಕಟ್ಟನ್ನು ನಿರ್ವಹಿಸುವ ಕೆಪಿಸಿಎಲ್ ಅಧಿಕಾರಿಗಳು ಇಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಡ್ಯಾಂನ ಗೇಟ್‌ಗಳನ್ನು ತೆರೆಯಲು ಪ್ರಾರಂಭಿಸಿದರು. ಇದೀಗ ಎಲ್ಲಾ 11 ಗೇಟ್‌ಗಳನ್ನು ತೆರೆಯಲಾಗಿದೆ. ಹೀಗಾಗಿ, ಜೋಗ ಜಲಪಾತದ ವೈಭವ ಮತ್ತೆ ಮರುಕಳಿಸಿದೆ.
ಲಿಂಗನಮಕ್ಕಿ ಜಲಾಶಯದಲ್ಲಿನ ನೀರಿನ ಮಟ್ಟವು ಹೆಚ್ಚಾದ ಕಾರಣ ಅಣೆಕಟ್ಟು ಅಧಿಕಾರಿಗಳು 15,000 ಕ್ಯೂಸೆಕ್ ನೀರನ್ನು ಹೊರಹಾಕುತ್ತಿದ್ದಾರೆ. ಇಂದು ಬೆಳಿಗ್ಗೆಯ ಹೊತ್ತಿಗೆ ಲಿಂಗನಮಕ್ಕಿ ನೀರಿನ ಮಟ್ಟವು 1,816.2 ಅಡಿಗಳಷ್ಟಿತ್ತು. ಈ ಅಣೆಕಟ್ಟೆಯ ಪೂರ್ಣ ನೀರಿನ ಮಟ್ಟ 1,819 ಅಡಿ. ಗೇಟುಗಳಿಂದ ನೀರು ಹೊರಹೋಗುವ ಅದ್ಭುತ ನೋಟವನ್ನು ನೋಡಲು ಅಕ್ಕಪಕ್ಕದ ಹಳ್ಳಿಗಳ ಅನೇಕ ನಿವಾಸಿಗಳು ಅಣೆಕಟ್ಟಿನ ಬಳಿ ಜಮಾಯಿಸಿದರು. ಈ ಅಣೆಕಟ್ಟು 151.64 ಟಿಎಂಸಿ ಅಡಿ ನೀರನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ.
ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ