ಕಲಬುರ್ಗಿಯಲ್ಲಿ ಕನೇರಿ ಶ್ರೀಗಳ ಸಮಾವೇಶಕ್ಕೆ ತೀವ್ರ ವಿರೋಧ: ಬಸವ ತತ್ವ ಸಂಘಟನೆಗಳ ಆಕ್ರೋಶ, ಹಿಂದೂ ಮುಖಂಡರಿಂದಲೂ ಆಕ್ಷೇಪ
ಕಲಬುರಗಿಯಲ್ಲಿ ಆಯೋಜಿಸಲಾಗಿರುವ ಕನ್ಹೇರಿ ಕಾಡಸಿದ್ದೇಶ್ವರ ಸ್ವಾಮೀಜಿಗಳ ಬೃಹತ್ ಹಿಂದೂ ಸಮಾವೇಶಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಬಸವ ತತ್ವ ಮತ್ತು ಸಂವಿಧಾನ ಹಿತರಕ್ಷಣಾ ವೇದಿಕೆಯು ಇದನ್ನು ಮನುವಾದಿ ಸಮಾವೇಶವೆಂದು ಖಂಡಿಸಿದ್ದರೆ, ಸ್ಥಳೀಯ ಹಿಂದೂ ಸಂಘಟನೆಗಳು ಪ್ರಮುಖ ಸ್ವಾಮೀಜಿಗಳಿಗೆ ಆಹ್ವಾನವಿಲ್ಲದ ಕಾರಣ ಇದೊಂದು ಬಿಜೆಪಿ ಸಮಾವೇಶ ಎಂದು ಆರೋಪಿಸಿವೆ.
ಕಲಬುರಗಿ, ಸೆಪ್ಟೆಂಬರ್ 24: ಕಲಬುರ್ಗಿಯ ಎನ್‌ವಿ ಮೈದಾನದಲ್ಲಿ ಸೆಪ್ಟೆಂಬರ್ 27ರಂದು ಕನೇರಿ ಕಾಡಸಿದ್ದೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಆಯೋಜಿಸಲಾಗಿರುವ ಬಸವಾದಿ ಶಿವಶರಣರ ಬೃಹತ್ ಹಿಂದೂ ಮಹಾಸಮಾವೇಶಕ್ಕೆ ಸಿದ್ಧತೆಗಳು ನಡೆಯುತ್ತಿದ್ದರೆ, ಇನ್ನೊಂದೆಡೆ ತೀವ್ರ ವಿರೋಧ ವ್ಯಕ್ತವಾಗಿವೆ. ಹಿಂದೂ ಸಮಾವೇಶದ ಹೆಸರಿನಲ್ಲಿ ಬಸವಾದಿ ಶರಣರ ಹೆಸರನ್ನು ಬಳಸಬಾರದು ಎಂದು ಆಗ್ರಹಿಸಿ ಬಸವತತ್ವ ಮತ್ತು ಸಂವಿಧಾನ ಹಿತರಕ್ಷಣಾ ವೇದಿಕೆ ಪ್ರತಿಭಟನೆಗೆ ಕರೆ ನೀಡಿದ್ದು, ಕೆಲ ಹಿಂದೂ ಸಂಘಟನೆಗಳ ಮುಖಂಡರೇ ಈ ಸಮಾವೇಶವನ್ನು ಬಿಜೆಪಿಯ ಕೃಪಾಪೋಷಿತ ಕಾರ್ಯಕ್ರಮವೆಂದು ಕರೆದು ಜಿಲ್ಲೆಯ ಪ್ರಮುಖ ಮಠಾಧೀಶರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದ್ದಾರೆ. ಜೊತೆಗೆ, ಶರಣರ ವಚನಗಳನ್ನು ತಿರುಚುವ ಸಾಧ್ಯತೆಯಿದೆ ಎಂದು ಬಸವತತ್ವ ಅನುಯಾಯಿಗಳು ಆರೋಪಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
