ಕುವೆಂಪು ಹಾಗೂ ಕೆಂಪೇಗೌಡರನ್ನು ಹೀಯಾಳಿಸಿದ ರಿಷಿಕುಮಾರ ಸ್ವಾಮಿ ಮುಖಕ್ಕೆ ಮಸಿ ಬಳಿದರು ಕರವೇ ಕಾರ್ಯಕರ್ತರು

ಕುವೆಂಪು ಹಾಗೂ ಕೆಂಪೇಗೌಡರನ್ನು ಹೀಯಾಳಿಸಿದ ರಿಷಿಕುಮಾರ ಸ್ವಾಮಿ ಮುಖಕ್ಕೆ ಮಸಿ ಬಳಿದರು ಕರವೇ ಕಾರ್ಯಕರ್ತರು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 13, 2022 | 4:17 PM

ಸ್ವಾಮೀಜಿ ಹಟ ಮಾಡಲಾರಂಭಿಸಿದ ಬಳಿಕೆ ತಳ್ಳಾಟ ನೂಕಾಟ ಆಗಿದೆ. ಸ್ವಾಮೀಜಿ ಮೆತ್ತಗೆ ತಪ್ಪಿಸಿಕೊಳ್ಳುವ ಪ್ರಯತ್ನವನ್ನೂ ಮಾಡುತ್ತಾರೆ. ಆಗಲೇ ಕರವೇ ಸದಸ್ಯರು ಅವರನ್ನು ಹಿಡಿದು ಮುಖಕ್ಕೆ ಮಸಿ ಬಳಿಯುತ್ತಾರೆ.

Bengaluru: ರಿಷಿಕುಮಾರ ಸ್ವಾಮೀಜಿ (Rishikumar Swami) ಬಗ್ಗೆ ಯಾರಿಗೆ ಗೊತ್ತಿಲ್ಲ? ಅತಿರೇಕದ ಹೇಳಿಕೆಗಳನ್ನು ನೀಡಿ ಗೊಂದಲ ಸೃಷ್ಟಿಸುವುದು ಅವರ ವಾಡಿಕೆ. ರಾಷ್ಟ್ರಕವಿ ಕುವೆಂಪು (Kuvempu) ಮತ್ತು ನಾಡಪ್ರಭು ಕೆಂಪೇಗೌಡ (Kempegowda) ವಿರುದ್ಧವೂ ಬಾಯಿ ಹರಿಬಿಡುವ ದುಸ್ಸಾಹಸ ಇವರು ಮಾಡಿದ್ದಾರೆ. ಪ್ರಾಯಶಃ ಅವರಿಗೆ ಪ್ರಚಾರಪ್ರಿಯತೆಯ ರೋಗ ಇರಬಹುದು ಅನಿಸುತ್ತೆ ಮಾರಾಯ್ರೇ. ಯಾಕೆಂದರೆ, ಬೇರೆ ವಿವಾದಗಳು ತಲೆದೋರಿದಾಗಲೂ ಸ್ವಾಮೀಜಿ ಮಾಧ್ಯಮದವರ ಮುಂದೆ ತಮಗೆ ಅನಿಸಿದ್ದನ್ನೆಲ್ಲ ಹೇಳುತ್ತಾರೆ. ಕನ್ನಡ ಹೋರಾಟಗಾರರನ್ನು ಗುಂಡಿಕ್ಕಿ ಕೊಲ್ಲಬೇಕು ಅಂತ ಇವರು ಹೇಳುತ್ತಾರೆಂದರೆ, ದಶಕಗಳಿಂದ ಕನ್ನಡಪರ ಹೋರಾಟಗಳನ್ನು ಮಾಡಿಕೊಂಡು ಬಂದವರು ಸುಮ್ಮನಿರುತ್ತಾರೆಯೇ? ಶುಕ್ರವಾರ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಗಂಗಮ್ಮ ಗುಡಿಗೆ ಸ್ವಾಮೀಜಿ ಬಂದಾಗ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಅವರನ್ನು ಘೇರಾಯಿಸಿ ತರಾಟೆಗೆ ತೆಗೆದುಕೊಂಡರಲ್ಲದೆ ಮುಖಕ್ಕೆ ಮಸಿ ಬಳಿದರು.

ತಪ್ಪು ಮಾಡಿದಾಗ ಅದನ್ನು ಅಂಗೀಕರಿಸಿದರೆ ಜನ ಸುಮ್ಮನಾಗುತ್ತಾರೆ. ಅದರೆ ನಾನು ತಪ್ಪೇ ಮಾಡಿಲ್ಲ ಅಂತ ಸಾಧಿಸಿದರೆ ಕೋಪ ಬರದಿರುತ್ತದೆಯೇ? ಗಂಗಮ್ಮ ದೇವಸ್ಥಾನದಲ್ಲಿ ಆಗಿದ್ದು ಅದೇ. ಆಡಿರುವ ಮಾತುಗಳಿಗೆ ಕ್ಷಮೆ ಕೇಳಿ ಅಂತ ಕರವೇ ಸದಸ್ಯರು ಸ್ವಾಮೀಜಿಗೆ ಹೇಳಿದ್ದಾರೆ. ಅವರು ಅದನ್ನು ಮಾಡಿದ್ದರೆ ಮುಗಿದು ಹೋಗುತ್ತಿತ್ತು. ಆದರೆ, ಸ್ವಾಮೀಜಿ ವಾದಕ್ಕಿಳಿದು ಬಿಟ್ಟಿದ್ದಾರೆ. ನಾನು ಹೇಳೇ ಇಲ್ಲ, ನಾನು ಹಾಗೆ ಮಾತಾಡುವ ಚಾನ್ಸೇ ಇಲ್ಲ, ಕೋರ್ಟಿಗೆ ಬೇಕಾದರೂ ಹೋಗಿ ಅಂತೆಲ್ಲ ವಾದ ಮಾಡಲು ಆರಂಭಿಸಿದ್ದಾರೆ.

ಸ್ವಾಮೀಜಿ ಹಟ ಮಾಡಲಾರಂಭಿಸಿದ ಬಳಿಕೆ ತಳ್ಳಾಟ ನೂಕಾಟ ಆಗಿದೆ. ಸ್ವಾಮೀಜಿ ಮೆತ್ತಗೆ ತಪ್ಪಿಸಿಕೊಳ್ಳುವ ಪ್ರಯತ್ನವನ್ನೂ ಮಾಡುತ್ತಾರೆ. ಆಗಲೇ ಕರವೇ ಸದಸ್ಯರು ಅವರನ್ನು ಹಿಡಿದು ಮುಖಕ್ಕೆ ಮಸಿ ಬಳಿಯುತ್ತಾರೆ.

ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ತಳ್ಳಾಟದಲ್ಲಿ ಸ್ವಾಮೀಜಿಗಳ ಕಾಲಿಗೆ ಗಾಯವಾಗಿದೆ. ಆಸ್ಪತ್ರೆಯೊಂದರಲ್ಲಿ ಅವರು ಹೊರರೋಗಿಯಾಗಿ ಚಿಕಿತ್ಸೆ ಪಡೆದಿದ್ದಾರೆ.

ಇದನ್ನೂ ಓದಿ:   ಶಾಲೆಗಳಲ್ಲಿ ಹಿಜಾಬ್: ತ್ರಿವಳಿ ತಲಾಕ್ ನಿಷೇಧ ಮಾಡಿದಂತೆ ರಾಜ್ಯ ದೇಶದಲ್ಲಿ ಬುರ್ಖಾ ನಿಷೇಧಿಸಬೇಕು ಎಂದ ರಿಷಿ ಕುಮಾರ ಸ್ವಾಮೀಜಿ