ಶಿವಕುಮಾರ ಮತ್ತು ಪಾಟೀಲ ನಡುವಿನ ಮುನಿಸು ಮಾಯ; ಗುಡ್ ಜಾಬ್ ಅಂತ ಹೇಳಿ ಸುರ್ಜೆವಾಲಾರನ್ನು ಟ್ಯಾಗ್ ಮಾಡಿದರು ರಮ್ಯಾ
ರಾಜಸ್ತಾನದ ಉದುಯಪುರನಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪಕ್ಷದ ಚಿಂತನ್ ಶಿವಿರ್ ನಲ್ಲಿ ಶಿವಕುಮಾರ್ ಹೆಗಲ ಹಾಕಿ ನಗುತ್ತಾ ಮಾತನಾಡುತ್ತಿರುವ ಪಾಟೀಲರನ್ನು ನೋಡಿದರೆ ಕೇವಲ 48 ಗಂಟೆ ಮೊದಲು ಇವರು ಹಾವು-ಮುಂಗುಸಿಯಂತೆ ಅಡುತ್ತಿದ್ದರು ಅಂತ ನಂಬಲಾದೀತೆ?
ಇವರ ಮಾತುಗಳನ್ನು ಕೇಳಿ ಕೆಟ್ಟವರಾಗಿದ್ದು ನಾವು ಮಾರಾಯ್ರೇ. ಕೇವಲ ಎರಡು ದಿನಗಳ ಹಿಂದೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಮತ್ತು ಪಕ್ಷದ ಚುನಾವಣಾ ಸಮಿತಿ ಚೇರ್ಮನ್ ಎಮ್ ಬಿ ಪಾಟೀಲ (MB Patil) ನಡುವೆ ಮಾತಿನ ಯುದ್ಧ ನಡೆದಿತ್ತು. ಉನ್ನತ ಶಿಕ್ಷಣ ಸಚಿವ ಡಾ ಸಿಎನ್ ಅಶ್ವಥ ನಾರಾಯಣ (Dr CN Ashwath Narayan) ಪಾಟೀಲರ ಮನೆಗೆ ಭೇಟಿ ನೀಡಿದ್ದು ಶಿವಕುಮಾರಗೆ ಸರಿ ಕಂಡಿರಲಿಲ್ಲ. ರಕ್ಷಣೆ ಕೇಳಲು ಹೋಗಿರಬಹುದು ಎಂದು ಅವರು ಮಾಡಿದ ಕಾಮೆಂಟ್ ಪಾಟೀಲರನ್ನು ಕೆರಳಿಸಿತ್ತು. ಪತ್ರಿಕಾಗೋಷ್ಟಿ ಒಂದನ್ನು ನಡೆಸಿ ಪಾಟೀಲ ತಮ್ಮ ಅಸಮಾಧಾನವನ್ನು ಹೊರಹಾಕಿದರು. ಇದು ರಾಷ್ಟ್ರಮಟ್ಟದಲ್ಲೂ ಸುದ್ದಿಯಾಯಿತು. ಬಿಜೆಪಿ ಮತ್ತು ಜೆಡಿ(ಎಸ್) ಪಕ್ಷದ ನಾಯಕರು ಶಿವಕುಮಾರ-ಪಾಟೀಲ ನಡುವಿನ ಕೋಳಿ ಜಗಳದ ಬಗ್ಗೆ ಗೇಲಿ ಮಾಡತೊಡಗಿದರು. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಕರ್ನಾಟಕದ ಉಸ್ತುವಾರಿಯಾಗಿರುವವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಂಜಿತ್ ಸಿಂಗ್ ಸುರ್ಜೆವಾಲ ಜಗಳನಿರತ ಕರ್ನಾಟಕದ ನಾಯಕರ ನಡುವೆ ಸಂಧಾನವೇರ್ಪಡಿಸಿದ್ದಾರೆ.
ಅವರ ಸಂಧಾನ ಫಲ ನೀಡಿರುವುದು ಈ ಚಿತ್ರಗಳನ್ನು ನೋಡಿದರೆ ಗೊತ್ತಾಗುತ್ತದೆ. ರಾಜಸ್ತಾನದ ಉದುಯಪುರನಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪಕ್ಷದ ಚಿಂತನ್ ಶಿವಿರ್ ನಲ್ಲಿ ಶಿವಕುಮಾರ್ ಹೆಗಲ ಹಾಕಿ ನಗುತ್ತಾ ಮಾತನಾಡುತ್ತಿರುವ ಪಾಟೀಲರನ್ನು ನೋಡಿದರೆ ಕೇವಲ 48 ಗಂಟೆ ಮೊದಲು ಇವರು ಹಾವು-ಮುಂಗುಸಿಯಂತೆ ಅಡುತ್ತಿದ್ದರು ಅಂತ ನಂಬಲಾದೀತೆ? ಅದಕ್ಕೇ ಹೇಳಿದ್ದು ಇವರ ಹೇಳಿಕೆಗಳನ್ನು ಕೇಳಿ ನಾವು ಕೆಟ್ಟೆವು ಅಂತ!
ಡಿಕೆಶಿ-ಪಾಟೀಲ ನಡುವಿನ ಜಗಳ ಕಾವೇರಿದಾಗ ಶಿವಕುಮಾರ ವಿರುದ್ಧ ಟ್ವೀಟ್ ಮಾಡಿದ್ದ ಮಾಜಿ ಸಂಸದೆ ಮತ್ತು ಚಿತ್ರನಟಿ ರಮ್ಯಾ ಅವರು ಶುಕ್ರವಾರ ಗುಡ್ ಜಾಬ್ ಎಂದು ಟ್ವೀಟ್ ಮಾಡಿ ಸುರ್ಜೆವಾಲಾ ಅವರನ್ನು ಟ್ಯಾಗ್ ಮಾಡಿದ್ದಾರೆ ಮತ್ತು ರಾಜಸ್ತಾನದ ಉದಯಪುರನಲ್ಲಿ ಶಿವಕುಮಾರ ಹೆಗಲ ಮೇಲೆ ಕೈ ಹಾಕಿ ತಿರುಗುತ್ತಿರುವ ಪಾಟೀಲರ ಫೋಟೋವನ್ನು ಅನ್ನು ಪೋಸ್ಟ್ ಮಾಡಿದ್ದಾರೆ.
Good job @rssurjewala @KBByju ?? ?? https://t.co/JvzFi5hXnN
— Divya Spandana/Ramya (@divyaspandana) May 13, 2022