ಶಿವಕುಮಾರ ತಮ್ಮನ್ನು ತಾವು ವಿನಾಶದ ಅಂಚಿಗೆ ತಂದುಕೊಂಡಿದ್ದಾರೆ, ಅವರನ್ನು ಐಸೊಲೇಟ್ ಮಾಡಲಾಗಿದೆ: ಡಾ ಅಶ್ವಥ್ ನಾರಾಯಣ

ಶಿವಕುಮಾರ ಬೇರೆಯವರನ್ನು ನಿರ್ನಾಮ ಮಾಡಲು ಹೊರಟಿದ್ದರು ಆದರೆ ಅದೇ ಅವರಿಗೆ ತಿರುಗುಬಾಣವಾಗಿದೆ ಎನ್ನುವ ಅವರು, ಅಶ್ವಥ್ ನಾರಾಯಣರನ್ನು ತಡವಿಕೊಂಡವರು ತಾವೇ ನಾಶವಾಗುತ್ತಾರೆ ಅನ್ನೋದಿಕ್ಕೆ ಶಿವಕುಮಾರ ಅವರೇ ಒಂದು ಉತ್ತಮ ನಿದರ್ಶನ ಎಂದರು.

TV9kannada Web Team

| Edited By: Arun Belly

May 13, 2022 | 9:49 PM

Bengaluru: ಕಳೆದ ಕೆಲ ದಿನಗಳಿಂದ ನಿಸ್ತೇಜಿತರಂತೆ ಕಾಣುತ್ತಿದ್ದ ಉನ್ನತ ಶಿಕ್ಷಣ ಸಚಿವ ಡಾ ಸಿಎನ್ ಅಶ್ಥಥ್ ನಾರಾಯಣ (Dr CN Ashwath Narayan) ಅವರು ಶುಕ್ರವಾರದಂದು ಬೆಂಗಳೂರಲ್ಲಿ ಗೆಲುವಾಗಿ ಕಂಡರು. ಕಾಂಗ್ರೆಸ್ ನಾಯಕರೆಲ್ಲ ರಾಜಾಸ್ತಾನದ ಉದಯಪುರನಲ್ಲಿ (Udaipur) ಬ್ಯೂಸಿಯಾಗಿದ್ದರೆ ಜೆಡಿ(ಎಸ್) ನಾಯಕರು ನೆಲಮಂಗಲದಲ್ಲಿ (Nelamangala) ಆಯೋಜಿಸಲಾಗಿದ್ದ ಜನತಾ ಜಲಧಾರೆ ಸಂಕಲ್ಪ ಸಮಾರಂಭದಲ್ಲಿ ಮಗ್ನರಾಗಿದ್ದ ಕಾರಣ ಅಶ್ವಥ್ ನಾರಾಯಣ ವಿರುದ್ಧ ಟೀಕೆ ಮಾಡುವವರು ಯಾರೂ ಇರಲಿಲ್ಲ. ಅವರ ಮುಖದದಲ್ಲಿ ಮಂದಹಾಸ ಮೂಡಿದ್ದಕ್ಕೆ ಅದು ಕೂಡ ಕಾರಣವಾಗಿರಬಹುದು. ಪರಿಸ್ಥಿತಿಯ ಲಾಭ ಪಡೆಯಲಿಚ್ಛಿಸಿದ ಸಚಿವರು ಎರಡು ದಿನಗಳಿಂದ ಸ್ಥಗಿತಗೊಂಡಿದ್ದ ಮಾತುಗಳ ಸಮರಕ್ಕೆ ಮರುಚಾಲನೆ ನೀಡಿದರು.

ಕಾಂಗ್ರೆಸ್ ಕಾರ್ಯಕರ್ತೆ ಮತ್ತು ಚಿತ್ರನಟಿ ರಮ್ಯಾ ಅವರು ಡಿಕೆ ಶಿವಕುಮಾರ ಅವರನ್ನು ಟೀಕಿಸಿ ಮಾಡಿದ ಟ್ವೀಟ್ ಅನ್ನು ಅಶ್ವಥ್ ನಾರಾಯಣ ಅವರು ಅಸ್ತ್ರವನ್ನಾಗಿ ಬಳಸಲು ನಿರ್ಧರಿಸಿದಂತೆ. ಶಿವಕುಮಾರ ಬೇರೆಯವರನ್ನು ನಿರ್ನಾಮ ಮಾಡಲು ಹೊರಟಿದ್ದರು ಆದರೆ ಅದೇ ಅವರಿಗೆ ತಿರುಗುಬಾಣವಾಗಿದೆ ಎನ್ನುವ ಅವರು, ಅಶ್ವಥ್ ನಾರಾಯಣರನ್ನು ತಡವಿಕೊಂಡವರು ತಾವೇ ನಾಶವಾಗುತ್ತಾರೆ ಅನ್ನೋದಿಕ್ಕೆ ಶಿವಕುಮಾರ ಅವರೇ ಒಂದು ಉತ್ತಮ ನಿದರ್ಶನ ಎಂದರು.

ರಮ್ಯಾ ಅವರು ಅಶ್ವಥ್ ನಾರಾಯಣ ಪರ ಅನುಕಂಪ ವ್ಯಕ್ತಪಡಿಸಿರುವುದಕ್ಕೆ ಅವರನ್ನು ಟ್ರೋಲ್ ಮಾಡಲಾಗುತ್ತಿದೆ ಅಂತ ಅವರಿಗೆ ಮಾಧ್ಯಮದವರು ಹೇಳಿದಾಗ ಒಂದು ಹೆಣ್ಣುಮಗುವನ್ನು ಕಾಡಿಸಿ ಪೀಡಿಸಿದಕ್ಕೆ ಶಿವಕುಮಾರ ಈಗ ಅನುಭವಿಸುತ್ತಿದ್ದಾರೆ. ಪಕ್ಷದ ನಾಯಕರೇ ಅವರನ್ನು ಐಸೊಲೇಟ್ ಮಾಡಿದ್ದಾರೆ. ಶಿವಕುಮಾರ ತಮ್ಮ ನಾಶನವನ್ನು ತಾವೇ ತಂದುಕೊಂಡಿದ್ದಾರೆ ಎಂದು ಸಚಿವರು ಹೇಳಿದರು.

ಇದನ್ನೂ ಓದಿ:    ಶಿವಕುಮಾರ ಮತ್ತು ಪಾಟೀಲ ನಡುವಿನ ಮುನಿಸು ಮಾಯ; ಗುಡ್ ಜಾಬ್ ಅಂತ ಹೇಳಿ ಸುರ್ಜೆವಾಲಾರನ್ನು ಟ್ಯಾಗ್ ಮಾಡಿದರು ರಮ್ಯಾ

Follow us on

Click on your DTH Provider to Add TV9 Kannada