ಅನಿರುದ್ಧ್ ಜತ್ಕರ್ ಕಂಠದಲ್ಲಿ ‘ಓ ಸಾಥಿ ರೇ..’ ಹಾಡು; ಭೇಷ್ ಎಂದ ಅಭಿಮಾನಿಗಳು

Updated on: May 26, 2025 | 10:49 PM

ಅನಿರುದ್ಧ್ ಜತ್ಕರ್ ಅವರಿಗೆ ನಟನೆ ಜೊತೆಗೆ ಗಾಯನದಲ್ಲೂ ಆಸಕ್ತಿ. ಅಭಿಮಾನಿಗಳಿಗಾಗಿ ಅವರು ಈ ಗೀತೆ ಹಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಈ ವಿಡಿಯೋ ಹಂಚಿಕೊಂಡಿದ್ದಾರೆ. ‘ನಿಮ್ಮ ಧ್ವನಿ ತುಂಬ ಇಷ್ಟ ಆಗುತ್ತದೆ. ಹೀಗೆಯೇ ಹಾಡ್ತಾನೇ ಇರಿ’ ಎಂದು ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ. ನೀವೂ ವಿಡಿಯೋ ನೋಡಿ..

ನಟ ಅನಿರುದ್ಧ್ ಜತ್ಕರ್ (Anirudh Jatkar) ಅವರಿಗೆ ಗಾಯನದಲ್ಲೂ ತುಂಬ ಆಸಕ್ತಿ ಇದೆ. ಫ್ಯಾನ್ಸ್ ಸಲುವಾಗಿ ಅವರು ‘ಓ ಸಾಥಿ ರೇ..’ (O Saathi Re) ಸಾಂಗ್ ಹಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಕನ್ನಡದ ಕಿರುತೆರೆ ಮತ್ತು ಸಿನಿಮಾದಲ್ಲಿ ತಮ್ಮದೇ ಛಾಪು ಮೂಡಿಸಿರುವ ಅನಿರುದ್ಧ್ ಅವರು ಬಿಡುವಿನ ಸಮಯದಲ್ಲಿ ಈ ರೀತಿ ಮನರಂಜನೆ ನೀಡುತ್ತಾರೆ. ‘ನಿಮ್ಮ ಧ್ವನಿ ತುಂಬ ಇಷ್ಟ ಆಗುತ್ತದೆ. ನೀವು ಆಯ್ಕೆ ಮಾಡಿಕೊಳ್ಳುವ ಹಾಡು ಕೂಡ ಚೆನ್ನಾಗಿರುತ್ತದೆ. ಹೀಗೆಯೇ ಹಾಡ್ತಾನೇ ಇರಿ’ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.