ಶ್ರೀಮಂತರಿಗೂ ಶಿಕ್ಷೆ ಆಗುತ್ತೆ: ಪ್ರಜ್ವಲ್ ರೇವಣ್ಣ ಕೇಸ್ ಬಗ್ಗೆ ರಾಜವರ್ಧನ್ ಪ್ರತಿಕ್ರಿಯೆ
ಸಚಿನ್ ಚೆಲುವರಾಯಸ್ವಾಮಿ ನಟನೆಯ ‘ಕಮಲ್ ಶ್ರೀದೇವಿ’ ಸಿನಿಮಾಗೆ ರಾಜವರ್ಧನ್ ಅವರು ಕ್ರಿಯೇಟಿವ್ ಹೆಡ್ ಆಗಿದ್ದಾರೆ. ಪ್ರಸ್ತುತ ಸಮಾಜದಲ್ಲಿನ ಕೆಲವು ಘಟನೆಗಳ ಬಗ್ಗೆ ರಾಜವರ್ಧನ್ ಮಾತನಾಡಿದ್ದಾರೆ. ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ಆಗಿದೆ. ಈ ಬಗ್ಗೆ ರಾಜವರ್ಧನ್ ಪ್ರತಿಕ್ರಿಯೆ ನೀಡಿದ್ದಾರೆ.
‘ಕಮಲ್ ಶ್ರೀದೇವಿ’ ಸಿನಿಮಾದಲ್ಲಿ ಸಚಿನ್ ಚೆಲುವರಾಯ ಸ್ವಾಮಿ ಪ್ರಮುಖ ಪಾತ್ರ ಮಾಡಿದ್ದಾರೆ. ಈ ಚಿತ್ರಕ್ಕೆ ರಾಜವರ್ಧನ್ ಅವರು ಕ್ರಿಯೇಟಿವ್ ಹೆಡ್ ಆಗಿದ್ದಾರೆ. ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಕೆಲವು ಘಟನೆಗಳ ಬಗ್ಗೆ ರಾಜವರ್ಧನ್ ಅವರು ಮಾತನಾಡಿದ್ದಾರೆ. ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ (Prajwal Revanna) ಜೀವಾವಧಿ ಶಿಕ್ಷೆ ಆಗಿದೆ. ಈ ಬಗ್ಗೆ ರಾಜವರ್ಧನ್ ಪ್ರತಿಕ್ರಿಯೆ ನೀಡಿದ್ದಾರೆ. ‘ಯಾರೇ ತಪ್ಪು ಮಾಡಿದರೂ ಅದು ತಪ್ಪು. ಶ್ರೀಮಂತರು ತಪ್ಪು ಮಾಡಿದರೂ ಕೂಡ ಶಿಕ್ಷೆ ಆಗುತ್ತದೆ ಎಂಬುದು ಸಾಬೀತಾಗಿದೆ. ಇದು ಸಮಾಜಕ್ಕೆ ಸಿಕ್ಕಿರುವ ನ್ಯಾಯ’ ಎಂದು ರಾಜವರ್ಧನ್ (Rajavardan) ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
