ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾದ ಟೆನ್ನಿಸ್ ಕೃಷ್ಣ; ಖ್ಯಾತ ಹಾಸ್ಯ ನಟ ಈಗ ರಾಜಕಾರಣಿ
Tennis Krishna | Aam Aadmi Party: ಮುಂಬರುವ ಚುನಾವಣೆಗಾಗಿ ಎಲ್ಲ ಪಕ್ಷಗಳು ಸಿದ್ಧತೆ ಮಾಡಿಕೊಳ್ಳುತ್ತಿವೆ. ಈ ಹೊತ್ತಿನಲ್ಲಿ ನಟ ಟೆನ್ನಿಸ್ ಕೃಷ್ಣ ಅವರು ಆಮ್ ಆದ್ಮಿ ಪಕ್ಷದ ಜತೆ ಕೈ ಜೋಡಿಸಿದ್ದಾರೆ.
ನಟ ಟಿನ್ನಿಸ್ ಕೃಷ್ಣ (Tennis Krishna) ಅವರು ಈಗ ರಾಜಕೀಯಕ್ಕೆ ಕಾಲಿಟ್ಟಿದ್ದಾರೆ. ಚಿತ್ರರಂಗದಲ್ಲಿ ಯಶಸ್ಸು ಕಂಡ ನಂತರ ರಾಜಕಾರಣಕ್ಕೆ ಎಂಟ್ರಿ ನೀಡಿದ ಹಲವರ ಸಾಲಿಗೆ ಅವರು ಕೂಡ ಸೇರ್ಪಡೆ ಆಗಿದ್ದಾರೆ. ಆಮ್ ಆದ್ಮಿ ಪಕ್ಷದಿಂದ (Aam Aadmi Party) ಅವರು ಈಗ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಟೆನ್ನಿಸ್ ಕೃಷ್ಣ ಅವರನ್ನು ಆಮ್ ಆದ್ಮಿ ಪಕ್ಷದ (AAP) ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಬರಮಾಡಿಕೊಂಡಿದ್ದಾರೆ. ‘ಅಧಿಕಾರಕ್ಕಾಗಿ ಪಕ್ಷಕ್ಕೆ ಸೇರಿಲ್ಲ. ಜನಸೇವೆಯಾಗಿ ಸೇರಿದ್ದೇನೆ’ ಎಂದು ಟೆನ್ನಿಸ್ ಕೃಷ್ಣ ಹೇಳಿದ್ದಾರೆ.
Published on: Aug 04, 2022 01:42 PM