ಸತೀಶ್ ಜಾರಕಿಹೊಳಿ ವಿಷಯದಲ್ಲಿ ಡಿಕೆ ಶಿವಕುಮಾರ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು ಯಾಕೆಂದು ಗೊತ್ತಾಗಲಿಲ್ಲ!

|

Updated on: Jun 07, 2024 | 4:49 PM

ಮೂವರು ಡಿಸಿಎಂಗಳ ಪ್ರಸ್ತಾಪ ತೀವ್ರ ಚರ್ಚೆಗೆ ಬಂದಾಗ, ಶಿವಕುಮಾರ್ ಸಾರ್ವಜನಿಕವಾಗಿಯೂ ಸತೀಶ್ ರೊಂದಿಗೆ ಹೆಚ್ಚು ಸಲುಗೆಯಿಂದ ಬಿಹೇವ್ ಮಾಡಲು ಪ್ರಯತ್ನಿಸಿದ ದೃಶ್ಯಗಳನ್ನು ನಾವು ತೋರಿಸಿದ್ದೇವೆ. ವಿಧಾನ ಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಮ್ಮೆ ಸಂಪುಟ ಸಭೆ ಕರೆದಿದ್ದಾಗ, ಸೌಧದ ಆವರಣದಲ್ಲಿ ಶಿವಕುಮಾರ್ ಓಡಿಬಂದು ಸತೀಶ್ ತೆಕ್ಕೆಗೆ ಬಿದ್ದಿದ್ದರು.

ಬೆಂಗಳೂರು: ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಪ್ರಾಯಶಃ ಮೊದಲ ಬಾರಿಗೆ ಸಚಿವ ಮತ್ತು ಪಕ್ಷದ ಹಿರಿಯ ನಾಯಕ ಸತೀಶ್ ಜಾರಕಿಹೊಳಿ (Satish Jarkiholi) ವಿರುದ್ಧ ಕಟುವಾದ ಟೀಕೆ (harsh comment) ಮಾಡಿದರು. ಪತ್ರಕರ್ತರೊಬ್ಬರು ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿರುವುದಕ್ಕೆ ಪ್ರೊಡ್ಯೂಸರ್ (ಡಿಕೆ ಶಿವಕುಮಾರ್) ತೆಗೆದುಕೊಂಡ ತಪ್ಪು ನಿರ್ಧಾರಗಳು ಕಾರಣ ಎಂದು ಹೇಳಿದ್ದಾರೆ ಅಂತ ಗಮನಕ್ಕೆ ತಂದಾಗ ತೀಕ್ಷವಾಗಿ ಪ್ರತಿಕ್ರಿಯಿಸಿದ ಶಿವಕುಮಾರ್, ಅವರನ್ನು ಮೆಂಟಲ್ ಅಸ್ಪತ್ರೆಗೆ ಕಳಿಸೋಣ ಎಂದರು. ಸಾಮಾನ್ಯವಾಗಿ ಶಿವಕುಮಾರ್, ಸತೀಶ್ ವಿಷಯದಲ್ಲಿ ಕಾಮೆಂಟ್ ಮಾಡಲ್ಲ, ಇನ್ ಫ್ಯಾಕ್ಟ್ ಇವರು ಸಲುಗೆಯಿಂದ ವರ್ತಿಸಿದಾಗಲೂ ಲೋಕೋಪಯೋಗಿ ಸಚಿವನೊಂದಿಗೆ ಗಂಭೀರ ಮುಖಮುದ್ರೆಯೊಂದಿಗೆ ರಿಯಾಕ್ಟ್ ಮಾಡುತ್ತಾರೆ. ಮೂವರು ಡಿಸಿಎಂಗಳ ಪ್ರಸ್ತಾಪ ತೀವ್ರ ಚರ್ಚೆಗೆ ಬಂದಾಗ, ಶಿವಕುಮಾರ್ ಸಾರ್ವಜನಿಕವಾಗಿಯೂ ಸತೀಶ್ ರೊಂದಿಗೆ ಹೆಚ್ಚು ಸಲುಗೆಯಿಂದ ಬಿಹೇವ್ ಮಾಡಲು ಪ್ರಯತ್ನಿಸಿದ ದೃಶ್ಯಗಳನ್ನು ನಾವು ತೋರಿಸಿದ್ದೇವೆ. ವಿಧಾನ ಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಮ್ಮೆ ಸಂಪುಟ ಸಭೆ ಕರೆದಿದ್ದಾಗ, ಸೌಧದ ಆವರಣದಲ್ಲಿ ಶಿವಕುಮಾರ್ ಓಡಿಬಂದು ಸತೀಶ್ ತೆಕ್ಕೆಗೆ ಬಿದ್ದಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಲೋಕಸಭಾ ಚುನಾವಣೆಯಲ್ಲಿ ಕಳಾಹೀನ ಪ್ರದರ್ಶನ, ಆತ್ಮಾವಲೋಕನ ಶುರುಮಾಡಿದ ಡಿಕೆ ಶಿವಕುಮಾರ್