ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಲು ಬೆಂಗಳೂರಿಗೆ ಆಗಮಿಸಿದ ರಾಹುಲ್ ಗಾಂಧಿ; ಬರಮಾಡಿಕೊಂಡ ಸಿಎಂ, ಡಿಸಿಎಂ
ಮುಖ್ಯಮಂತ್ರಿ ಸಿದ್ದರಾಮಯ್ಯ , ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಚಿವರಾದ ಕೆಹೆಚ್ ಮುನಿಯಪ್ಪ, ಭೈರತಿ ಸುರೇಶ್ ಮೊದಲಾದವರು ಇಲ್ಲಿ ಕಾಣಿಸುತ್ತಾರೆ. ಡಿಕೆ ಶಿವಕುಮಾರ್ ಜೊತೆಗಿದ್ದಾಗ ಕಾರಿನ ಮುಂಭಾಗದಲ್ಲಿ ಆಸೀನರಾಗುವ ಸಿದ್ದರಾಮಯ್ಯ ಇವತ್ತು ರಾಹುಲ್ ಜೊತೆ ಹಿಂಬದಿಯ ಸೀಟ್ ನಲ್ಲಿ ಕೂತರು. ಶಿವಕುಮಾರ್, ಸಿದ್ದರಾಮಯ್ಯ ಕೂರುತ್ತಿದ್ದ ಸೀಟಲ್ಲಿ ಕೂತರು!
ಬೆಂಗಳೂರು: ಬಿಜೆಪಿ ಕಾಂಗ್ರೆಸ್ ನಾಯಕರ ಹೂಡಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಇಂದು ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದರು. ಎಐಸಿಸಿ ಕರ್ನಾಟಕ ಉಸ್ತುವಾರಿ ರಂದೀಪ್ ಸುರ್ಜೆವಾಲಾ ಅವರೊಂದಿಗೆ ರಾಹುಲ್ ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಅವರನ್ನು ಬರಮಾಡಿಕೊಳ್ಳಲು ಸಿದ್ದರಾಮಯ್ಯ ಸರ್ಕಾರ ಸಚಿವ ಸಂಪುಟದ ಅರ್ಧಭಾಗವೇ ಕೆಐಎಯಲ್ಲಿ ನೆರದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah), ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar), ಸಚಿವರಾದ ಕೆಹೆಚ್ ಮುನಿಯಪ್ಪ, ಭೈರತಿ ಸುರೇಶ್ ಮೊದಲಾದವರು ಇಲ್ಲಿ ಕಾಣಿಸುತ್ತಾರೆ. ಡಿಕೆ ಶಿವಕುಮಾರ್ ಜೊತೆಗಿದ್ದಾಗ ಕಾರಿನ ಮುಂಭಾಗದಲ್ಲಿ ಆಸೀನರಾಗುವ ಸಿದ್ದರಾಮಯ್ಯ ಇವತ್ತು ರಾಹುಲ್ ಜೊತೆ ಹಿಂಬದಿಯ ಸೀಟ್ ನಲ್ಲಿ ಕೂತರು. ಶಿವಕುಮಾರ್, ಸಿದ್ದರಾಮಯ್ಯ ಕೂರುತ್ತಿದ್ದ ಸೀಟಲ್ಲಿ ಕೂತರು!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬಿಜೆಪಿ ಹೂಡಿರುವ ಪ್ರಕರಣದಲ್ಲಿ ರಾಹುಲ್ ಗಾಂಧಿ ಹೆಸರು ವಿನಾಕಾರಣ ಸೇರಿಸಲಾಗಿದೆ: ಡಿಕೆ ಶಿವಕುಮಾರ್