ಕೋರ್ಟ್ ಮುಂದೆ ಪ್ರಜ್ವಲ್ ರೇವಣ್ಣ ಹಾಜರುಪಡಿಸಿ ಜೂನ್ 10ರವರೆಗೆ ಕಸ್ಟಡಿಯ ವಿಸ್ತರಣೆ ಕೋರಿದ ಎಸ್ಐಟಿ

|

Updated on: Jun 06, 2024 | 4:49 PM

ವಿಚಾರಣೆ ವೇಳೆಯಲ್ಲಿ ಅಧಿಕಾರಿಗಳಿಂದ ತನಗೆ ಯಾವುದೇ ತೊಂದರೆ ಆಗಿಲ್ಲವೆಂದು ಪ್ರಜ್ವಲ್ ಕೋರ್ಟ್ ಗೆ ತಿಳಿಸಿದರೂ ಹಲವಾರು ಅಂಶಗಳ ಬಗ್ಗೆ ಆರೋಪಿ ಬಾಯಿ ಬಿಡುತ್ತಿಲ್ಲವೆಂದು ಕೋರ್ಟ್ ಗೆ ತಿಳಿಸಲಾಗಿದೆ. ಸಂತ್ರಸ್ತೆ ಮತ್ತು ಪ್ರಜ್ವಲ್ ರನ್ನು ಮುಖಾಮುಖಿಯಾಗಿಸಿ ವಿಚಾರಣೆ ನಡೆಸಬೇಕಿದೆ ಎಂದು ಸಹ ಎಸ್ಐಟಿ ವಕೀಲ ಕೋರ್ಟ್ ಗೆ ತಿಳಿಸಿದ್ದಾರೆ.

ಬೆಂಗಳೂರು: ಲೈಂಗಿಕ ಅಪರಾಧವೆಸಗಿರುವ ಅರೋಪದಲ್ಲಿ ಬಂಧನಕ್ಕೊಳಗಾಗಿ ಎಸ್ಐಟಿ ವಶದಲ್ಲಿರುವ
ಸಂಸದ ಪ್ರಜ್ವಲ್ ರೇವಣ್ಣರನ್ನು (Prajwal Revanna), ಕೋರ್ಟ್ ವಿಶೇಷ ತನಿಖಾ ದಳಕ್ಕೆ (SIT) ನೀಡಿದ್ದ ಕಸ್ಟಡಿ ಇಂದು ಕೊನೆಗೊಂಡ ಕಾರಣ ಮತ್ತೊಮ್ಮೆ ನ್ಯಾಯಲುದ ಮುಂದೆ ಹಾಜರುಪಡಿಸಲಾಯಿತು. ಅವರನ್ನು ನಾಯಾಲಯಕ್ಕೆ ಕರೆದೊಯ್ಯುತ್ತಿರುವ ದೃಶ್ಯಗಳನ್ನು ಇಲ್ಲಿ ನೋಡಬಹುದು. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ, ಹೊಳೆನರಸೀಪುರ ಪ್ರಕರಣದಲ್ಲಿ (Holennarasipura case) ತನಿಖೆ ಇನ್ನೂ ಮುಗಿದಿರದ ಕಾರಣ ಪ್ರಜ್ವಲ್​ರನ್ನು ಜೂನ್ 10 ರವರೆಗೆ ಕಸ್ಟಡಿ ನೀಡುವಂತೆ ಎಸ್ಐಟಿ ಪರ ಎಸ್ ಎಸ್ ಪಿ ಅಶೋಕ್ ನಾಯಕ್ ಕೋರ್ಟ್ ಗೆ ಮನವಿ ಮಾಡಿದ್ದಾರೆ. ವಿಚಾರಣೆ ವೇಳೆಯಲ್ಲಿ ಅಧಿಕಾರಿಗಳಿಂದ ತನಗೆ ಯಾವುದೇ ತೊಂದರೆ ಆಗಿಲ್ಲವೆಂದು ಪ್ರಜ್ವಲ್ ಕೋರ್ಟ್ ಗೆ ತಿಳಿಸಿದರೂ ಹಲವಾರು ಅಂಶಗಳ ಬಗ್ಗೆ ಆರೋಪಿ ಬಾಯಿ ಬಿಡುತ್ತಿಲ್ಲವೆಂದು ಕೋರ್ಟ್ ಗೆ ತಿಳಿಸಲಾಗಿದೆ. ಸಂತ್ರಸ್ತೆ ಮತ್ತು ಪ್ರಜ್ವಲ್ ರನ್ನು ಮುಖಾಮುಖಿಯಾಗಿಸಿ ವಿಚಾರಣೆ ನಡೆಸಬೇಕಿದೆ ಎಂದು ಸಹ ಎಸ್ಐಟಿ ವಕೀಲ ಕೋರ್ಟ್ ಗೆ ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಲೋಕಸಭಾ ಚುನಾವಣೆ ಫಲಿತಾಂಶ: ಪ್ರಜ್ವಲ್ ರೇವಣ್ಣ ಗೆಲುವಿಗಾಗಿ ಶಾಸಕ ಸ್ವರೂಪ್ ನೇತೃತ್ವದಲ್ಲಿ ಕಾರ್ಯಕರ್ತರಿಂದ ದೇವಸ್ಥಾನದಲ್ಲಿ ಪೂಜೆ