ಶಿವಮೊಗ್ಗದಿಂದ ಹೊರಟ ಕೆಎಸ್ ಅರ್ ಟಿಸಿ ಬಸ್ಸಲ್ಲಿ ಮಹಿಳಾ ಹೋರಾಟ ಯಾತಕ್ಕಾಗಿ? ಸೀಟಿಗಾಗಿ!

|

Updated on: Jun 01, 2024 | 11:51 AM

ವಿಧಿಯಿಲ್ಲದೆ ನಿರ್ವಾಹಕ ಪೊಲೀಸರಿಗೆ ಫೋನ್ ಮಾಡಿದಾಗ ಒಂದಷ್ಟು ಮಹಿಳಾ ಪೊಲೀಸ್ ಕಾನ್ ಸ್ಟೇಬಲ್ ಗಳು ಬಂದು ಕಲಹನಿರತ ಮಹಿಳೆಯರನ್ನು ಗದರಿದಾಗಲೇ ಅವರು ಜಗಳ ನಿಂತು ಬಸ್ಸು ಮುಂದೆ ಚಲಿಸಿತು. ಕೆಳಗೆ ನಿಂತವರಲ್ಲಿ ಯಾರೋ ಕೂಗುತ್ತಿದ್ದರು: ಯಾತಕ್ಕಾಗಿ ಹೋರಾಟ, ಸೀಟಿಗಾಗಿ ಹೋರಾಟ!

ಶಿವಮೊಗ್ಗ: ನಗರ ಬಸ್ ನಿಲ್ದಾಣದಿಂದ ಸಾಗರದ ಕಡೆ ನಿನ್ನೆ ರಾತ್ರಿ ಹೊರಟ ಬಸ್ಸಲ್ಲಿ ಮಹಿಳೆಯರ ನಡುವೆ ಸೀಟಿಗಾಗಿ ಜಗಳ ಮಾರಾಯ್ರೇ. ಸಿದ್ದರಾಮಯ್ಯ ಸರ್ಕಾರ ಶಕ್ತಿ ಯೋಜನೆ (Shakti scheme) ಜಾರಿಗೊಳಿಸಿದ ಬಳಿಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಬಸ್ ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಮಿತಿಮಿರಿದೆ ಅಂತ ರಾಜ್ಯದ ಎಲ್ಲ ಭಾಗಗಳಿಂದ ಕೇಳಿಬರುತ್ತಿರುವ ಮಾತು. ಧರ್ಮಸ್ಥಳದ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆ ಅವರು ಮೊನ್ನೆ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ, ಶಕ್ತಿ ಯೋಜನೆ ಆರಂಭಗೊಂಡ ಬಳಿಕ ಧರ್ಮಸ್ಥಳಕ್ಕೆ ಬರುವ ಮಹಿಳಾ ಯಾತ್ರಾರ್ಥಿಗಳ ಸಂಖ್ಯೆ ಬಹಳ ಹೆಚ್ಚಿದೆ ಎಂದು ಹೇಳಿದ್ದಾರೆ. ಓಕೆ, ಜಗಳಕ್ಕೆ ಬರುವ, ಇಬ್ಬರು ಮಹಿಳಾಮಣಿಯರು ಸೀಟಿಗಾಗಿ ಕಿತ್ತಾಡುವುದನ್ನು ಬೇರೆ ಸೀಟುಗಳಲ್ಲಿ ತಮ್ಮ ತಂದೆ ತಾಯಿಗಳ ಮಡಿಲಲ್ಲಿದ್ದ ಚಿಕ್ಕ ಚಿಕ್ಕ ಮಕ್ಕಳು ಕಕ್ಕಾಬಿಕ್ಕಿಯಾಗಿ ನೋಡುತ್ತಿವೆ. ಬಸ್ ಚಾಲಕ ಮತ್ತು ನಿರ್ವಾಹಕ ಸಾಕು ನಿಲ್ಲಿಸ್ರಮ್ಮಾ ಅಂತ ಹೇಳಿದರೂ ಜಗಳ ಮಾತ್ರ ನಿಲ್ಲಲಿಲ್ಲ. ವಿಧಿಯಿಲ್ಲದೆ ನಿರ್ವಾಹಕ ಪೊಲೀಸರಿಗೆ ಫೋನ್ ಮಾಡಿದಾಗ ಒಂದಷ್ಟು ಮಹಿಳಾ ಪೊಲೀಸ್ ಕಾನ್ ಸ್ಟೇಬಲ್ ಗಳು ಬಂದು ಕಲಹನಿರತ ಮಹಿಳೆಯರನ್ನು ಗದರಿದಾಗಲೇ ಅವರು ಜಗಳ ನಿಂತು ಬಸ್ಸು ಮುಂದೆ ಚಲಿಸಿತು. ಕೆಳಗೆ ನಿಂತವರಲ್ಲಿ ಯಾರೋ ಕೂಗುತ್ತಿದ್ದರು: ಯಾತಕ್ಕಾಗಿ ಹೋರಾಟ, ಸೀಟಿಗಾಗಿ ಹೋರಾಟ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Shakti Yojana: ಶಕ್ತಿ ಯೋಜನೆಯಿಂದ ಔದ್ಯೋಗಿಕ ಕ್ಷೇತ್ರದಲ್ಲಿ ಮಹಿಳೆಯರ ಪಾಲುದಾರಿಕೆ, ಜಿಎಸ್​ಟಿ ಸಂಗ್ರಹ ಹೆಚ್ಚಳ