Shakti Yojana: ಶಕ್ತಿ ಯೋಜನೆಯಿಂದ ಔದ್ಯೋಗಿಕ ಕ್ಷೇತ್ರದಲ್ಲಿ ಮಹಿಳೆಯರ ಪಾಲುದಾರಿಕೆ, ಜಿಎಸ್​ಟಿ ಸಂಗ್ರಹ ಹೆಚ್ಚಳ

ಶಕ್ತಿ ಯೋಜನೆಯಿಂದ ಜಿಎಸ್​​ಟಿ ಸಂಗ್ರಹ ಹೆಚ್ಚಿದ್ದು, ಔದ್ಯೋಗಿಕ ಕ್ಷೇತ್ರದಲ್ಲಿ ಶೇ 25.1ನಿಂದ 30.2ರಷ್ಟು ಮಹಿಳೆಯ ಪಾಲುದಾರಿಕೆ ಹೊಂದಿದೆ. ಇದು ಬಿಟ್ಟಿ ಭಾಗ್ಯವಲ್ಲ ಸಮಾಜದಲ್ಲಿ ಸರ್ಕಾರ ಹೂಡಿರುವ ಬಂಡವಾಳ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಟ್ವೀಟ್​ ಮಾಡಿದ್ದಾರೆ. ಆ ಮೂಲಕ ಶಕ್ತಿ ಉಚಿತ ಯೋಜನೆ ಎಂದು ಮೂಗು ಮುರಿಯುವ ಬಿಜೆಪಿಗೆ ಟಾಂಗ್ ನೀಡಿದ್ದಾರೆ.

Shakti Yojana: ಶಕ್ತಿ ಯೋಜನೆಯಿಂದ ಔದ್ಯೋಗಿಕ ಕ್ಷೇತ್ರದಲ್ಲಿ ಮಹಿಳೆಯರ ಪಾಲುದಾರಿಕೆ, ಜಿಎಸ್​ಟಿ ಸಂಗ್ರಹ ಹೆಚ್ಚಳ
ಶಕ್ತಿ ಯೋಜನೆಯಿಂದ ಔದ್ಯೋಗಿಕ ಕ್ಷೇತ್ರದಲ್ಲಿ ಮಹಿಳೆಯರ ಪಾಲುದಾರಿಕೆ, ಜಿಎಸ್​ಟಿ ಸಂಗ್ರಹ ಹೆಚ್ಚಳ
Follow us
|

Updated on:May 29, 2024 | 9:28 PM

ಬೆಂಗಳೂರು, ಮೇ 29: ರಾಜ್ಯ ಕಾಂಗ್ರೆಸ್​ ಸರ್ಕಾರ ಘೋಷಣೆ ಮಾಡಿರುವ ಐದು ಗ್ಯಾರಂಟಿಗಳಲ್ಲಿ ಉಚಿತ ಬಸ್​ ಪ್ರಯಾಣದ ಶಕ್ತಿ ಯೋಜನೆ (Shakti Yojana) ಕೂಡ ಒಂದು. ಮೊದಮೊದಲು ಈ ಯೋಜನೆ ಜಾರಿಯಾದಾಗ ಹೆಚ್ಚಿನ ಸಂಖ್ಯೆಯಲ್ಲಿ ಮಳೆಯರೇ ಓಡಾಡುತ್ತಿದ್ದರು. ಕೆಲವೊಮ್ಮೆ ಸೀಟು ಸಿಗದಿದ್ದಾಗ ಮಹಿಳೆಯ (Woman) ಮಧ್ಯೆ ದೊಡ್ಡ ದೊಡ್ಡ ಜಗಳಗಳೇ ಆಗಿವೆ. ಈ ಉಚಿತ ಬಸ್​ ಯೋಜನೆ ಬಗ್ಗೆ ಬಿಜೆಪಿ ಸಕಾಷ್ಟು ಟೀಕೆ ಮಾಡಿತ್ತು. ಸದ್ಯ ಈಗ ಇದೇ ಶಕ್ತಿ ಯೋಜನೆಯಿಂದ ಜಿಎಸ್​ಟಿ ಸಂಗ್ರಹ ಮತ್ತು ಮಹಿಳೆಯರ ಪಾಲುದಾರಿಕೆ ಶೇ 25.1ನಿಂದ 30.2ಗೆ ಹೆಚ್ಚಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಈ ಕುರಿತಾಗಿ ಟ್ವೀಟ್ ಮಾಡಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಶಕ್ತಿ ಉಚಿತ ಯೋಜನೆ ಎಂದು ಮೂಗು ಮುರಿಯುವವರ ಗಮನಕ್ಕೆ! ಶಕ್ತಿ ಯೋಜನೆಯಿಂದ ಜಿಎಸ್​​ಟಿ ಸಂಗ್ರಹ ಹೆಚ್ಚಿದ್ದು, ಔದ್ಯೋಗಿಕ ಕ್ಷೇತ್ರದಲ್ಲಿ ಶೇ 25.1ನಿಂದ 30.2ರಷ್ಟು ಮಹಿಳೆಯ ಪಾಲುದಾರಿಕೆ ಹೊಂದಿದೆ. ಇದು ಬಿಟ್ಟಿ ಭಾಗ್ಯವಲ್ಲ ಸಮಾಜದಲ್ಲಿ ಸರ್ಕಾರ ಹೂಡಿರುವ ಬಂಡವಾಳ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಆ ಮೂಲಕ ಶಕ್ತಿ ಉಚಿತ ಯೋಜನೆ ಎಂದು ಮೂಗು ಮುರಿಯುವ ಬಿಜೆಪಿಗೆ ಟಾಂಗ್​ ನೀಡಿದ್ದಾರೆ.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಟ್ವೀಟ್​ 

ಕರ್ನಾಟಕ ಕಾಂಗ್ರೆಸ್ ನಮ್ಮ ನಾಗರಿಕರ ಕಲ್ಯಾಣವನ್ನು ಹೆಚ್ಚಿಸಲು ಬದ್ಧವಾಗಿದೆ. ಅದರಲ್ಲೂ ವಿಶೇಷವಾಗಿ ತಮ್ಮ ಕುಟುಂಬಗಳನ್ನು ಕಾಳಜಿ ವಹಿಸುವ ಆರ್ಥಿಕ ಸಬಲೀಕರಣಕ್ಕೆ ಅರ್ಹರಾಗಿರುವ ಕಠಿಣ ಪರಿಶ್ರಮಿ ಮಹಿಳೆಯರಿಗೆ. ಶಕ್ತಿ ಯೋಜನೆ; ಸಬಲೀಕರಣಗೊಂಡ ಮಹಿಳೆಯರ ಪಯಣ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಶಕ್ತಿ ಯೋಜನೆ: ಸರ್ಕಾರಿ ಬಸ್​ಗಳಲ್ಲಿ ಈವರೆಗೆ 200 ಕೋಟಿ ಮಹಿಳೆಯರು ಪ್ರಯಾಣ

ಶಕ್ತಿ ಯೋಜನೆ ಜಾರಿ ಬಳಿಕ ಸದ್ಬಳಕೆ ಮಾಡಿಕೊಳ್ಳುತ್ತಿದ್ದ ಮಹಿಳೆಯರು ಫ್ರೀ ಸವಾರಿಯನ್ನು ಮತ್ತಷ್ಟು ಜೋರು ಮಾಡಿದ್ದರು. ಯೋಜನೆ ಆರಂಭವಾದ 18ನೇ ದಿನಕ್ಕೆ ಒಟ್ಟು 8 ಕೋಟಿಗೂ ಹೆಚ್ಚು ಮಹಿಳೆಯರು ಫ್ರೀಯಾಗಿ ಬಸ್​ನಲ್ಲಿ ಸಂಚಾರ ಮಾಡಿದ್ದರು. 2024ರ ಏಪ್ರಿಲ್​ ಅಂತ್ಯದವರೆಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ಬಸ್​​ನಲ್ಲಿ ಬರೊಬ್ಬರಿ 200 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ.

ಗುಂಪು ಗುಂಪಾಗಿ ಸಾಕಷ್ಟು ಮಹಿಳೆಯರು ಹೆಚ್ಚಾಗಿ ದೇವಸ್ಥಾನಗಳಿಗೆ ಭೇಟಿ ನೀಡಿದ್ದರು. ಇದರಿಂದ ದೇವಸ್ಥಾನದ ಹುಂಡಿಗಳು ಭರ್ತಿ ಆಗಿದ್ದವು. ಅಷ್ಟೇ ಅಲ್ಲದೇ ಧಾರ್ಮಿಕ ದತ್ತಿ ಇಲಾಖೆಗೂ ಸಾಕಷ್ಟು ಹಣ ಹರಿದುಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:25 pm, Wed, 29 May 24

ತಾಜಾ ಸುದ್ದಿ