ಭಟ್ಕಳ: ಮುಸ್ಲಿಂ ಜನಪ್ರತಿನಿಧಿಯಿಂದ ಭುವನೇಶ್ವರಿ ಭಾವಚಿತ್ರಕ್ಕೆ ಅಗೌರವ
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಸ್ಲಿಂ ಜನಪ್ರತಿನಿಧಿಯೊಬ್ಬರು ಕನ್ನಡಾಂಬೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲು ನಿರಾಕರಿಸಿ ಅಗೌರವ ತೋರಿದ್ದಾರೆ. ಪುಷ್ಪಾರ್ಚನೆಗೆ ಮನವಿ ಮಾಡಿದರೂ ಕೈಕಟ್ಟಿ ನಿಂತಿರುವ ವಿಡಿಯೋ ಈಗ ವೈರಲ್ ಆಗುತ್ತಿದ್ದು, ಚರ್ಚೆಗೆ ಗ್ರಾಸವಾಗಿದೆ.
ಕಾರವಾರ, ನವೆಂಬರ್ 1: ಭಟ್ಕಳ ತಾಲೂಕು ಕ್ರಿಡಾಂಗಣದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಸ್ಲಿಂ ಜನಪ್ರತಿನಿಧಿಯೊಬ್ಬರು ಭುವನೇಶ್ವರಿ ಭಾವಚಿತ್ರಕ್ಕೆ ಅಗೌರವ ತೋರಿದ್ದಾರೆ. ಭಟ್ಕಳ ಜಾಲಿ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಖಾಜೀಯಾ ಅಪ್ಸಾ ಹುಜೈಫಾ ಕನ್ನಡಾಂಬೆಗೆ ಪುಷ್ಪ ನಮನ ಸಲ್ಲಿಸಲು ನಿರಾಕರಣೆ ಮಾಡಿದ್ದಾರೆ. ಭಟ್ಕಳ ಎಸಿ ಎರಡು ಬಾರಿ ಪುಷ್ಪ ನಮನ ಸಲ್ಲಿಸಲು ಹೇಳಿದರೂ ಸಹಿತ ಪುಷ್ಪ ನಮನ ಸಲ್ಲಿಸಲು ಒಪ್ಪದೆ ಸುಮ್ಮನೆ ಕೈ ಕಟ್ಟಿ ನಿಂತಿದ್ದಾರೆ. ಬಳಿಕ ಭಟ್ಕಳ ಎಸಿ ಅನಿವಾರ್ಯವಾಗಿ ತಾವೇ ಎರಡು ಬಾರಿ ಪುಷ್ಪ ನಮನ ಸಲ್ಲಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Nov 01, 2024 02:17 PM
Latest Videos