AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

13 ಗಡಿ ಗ್ರಾಮಗಳ ಕನ್ನಡಿಗರ ಮಕ್ಕಳ ಭವಿಷ್ಯ ಬರ್ಬಾದ್.. ಯಡಿಯೂರಪ್ಪ ಗೆಜೆಟ್​​ಗೂ ಕಿಮ್ಮತ್ತಿಲ್ಲ!

ನವೆಂಬರ್ ತಿಂಗಳು ಬಂತಂದ್ರೆ ಸಾಕು ಕರ್ನಾಟಕದಾದ್ಯಂತ ಕನ್ನಡ ಡಿಂಡಿಮ ಬಾರಿಸಲಾಗುತ್ತದೆ. ಎಲ್ಲೆಡೆ ಅದ್ಧೂರಿ ರಾಜ್ಯೋತ್ಸವ ಆಚರಿಸಲಾಗುತ್ತೆ. ಆದ್ರೆ ಗಡಿನಾಡು ಕನ್ನಡಿಗರ ಮಕ್ಕಳ ಭವಿಷ್ಯ ಮಾತ್ರ ನಿತ್ಯವೂ ಕಮರಿ ಹೋಗುತ್ತಿದೆ. ತೆಲಂಗಾಣ ರಾಜ್ಯದ ಮೆಹಬೂಬ ನಗರ ಜಿಲ್ಲೆಯ ಕೃಷ್ಣ ಹೋಬಳಿ ವ್ಯಾಪ್ತಿಯ 13 ಗಡಿನಾಡು ಗ್ರಾಮಗಳಲ್ಲಿ 10 ಪ್ರಾಥಮಿಕ ಶಾಲೆ, ಒಂದು ಪ್ರೌಢ ಶಾಲೆ ಹಾಗೂ ಎರಡು ಹಿರಿಯ ಪ್ರಾಥಮಿಕ ಶಾಲೆಗಳನ್ನ ನಡೆಸಲಾಗ್ತಿದೆ. ಈ ಶಾಲೆಗಳಿಗೆ ಕನ್ನಡ ಪಠ್ಯ ಪುಸ್ತಕಗಳನ್ನ ರಾಯಚೂರು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯೇ ಪೂರೈಸುತ್ತಿದೆ. […]

13 ಗಡಿ ಗ್ರಾಮಗಳ ಕನ್ನಡಿಗರ ಮಕ್ಕಳ ಭವಿಷ್ಯ ಬರ್ಬಾದ್.. ಯಡಿಯೂರಪ್ಪ ಗೆಜೆಟ್​​ಗೂ ಕಿಮ್ಮತ್ತಿಲ್ಲ!
ಸಾಧು ಶ್ರೀನಾಥ್​
|

Updated on:Nov 24, 2020 | 12:10 PM

Share

ನವೆಂಬರ್ ತಿಂಗಳು ಬಂತಂದ್ರೆ ಸಾಕು ಕರ್ನಾಟಕದಾದ್ಯಂತ ಕನ್ನಡ ಡಿಂಡಿಮ ಬಾರಿಸಲಾಗುತ್ತದೆ. ಎಲ್ಲೆಡೆ ಅದ್ಧೂರಿ ರಾಜ್ಯೋತ್ಸವ ಆಚರಿಸಲಾಗುತ್ತೆ. ಆದ್ರೆ ಗಡಿನಾಡು ಕನ್ನಡಿಗರ ಮಕ್ಕಳ ಭವಿಷ್ಯ ಮಾತ್ರ ನಿತ್ಯವೂ ಕಮರಿ ಹೋಗುತ್ತಿದೆ.

ತೆಲಂಗಾಣ ರಾಜ್ಯದ ಮೆಹಬೂಬ ನಗರ ಜಿಲ್ಲೆಯ ಕೃಷ್ಣ ಹೋಬಳಿ ವ್ಯಾಪ್ತಿಯ 13 ಗಡಿನಾಡು ಗ್ರಾಮಗಳಲ್ಲಿ 10 ಪ್ರಾಥಮಿಕ ಶಾಲೆ, ಒಂದು ಪ್ರೌಢ ಶಾಲೆ ಹಾಗೂ ಎರಡು ಹಿರಿಯ ಪ್ರಾಥಮಿಕ ಶಾಲೆಗಳನ್ನ ನಡೆಸಲಾಗ್ತಿದೆ. ಈ ಶಾಲೆಗಳಿಗೆ ಕನ್ನಡ ಪಠ್ಯ ಪುಸ್ತಕಗಳನ್ನ ರಾಯಚೂರು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯೇ ಪೂರೈಸುತ್ತಿದೆ. ಆದ್ರೆ ಇಲ್ಲಿ 10ನೇ ತರಗತಿವರೆಗೆ ಮಾತ್ರ ಅಭ್ಯಾಸ ಮಾಡಲು ಅವಕಾಶವಿದೆ. ಪಿಯುಸಿ, ಐಟಿಐ, ಡಿಪ್ಲೋಮಾ‌ ಕೋರ್ಸ್​ಗಳು ಸೇರಿದಂತೆ ಉನ್ನತ ಶಿಕ್ಷಣಕ್ಕೆ ಅವಕಾಶ ನೀಡಲಾಗ್ತಿಲ್ಲ. ಇನ್ನು ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳಿಗೆ ತೆಲಂಗಾಣದಲ್ಲಿ 10ನೆ ತರಗತಿ ನಂತರ ಪಿಯುಸಿ, ಐಟಿಐ, ಡಿಪ್ಲೋಮಾ ಕೋರ್ಸ್​ಗಳಿಗೆ ಸೇರಲು ಅವಕಾಶ ನೀಡಲಾಗುತ್ತಿಲ್ಲ. ತೆಲಂಗಾಣದ ಗಡಿನಾಡು ಗ್ರಾಮಗಳಲ್ಲಿ ಓದಿದವರು ಎಂಬ ನೆಪವೊಡ್ಡಿ ಗಡಿನಾಡು ಕನ್ನಡಿಗರ ಮಕ್ಕಳಿಗೆ ಕರ್ನಾಟಕದಲ್ಲೂ ಸಹ ಯಾವ ಜಿಲ್ಲೆಯಲ್ಲೂ ಉನ್ನತ ಶಿಕ್ಷಣಕ್ಕೆ ಪ್ರವೇಶ ನೀಡಲಾಗುತ್ತಿಲ್ಲ.

13 ಗಡಿ ನಾಡು ಕನ್ನಡಿಗರ ಮಕ್ಕಳ ಬದುಕು ಪ್ರತಿ ವರ್ಷವೂ ಅತಂತ್ರ ಸ್ಥಿತಿಗೆ ತಲುಪುತ್ತಿದೆ. ಹತ್ತನೇ ತರಗತಿ ನಂತರ ಅನೇಕ ಮಕ್ಕಳು ವಿದ್ಯಾಭ್ಯಾಸ ಮೊಟಕುಗೊಳಿಸಿ ಕೂಲಿ ಮಾಡಿ ಬದುಕುವಂತಾಗಿದೆ. ಸರ್ಕಾರ ಈಗಲಾದ್ರೂ ಎಚ್ಚೆತ್ತುಕೊಂಡು ಗಡಿನಾಡು ಕನ್ನಡಿಗರ ಮಕ್ಕಳಿಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪಿಯುಸಿ ಸೇರಿದಂತೆ ಎಲ್ಲಾ ಉನ್ನತ ಶಿಕ್ಷಣಕ್ಕೆ ಅವಕಾಶ ನೀಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬುದು ನಮ್ಮ ಮನವಿ -ಅಮರ್​ ದೀಕ್ಷಿತ್, ಉಪಾಧ್ಯಕ್ಷ, ಗಡಿನಾಡು ಕನ್ನಡಿಗರ ಸಂಘ, ಕೃಷ್ಣ-ಮೆಹಬೂಬ ನಗರ ಜಿಲ್ಲೆ, ತೆಲಂಗಾಣ ಹೀಗಾಗಿ, 13 ಗಡಿ ಗ್ರಾಮಗಳ‌ ಮಕ್ಕಳ ವಿದ್ಯಾಭ್ಯಾಸ ಎಸ್​ಎಸ್​ಎಲ್​ಸಿಗೆ ಮಾತ್ರ ಸೀಮಿತವಾಗಿದೆ. ಇದರಿಂದಾಗಿ ಪ್ರತಿಭಾನ್ವಿತ ಗಡಿನಾಡು ಕನ್ನಡಿಗರ ಮಕ್ಕಳ ಭವಿಷ್ಯ ಕಮರಿ ಹೋಗ್ತಿದೆ. ಈ ಸಮಸ್ಯೆಯ ಗಂಭೀರತೆ ಬಗ್ಗೆ ಕಳೆದ 2011 ನೇ ಸಾಲಿನಲ್ಲಿ ಅಂದು ಸಿಎಂ ಆಗಿದ್ದ ಬಿ.ಎಸ್. ಯಡಿಯೂರಪ್ಪ ಅವರ ಗಮನಕ್ಕೆ ತರಲಾಗಿತ್ತು. ಆಗ ಗಡಿನಾಡು ಕನ್ನಡಿಗರ ಸಮಸ್ಯೆಗೆ ಸ್ಪಂದಿಸಿದ್ದ ಬಿಎಸ್​ವೈ ಗಡಿನಾಡು ಕನ್ನಡಿಗರ ಮಕ್ಕಳಿಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಉನ್ನತ ಶಿಕ್ಷಣಕ್ಕೆ ಉಚಿತ ಪ್ರವೇಶ ಅವಕಾಶ ನೀಡಬೇಕೆಂದು ಆದೇಶಿಸಿದ್ದರು.

ನಂತರ ಜುಲೈ 13, 2011 ಕ್ಕೆ ಈ ಬಗ್ಗೆ ಅಧಿಕೃತವಾಗಿ ಕರ್ನಾಟಕ ಗೆಜೆಟ್ ನೋಟಿಫಿಕೇಶನ್ ಸಹ ಹೊರಡಿಸಲಾಗಿತ್ತು. ಅಲ್ಲದೇ ಗಡಿನಾಡು ಕನ್ನಡಿಗರ ಮಕ್ಕಳಿಗೆ ದೇಶದ ಯಾವುದೇ ಭಾಗದಲ್ಲಿ ಪಿಯುಸಿ, ಐಟಿಐ, ಡಿಪ್ಲೋಮಾ‌ ಕೋರ್ಸುಗಳು ಸೇರಿದಂತೆ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣಕ್ಕೆ ಪ್ರವೇಶ ನೀಡಬೇಕೆಂದು ಗೆಜೆಟ್​ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿ ಆದೇಶಿಸಲಾಗಿತ್ತು. ಆದ್ರೆ ಇಂದಿಗೂ ಗಡಿನಾಡು ಕನ್ನಡಿಗರ ಗ್ರಾಮದ ಮಕ್ಕಳಿಗೆ ಕರ್ನಾಟಕದಲ್ಲೂ ಉನ್ನತ ಶಿಕ್ಷಣಕ್ಕೆ ಪ್ರವೇಶ ಅವಕಾಶ ನೀಡದೆ ವಂಚಿಸಲಾಗುತ್ತಿದೆ.

ಇನ್ನು ರಾಜ್ಯೋತ್ಸವ ದಿನದಂದು ಕನ್ನಡ ಅಭಿವೃದ್ಧಿ, ರಾಜ್ಯದ ನೆಲ, ಜಲ ರಕ್ಷಣೆ ಬಗ್ಗೆ ಮಾರುದ್ದ ಭಾಷಣ ಮಾಡಿ ಕೈತೊಳೆದುಕೊಳ್ಳಲಾಗ್ತಿದೆ. ಇನ್ನಾದ್ರೂ ಸರ್ಕಾರ ಎಚ್ಚೆತ್ತುಕೊಂಡು ಗಡಿನಾಡು ಕನ್ನಡಿಗರ ಮಕ್ಕಳ ಉಜ್ವಲ ಭವಿಷ್ಯಕ್ಕೆ ನೆರವಾಗುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತದೆ ಅಂತಾ ಕಾದು ನೋಡಬೇಕಷ್ಟೆ. -ಸಿದ್ದು ಬಿರಾದಾರ್

Published On - 9:36 pm, Sat, 31 October 20