AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಣ್ಣೂರಿನಲ್ಲಿ ಖಾಸಗಿ ಬಸ್‌ನಿಂದ ಕಾಲು ಜಾರಿ ಬಿದ್ದ ವೃದ್ಧ: ದೇವರಂತೆ ಬಂದು ಕಾಪಾಡಿದ ಕ್ಲೀನರ್

ಕಣ್ಣೂರಿನಲ್ಲಿ ಖಾಸಗಿ ಬಸ್‌ನಿಂದ ಕಾಲು ಜಾರಿ ಬಿದ್ದ ವೃದ್ಧ: ದೇವರಂತೆ ಬಂದು ಕಾಪಾಡಿದ ಕ್ಲೀನರ್

ಅಕ್ಷಯ್​ ಪಲ್ಲಮಜಲು​​
|

Updated on: Aug 29, 2026 | 3:36 PM

Share

ಕೇರಳದ ಕಣ್ಣೂರಿನಲ್ಲಿ ನಡೆದ ರೋಮಾಂಚಕ ಘಟನೆಯಲ್ಲಿ, 'ಪಾರ್ವತಿ' ಬಸ್‌ನ ಕ್ಲೀನರ್ ಅತುಲ್ ಕುಕು ಚಲಿಸುವ ಬಸ್‌ಗೆ ಹತ್ತಲು ಯತ್ನಿಸಿ ಸಮತೋಲನ ಕಳೆದುಕೊಂಡ ವೃದ್ಧರೊಬ್ಬರ ಜೀವ ಉಳಿಸಿದರು. ಆಗಸ್ಟ್ 28, 2026 ರಂದು ನಡೆದ ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಅತುಲ್ ಅವರ ಸಮಯಪ್ರಜ್ಞೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಅವರ ಮಿಂಚಿನ ಪ್ರತಿಕ್ರಿಯೆಯಿಂದ ಭೀಕರ ಅನಾಹುತ ತಪ್ಪಿದೆ.

ಕಣ್ಣೂರು, ಆ.29: ರಸ್ತೆಯಲ್ಲಿ ಚಲಿಸುತ್ತಿದ್ದ ಖಾಸಗಿ ಬಸ್‌ಗೆ ಹತ್ತಲು ಯತ್ನಿಸುತ್ತಿದ್ದ ವೃದ್ಧರೊಬ್ಬರು ಸಮತೋಲನ ತಪ್ಪಿ ಕೆಳಗೆ ಬೀಳುತ್ತಿದ್ದಾಗ, ಬಸ್ ಕ್ಲೀನರ್ ಸಮಯಪ್ರಜ್ಞೆ ಮೆರೆದು ಅವರ ಜೀವ ಉಳಿಸಿದ ರೋಮಾಂಚಕ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ. ಆಗಸ್ಟ್ 28, 2026 ರಂದು ನಡೆದ ಈ ಘಟನೆಯ ದೃಶ್ಯಾವಳಿಗಳು ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕ್ಲೀನರ್ ಅತುಲ್ ಕುಕು ಅವರ ಸಮಯ ಪ್ರಜ್ಞೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಕುಟ್ಟಿಯಾಟ್ಟೂರ್-ಕಣ್ಣೂರು ಮಾರ್ಗದಲ್ಲಿ ಸಂಚರಿಸುತ್ತಿದ್ದ ‘ಪಾರ್ವತಿ’ ಹೆಸರಿನ ಖಾಸಗಿ ಬಸ್‌ಗೆ ವೃದ್ಧ ಪ್ರಯಾಣಿಕರೊಬ್ಬರು ಹತ್ತಲು ಯತ್ನಿಸುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಅವರ ಕಾಲು ಜಾರಿ, ಸಮತೋಲನ ತಪ್ಪಿ ಬಸ್‌ನಿಂದ ಕೆಳಗೆ ಬೀಳುವ ಹಂತದಲ್ಲಿದ್ದರು. ವೃದ್ಧರು ಕೆಳಗೆ ಬಿದ್ದು ಚಕ್ರದಡಿಗೆ ಸಿಲುಕುವ ಅಪಾಯವನ್ನು ತಕ್ಷಣವೇ ಗ್ರಹಿಸಿದ ಬಸ್ ಕ್ಲೀನರ್ ಅತುಲ್ ಕುಕು, ಮಿಂಚಿನ ವೇಗದಲ್ಲಿ ಸ್ಪಂದಿಸಿ ವೃದ್ಧರ ಕೈ ಹಿಡಿದು ಬಸ್‌ನೊಳಗೆ ಎಳೆದುಕೊಂಡಿದ್ದಾರೆ. ಅತುಲ್ ಅವರ ಜಾಗರೂಕತೆ ಮತ್ತು ಕ್ಷಣಾರ್ಧದ ನಿರ್ಧಾರದಿಂದಾಗಿ ಸಂಭವಿಸಬಹುದಾಗಿದ್ದ ಭೀಕರ ಅಪಘಾತ ಹಾಗೂ ದುರಂತವೊಂದು ಸಂಪೂರ್ಣವಾಗಿ ತಪ್ಪಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More