AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾವು ರೌಡಿಗಳಲ್ಲ, ಎಲ್ಲರಂತೆ ಮನುಷ್ಯರು’; ಪ್ರಜ್ವಲ್ ದೇವರಾಜ್ ಫ್ಯಾನ್ಸ್ ಅಳಲು

‘ನಾವು ರೌಡಿಗಳಲ್ಲ, ಎಲ್ಲರಂತೆ ಮನುಷ್ಯರು’; ಪ್ರಜ್ವಲ್ ದೇವರಾಜ್ ಫ್ಯಾನ್ಸ್ ಅಳಲು

ಮಾಲತೇಶ ಜಗ್ಗೀನ್
| Edited By: |

Updated on: Jul 08, 2026 | 9:35 AM

Share

ಪ್ರಜ್ವಲ್ ದೇವರಾಜ್ ನಟನೆಯ ‘ಕರಾವಳಿ’ ಸಿನಿಮಾ ಟ್ರೇಲರ್ ಲಾಂಚ್ ಈವೆಂಟ್ ಸಾಕಷ್ಟು ಚರ್ಚೆ ಹುಟ್ಟುಹಾಕಿದ್ದು ಗೊತ್ತೇ ಇದೆ. ಈ ಸಿನಿಮಾದ ಟ್ರೇಲರ್ ಲಾಂಚ್ ಈವೆಂಟ್​​ನಲ್ಲಿ ನಡೆದ ಸಾಕಷ್ಟು ಚರ್ಚೆಯನ್ನು ತಂದಿದೆ. ಈ ಬಗ್ಗೆ ಪ್ರಜ್ವಲ್ ಫ್ಯಾನ್ಸ್ ಮಾತನಾಡಿದ್ದು, ನಾವು ರೌಡಿಗಳಲ್ಲ ಎಂದಿದ್ದಾರೆ.

ಪ್ರಜ್ವಲ್ ದೇವರಾಜ್ ನಟನೆಯ ‘ಕರಾವಳಿ’ ಸಿನಿಮಾದ ಟ್ರೇಲರ್ ಲಾಂಚ್ ಈವೆಂಟ್ ಜುಲೈ 7ರಂದು ನಡೆಯಿತು. ಈ ಈವೆಂಟ್​ಗೆ ಪ್ರಜ್ವಲ್ ದೇವರಾಜ್ ಗೈರಾಗಿದ್ದರು. ಅವರಿಗೆ ಆಹ್ವಾನವನ್ನೇ ನೀಡಿಲ್ಲ ಎಂದು ಆರೋಪಿಸಿ ಅವರ ಅಭಿಮಾನಿಗಳು ಕೋಲಾಹಲ ಸೃಷ್ಟಿ ಮಾಡಿದರು. ಕೆಲವು ಸಮಯ ಉದ್ವಿಗ್ನ ವಾತಾವರಣವನ್ನು ಸೃಷ್ಟಿಸಿತ್ತು. ಪ್ರಜ್ವಲ್ ಫ್ಯಾನ್ಸ್ ನಡೆಯನ್ನು ಎಲ್ಲರೂ ತೆಗಳಿದರು. ಆ ಬಳಿಕ ಮಾತನಾಡಿರೋ ಫ್ಯಾನ್ಸ್, ‘ನಾವು ರೌಡಿಗಳಲ್ಲ, ಎಲ್ಲರಂತೆ ಸಾಮಾನ್ಯ ಮನುಷ್ಯರು’ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us