ಬೆಳಗಾವಿ ಅಧಿವೇಶನ: ಚರ್ಚೆಯಾಗುತ್ತಿವೆ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳು

ಬೆಳಗಾವಿ ಅಧಿವೇಶನ: ಚರ್ಚೆಯಾಗುತ್ತಿವೆ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳು

ವಿವೇಕ ಬಿರಾದಾರ
|

Updated on:Dec 16, 2024 | 11:33 AM

ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನಸಭಾ ಅಧಿವೇಶನದ ಆರನೇ ದಿನ ಉತ್ತರ ಕರ್ನಾಟಕದ ಸಮಸ್ಯೆಗಳು, ರೈತರ ಸಂಕಷ್ಟ, ಸರ್ಕಾರಿ ಆಸ್ಪತ್ರೆಗಳಲ್ಲಿ ಶಿಶು ಮತ್ತು ಬಾಣಂತಿಯರ ಸಾವುಗಳು ಪ್ರಮುಖ ಚರ್ಚಾ ವಿಷಯಗಳಾಗಿವೆ. ಪಂಚಮಸಾಲಿ ಸಮುದಾಯ ಮತ್ತು ಹಿಂದೂಗಳ ಮೇಲೆ ನಡೆದ ಲಾಠಿ ಪ್ರಹಾರದ ಬಗ್ಗೆ ವಿಪಕ್ಷಗಳ ಆಕ್ರೋಶವೂ ಇದೆ. ಮುಡಾ ಪ್ರಕರಣದಲ್ಲಿ ಸಿಎಂ ಸಿಲುಕಿರುವುದು ಸರ್ಕಾರದ ಮೇಲೆ ಒತ್ತಡ ಹೆಚ್ಚಿಸಿದೆ.

ಬೆಳಗಾವಿಯ ಸುವರ್ಣಸೌಧದಲ್ಲಿ ಅಧಿವೇಶನ ಪುನಾರಂಭವಾಗಿದೆ. ಆರನೇ ದಿನವಾದ ಸೋಮವಾರ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳು, ರೈತರ ಸಮಸ್ಯೆ ಬಗ್ಗೆ ಚರ್ಚೆಗಳು, ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರು, ಶಿಶುಗಳ ಸರಣಿ ಸಾವು ವಿಚಾರ ಚರ್ಎಯಾಗಲಿವೆ. ಹಾಗೇ ಪಂಚಮಸಾಲಿಗಳು, ಹಿಂದೂಗಳ ಮೇಲೆ ಲಾಠಿ ಪ್ರಹಾರವೆಂದು ಸರ್ಕಾರದ ವಿರುದ್ಧ ವಿಪಕ್ಷಗಳು ಹರಿಹಾಯಲು ಸಿದ್ದವಾಗಿವೆ. ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಗೆ ವಿಪಕ್ಷ ಬಿಜೆಪಿ ಒತ್ತಾಯಿಸಿದೆ.

ಮುಡಾ ಕೇಸ್​ನಲ್ಲಿ ಸಿಎಂ ಸಿಲುಕಿರುವುದರಿಂದ ಸರ್ಕಾರ ವಿಚಲಿತವಾಗಿದೆ. ಇನ್ನು, ಸರ್ಕಾರ ಅಧಿವೇಶನದಲ್ಲಿ ಮುನಿರತ್ನ ಕೇಸ್ ಬಗ್ಗೆ ಸರ್ಕಾರ ನಿರ್ಧರಿಸಿದೆ ಕೊವಿಡ್ ಹಗರಣ, ಬಿಎಸ್​ವೈ ಪ್ರಕರಣದ ಬಗ್ಗೆ ಪ್ರಸ್ತಾಪಿಸಲು ಚಿಂತನೆ ನಡೆಸಿದೆ.

Published on: Dec 16, 2024 11:04 AM