AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ಮುಂದೆ ಆಸ್ಪತ್ರೆ ಬಿಲ್​​ಗಳಲ್ಲಿ ಔಷಧಗಳ ಖರೀದಿ ಬೆಲೆ, ಎಂಆರ್​ಪಿ ಎರಡೂ ನಮೂದು ಕಡ್ಡಾಯ

ಇನ್ಮುಂದೆ ಆಸ್ಪತ್ರೆ ಬಿಲ್​​ಗಳಲ್ಲಿ ಔಷಧಗಳ ಖರೀದಿ ಬೆಲೆ, ಎಂಆರ್​ಪಿ ಎರಡೂ ನಮೂದು ಕಡ್ಡಾಯ

ವಿನಯ್​ ಕಾಶಪ್ಪನವರ್​
| Edited By: |

Updated on: Oct 10, 2026 | 3:18 PM

Share

ಮುಖ್ಯಾಂಶಗಳು

  • ಆಸ್ಪತ್ರೆ ಬಿಲ್‌ನಲ್ಲಿ ಇನ್ಮುಂದೆ ಔಷಧಗಳ ಖರೀದಿ ಬೆಲೆಯೂ ಕಡ್ಡಾಯ
  • ಕರ್ನಾಟಕ ಆಹಾರ ಮತ್ತು ಔಷಧ ಆಡಳಿತ ಮಹತ್ವದ ಆದೇಶ
  • ರೋಗಿಗೆ ವಿಧಿಸುವ ದರ MRP ಮೀರಬಾರದು ಎಂದು FDA ಸೂಚನೆ

ರಾಜ್ಯದಲ್ಲಿ ಆಸ್ಪತ್ರೆಗಳಲ್ಲಿ ಔಷಧ, ವೈದ್ಯಕೀಯ ಉಪಕರಣಗಳ ಬಿಲ್ಲಿಂಗ್‌ನಲ್ಲಿ ಪಾರದರ್ಶಕತೆ ಹಿನ್ನೆಲೆ ನವೆಂಬರ್ 1ರಿಂದ ಆಸ್ಪತ್ರೆ ಬಿಲ್‌ಗಳಲ್ಲಿ ಔಷಧಿಯ ಖರೀದಿ ಬೆಲೆ ಮತ್ತು ಎಂಆರ್​ಪಿ ಅನ್ನು ಕಡ್ಡಾಯವಾಗಿ ನಮೂದಿಸುವಂತೆ FDA ಮಹತ್ವದ ಆದೇಶ ಹೊರಡಿಸಿದೆ. ಗ್ರಾಹಕರಿಗೆ ಪಾರದರ್ಶಕತೆ ಒದಗಿಸುವುದು, ಅನ್ಯಾಯವನ್ನು ತಡೆಯುವುದು ಈ ನಿಯಮದ ಪ್ರಮುಖ ಉದ್ದೇಶವಾಗಿದೆ. ಈ ಕ್ರಮದಿಂದ ಕ್ಯಾನ್ಸರ್ ಔಷಧಿಗಳಂತಹ ದುಬಾರಿ ಔಷಧಿಗಳ ಬೆಲೆಯಲ್ಲಿ ಗಣನೀಯ ಇಳಿಕೆ ನಿರೀಕ್ಷಿಸಲಾಗಿದೆ.

ಬೆಂಗಳೂರು, ಅಕ್ಟೋಬರ್​​ 10: ಆಸ್ಪತ್ರೆ ಬಿಲ್‌ನಲ್ಲಿ ಇನ್ಮುಂದೆ ಔಷಧಗಳ ಖರೀದಿ ಬೆಲೆಯೂ ಕಡ್ಡಾಯಗೊಳಿಸಿ ಕರ್ನಾಟಕ ಆಹಾರ ಮತ್ತು ಔಷಧ ಆಡಳಿತ ಶನಿವಾರ ಮಹತ್ವದ ಆದೇಶ ಹೊರಡಿಸಿದೆ. ಕರ್ನಾಟಕದ ಎಲ್ಲಾ ಸರ್ಕಾರಿ, ಖಾಸಗಿ ಮತ್ತು ಟ್ರಸ್ಟ್ ಆಸ್ಪತ್ರೆಗಳಿಗೆ ಇದು ಅನ್ವಯವಾಗಲಿದ್ದು, ನವೆಂಬರ್ 1ರಿಂದ ಈ ನಿಯಮ ಜಾರಿಗೆ ಬರಲಿದೆ. ಆ ಮೂಲಕ ಆಸ್ಪತ್ರೆಗಳಲ್ಲಿ ಔಷಧ, ವೈದ್ಯಕೀಯ ಉಪಕರಣಗಳ ಬಿಲ್ಲಿಂಗ್‌ನಲ್ಲಿ ಪಾರದರ್ಶಕತೆಗೆ ಪಾರದರ್ಶಕತೆಯನ್ನು ತರಲು ಮತ್ತು ಗ್ರಾಹಕರಿಗೆ ಆಗುವ ಅನ್ಯಾಯವನ್ನು ತಡೆಯಲು ಮಹತ್ವದ ಹೆಜ್ಜೆಯಾಗಿದೆ. ಔಷಧದ ಹೆಸರು, ಬ್ರ್ಯಾಂಡ್, ಬ್ಯಾಚ್ ನಂಬರ್, ತಯಾರಿಕೆ ದಿನಾಂಕ, ಎಕ್ಸ್‌ಪೈರಿ ದಿನಾಂಕ ಬಿಲ್‌ನಲ್ಲಿ ಇರಬೇಕು. ರೋಗಿಗೆ ವಿಧಿಸುವ ದರ ಎಂಆರ್​ಪಿ ಮೀರಬಾರದು ಎಂದು ಎಫ್​ಡಿಎ ಸೂಚನೆ ನೀಡಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow Us
ವಿನಯ್​ ಕಾಶಪ್ಪನವರ್​
ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More