ಇನ್ಮುಂದೆ ಆಸ್ಪತ್ರೆ ಬಿಲ್‌ಗಳಲ್ಲಿ ಔಷಧಗಳ ಖರೀದಿ ಬೆಲೆ, ಎಂಆರ್ಪಿ ಎರಡೂ ನಮೂದು ಕಡ್ಡಾಯ
ಮುಖ್ಯಾಂಶಗಳು
- ಆಸ್ಪತ್ರೆ ಬಿಲ್‌ನಲ್ಲಿ ಇನ್ಮುಂದೆ ಔಷಧಗಳ ಖರೀದಿ ಬೆಲೆಯೂ ಕಡ್ಡಾಯ
- ಕರ್ನಾಟಕ ಆಹಾರ ಮತ್ತು ಔಷಧ ಆಡಳಿತ ಮಹತ್ವದ ಆದೇಶ
- ರೋಗಿಗೆ ವಿಧಿಸುವ ದರ MRP ಮೀರಬಾರದು ಎಂದು FDA ಸೂಚನೆ
ರಾಜ್ಯದಲ್ಲಿ ಆಸ್ಪತ್ರೆಗಳಲ್ಲಿ ಔಷಧ, ವೈದ್ಯಕೀಯ ಉಪಕರಣಗಳ ಬಿಲ್ಲಿಂಗ್‌ನಲ್ಲಿ ಪಾರದರ್ಶಕತೆ ಹಿನ್ನೆಲೆ ನವೆಂಬರ್ 1ರಿಂದ ಆಸ್ಪತ್ರೆ ಬಿಲ್‌ಗಳಲ್ಲಿ ಔಷಧಿಯ ಖರೀದಿ ಬೆಲೆ ಮತ್ತು ಎಂಆರ್ಪಿ ಅನ್ನು ಕಡ್ಡಾಯವಾಗಿ ನಮೂದಿಸುವಂತೆ FDA ಮಹತ್ವದ ಆದೇಶ ಹೊರಡಿಸಿದೆ. ಗ್ರಾಹಕರಿಗೆ ಪಾರದರ್ಶಕತೆ ಒದಗಿಸುವುದು, ಅನ್ಯಾಯವನ್ನು ತಡೆಯುವುದು ಈ ನಿಯಮದ ಪ್ರಮುಖ ಉದ್ದೇಶವಾಗಿದೆ. ಈ ಕ್ರಮದಿಂದ ಕ್ಯಾನ್ಸರ್ ಔಷಧಿಗಳಂತಹ ದುಬಾರಿ ಔಷಧಿಗಳ ಬೆಲೆಯಲ್ಲಿ ಗಣನೀಯ ಇಳಿಕೆ ನಿರೀಕ್ಷಿಸಲಾಗಿದೆ.
ಬೆಂಗಳೂರು, ಅಕ್ಟೋಬರ್ 10: ಆಸ್ಪತ್ರೆ ಬಿಲ್‌ನಲ್ಲಿ ಇನ್ಮುಂದೆ ಔಷಧಗಳ ಖರೀದಿ ಬೆಲೆಯೂ ಕಡ್ಡಾಯಗೊಳಿಸಿ ಕರ್ನಾಟಕ ಆಹಾರ ಮತ್ತು ಔಷಧ ಆಡಳಿತ ಶನಿವಾರ ಮಹತ್ವದ ಆದೇಶ ಹೊರಡಿಸಿದೆ. ಕರ್ನಾಟಕದ ಎಲ್ಲಾ ಸರ್ಕಾರಿ, ಖಾಸಗಿ ಮತ್ತು ಟ್ರಸ್ಟ್ ಆಸ್ಪತ್ರೆಗಳಿಗೆ ಇದು ಅನ್ವಯವಾಗಲಿದ್ದು, ನವೆಂಬರ್ 1ರಿಂದ ಈ ನಿಯಮ ಜಾರಿಗೆ ಬರಲಿದೆ. ಆ ಮೂಲಕ ಆಸ್ಪತ್ರೆಗಳಲ್ಲಿ ಔಷಧ, ವೈದ್ಯಕೀಯ ಉಪಕರಣಗಳ ಬಿಲ್ಲಿಂಗ್‌ನಲ್ಲಿ ಪಾರದರ್ಶಕತೆಗೆ ಪಾರದರ್ಶಕತೆಯನ್ನು ತರಲು ಮತ್ತು ಗ್ರಾಹಕರಿಗೆ ಆಗುವ ಅನ್ಯಾಯವನ್ನು ತಡೆಯಲು ಮಹತ್ವದ ಹೆಜ್ಜೆಯಾಗಿದೆ. ಔಷಧದ ಹೆಸರು, ಬ್ರ್ಯಾಂಡ್, ಬ್ಯಾಚ್ ನಂಬರ್, ತಯಾರಿಕೆ ದಿನಾಂಕ, ಎಕ್ಸ್‌ಪೈರಿ ದಿನಾಂಕ ಬಿಲ್‌ನಲ್ಲಿ ಇರಬೇಕು. ರೋಗಿಗೆ ವಿಧಿಸುವ ದರ ಎಂಆರ್ಪಿ ಮೀರಬಾರದು ಎಂದು ಎಫ್ಡಿಎ ಸೂಚನೆ ನೀಡಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
