Karnataka Assembly session; ಬೆಂಗಳೂರು ಕಾಲ್ತುಳಿತ ಪ್ರಕರಣಕ್ಕೆ ಸಿಎಂ, ಡಿಸಿಎಂ ಕಾರಣ: ಸುರೇಶ್ ಕುಮಾರ್
ಜಪಾನ್ನಲ್ಲಿ ಸಚಿವನೊಬ್ಬ ಸಂವೇದನೆರಹಿತ ಹೇಳಿಕೆ ನೀಡಿದ್ದಕ್ಕಾಗಿ ರಾಜೀನಾಮೆ ಸಲ್ಲಿಸಿದ. ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ಈಗಲೂ ಕಾಲ ಮಿಂಚಿಲ್ಲ, ಹೊಣೆಗಾರಿಕೆಯನ್ನು ಬೇರೆಯವರ ಮೇಲೆ ವರ್ಗಾಯಿಸದೆ ತಾವೇ ಅದನ್ನು ಹೊತ್ತು ನಾಡಿನ ಜನರ ಬೇಷರತ್ ಕ್ಷಮೆ ಕೇಳಬೇಕು, 11 ಜನರ ಸಾವಿನ ಜವಾಬ್ದಾರಿಯನ್ನು ಅವರು ಹೊತ್ತುಕೊಳ್ಳಬೇಕು ಎಂದು ಸುರೇಶ್ ಕುಮಾರ್ ಹೇಳಿದರು.
ಬೆಂಗಳೂರು, ಆಗಸ್ಟ್ 12: ಜೂನ್ 4ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ 11 ಜನರ ದಾರುಣ ಸಾವು ಸದನದಲ್ಲಿ ಜೋರು ಸದ್ದು ಮಾಡಿತು. ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ಬಿಜೆಪಿ ಶಾಸಕ ಎಸ್ ಸುರೇಶ್ ಕುಮಾರ್ (S Suresh Kumar), ನಾಡಿನ ಉಪ ಮುಖ್ಯಮಂತ್ರಿ ಕೈಯಲ್ಲಿ ರಾಷ್ಟ್ರಧ್ವಜವನ್ನು ಹಿಡಿದರೆ ಹೆಮ್ಮೆಯಿಂದ ಬೀಗುತ್ತೇನೆ, ಆದರೆ ಅವರು ಹಿಡಿದಿದ್ದು ಆರ್ಸಿಬಿ ಧ್ವಜ! ಅದನ್ನು ಕೈಯಲ್ಲಿ ಹಿಡಿದು ಅವರು ಮೆರವಣಿಗೆ ಹೊರಡುತ್ತಾರೆ ಮತ್ತು ಕಪ್ಗೆ ಮುತ್ತಿಕ್ಕುತ್ತಾರೆ, ನಾಡಿನ ಜನತೆಗೆ ಯಾವ ಸಂದೇಶವನ್ನು ಅವರು ಕೊಡಬಯಸುತ್ತಾರೆ? ಎಂದು ಪ್ರಶ್ನಿಸಿದರು. ಆತ್ಮಹತ್ಯೆ ಪ್ರಕರಣಗಳಲ್ಲಿ ಕುಮ್ಮಕ್ಕು ನೀಡಿದವರು ಅಂತ ಪದ ಬಳಕೆಯಾಗುತ್ತದೆ, ಇಲ್ಲಿ ಹನ್ನೊಂದು ಜನರ ಸಾವಿಗೆ ಸರಕಾರದ ಕುಮ್ಮಕ್ಕೇ ಕಾರಣ, ಸಾಗರವನ್ನು ತೆಪ್ಪದಲ್ಲಿ ದಾಟಲಾಗದು, ಕಾಲ್ತುಳಿತ ಪ್ರಕರಣದಲ್ಲಿ ತಮ್ಮವರನ್ನು ಕಳೆದುಕೊಂಡವರು ಸಂಸಾರವೆಂಬ ಸಾಗರವನ್ನು ತೆಪ್ಪದಲ್ಲೇ ದಾಟಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ ಎಂದು ಸುರೇಶ್ ಕುಮಾರ್ ಹೇಳಿದರು.
ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತ ಪ್ರಕರಣ: ಹೈಕೋರ್ಟ್ ಮಹತ್ವದ ಸೂಚನೆ, ಪದಾಧಿಕಾರಿಗಳಿಗೆ ಮಧ್ಯಂತರ ರಕ್ಷಣೆ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

