ಕರ್ನಾಟಕ ರಾಜ್ಯೋತ್ಸವ: ರಾಜ್ಯವನ್ನು ಉದ್ದೇಶಿಸಿ ಮಾತಾಡಿದ ಶಿವಕುಮಾರ್ ಕವಿಯಂತೆ ಕಂಡರು!

ಕರ್ನಾಟಕ ರಾಜ್ಯೋತ್ಸವ: ರಾಜ್ಯವನ್ನು ಉದ್ದೇಶಿಸಿ ಮಾತಾಡಿದ ಶಿವಕುಮಾರ್ ಕವಿಯಂತೆ ಕಂಡರು!

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 01, 2024 | 12:00 PM

ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷಗಳು ಸಂದಿವೆ ಎಂದ ಶಿವಕುಮಾರ್, ದೇಶದ ಬೇರೆ ಯಾವುದೇ ರಾಜ್ಯಕ್ಕೆ ತನ್ನದೇ ಆದ ಧ್ವಜವಾಗಲೀ, ನಾಡಗೀತೆಯಾಗಲೀ ಇಲ್ಲ; ಆದರೆ ಕರ್ನಾಟಕಕ್ಕೆ ತನ್ನ ಧ್ವಜವಿದೆ ಮತ್ತು ರಾಷ್ಟ್ರಕವಿ ಕುವೆಂಪು ಅವರು ಬರೆದ ಸರ್ವಜನಾಂಗದ ಶಾಂತಿಯ ತೋಟ.....ಗೀತೆಯಿದೆ ಅಂತ ಹೇಳಿದರು.

ಬೆಂಗಳೂರು: ರಾಜ್ಯೋತ್ಸವದ ಅಂಗವಾಗಿ ಕಂಠೀರವ ಕ್ರೀಡಾಂಗಣದಲ್ಲಿ ಆಯಾಜಿಸಿದ ಕಾರ್ಯಕ್ರಮದಲ್ಲಿ ಮಾತಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಚಿವನಿಗಿಂತ ಹೆಚ್ಚು ಕವಿಯಾಗಿ ಕಂಡರು. ಅವರ ಮಾತುಗಳಲ್ಲಿ ಕಾವ್ಯ, ಹಿರಿಯ ಸಾಹಿತಿಗಳ ಉಕ್ತಿಗಳು ಅಡಕವಾಗಿದ್ದವು. ಭಾಷಣವನ್ನು ಅವರು ಆಚಾರಕ್ಕೆ ಅರಸನಾಗು ನೀತಿಗೆ ಪ್ರಭುವಾಗು ಮಾತಿನಲ್ಲಿ ಚೂಡಾಮಣಿಯಾಗು ಮತ್ತು ಕನ್ನಡದ ಜ್ಯೋತಿಯನ್ನು ಜನಕ್ಕೆಲ್ಲ ಬೆಳಗು ಎಂದು ಅರಂಭಿಸಿ ಗುರು ಹಿರಿಯರು ಹೇಳಿರುವ ಮಾತುಗಳನ್ನು ಪಾಲಿಸುವ ಕರ್ತವ್ಯ ಕನ್ನಡಿಗರದ್ದು ಎನ್ನುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಸಿಎಂ ಆಯ್ತು ಈಗ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ರಾಜ್ಯಪಾಲರಿಗೆ ದೂರು: ಏನಿದು ಪ್ರಕರಣ?