ಸಿದ್ದರಾಮಯ್ಯ ಕುರಿತ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಕೇರಳ ನಂಟು: 2 ಬಾರಿ ನೋಟಿಸ್ ನೀಡಿದ್ರೂ ವಿಚಾರಣೆಗೆ ಹಾಜರಾಗದ ನೆರೆ ರಾಜ್ಯದ ವ್ಯಕ್ತಿ
ಸಿದ್ದರಾಮಯ್ಯ ಕುರಿತ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಕೇರಳ ನಂಟು ಪತ್ತೆಯಾಗಿದ್ದು, ಕೃಪಾ ಆಳ್ವಾ ಪರಿಚಿತ ಕೇರಳ ಮೂಲದ ವ್ಯಕ್ತಿಗೆ ಬೆಂಗಳೂರು ಸೈಬರ್ ಪೊಲೀಸರು ಎರಡು ಬಾರಿ ನೋಟಿಸ್ ನೀಡಿದರೂ ವಿಚಾರಣೆಗೆ ಗೈರಾಗಿದ್ದಾನೆ. ಇದೇ ವ್ಯಕ್ತಿಯ ಮೂಲಕ ಸ್ಟಿಂಗ್ ಆಪರೇಷನ್ನಲ್ಲಿದ್ದ ಮಹಿಳೆ ಕೃಪಾ ಆಳ್ವಾರನ್ನು ಸಂಪರ್ಕಿಸಿದ್ದಳು. ಕೃಪಾ ಆಳ್ವಾ ಮಕ್ಕಳ ಆಯೋಗದಲ್ಲಿದ್ದ ಸಂದರ್ಭದಲ್ಲಿ ಕೇರಳದ ಈತ ಕಚೇರಿಯಲ್ಲಿ ಭಾಷಾಂತರನಾಗಿ ಕೆಲಸ ಮಾಡ್ತಿದ್ದ ಮಾಹಿತಿ ಸಿಕ್ಕಿದೆ.
ಬೆಂಗಳೂರು, ನವೆಂಬರ್ 28: ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆ ಸ್ಟಿಂಗ್ ಆಪರೇಷನ್ ಪ್ರಕರಣ ಸಂಬಂಧ ಬೆಂಗಳೂರು ಕೇಂದ್ರ ಸೈಬರ್ ಪೊಲೀಸರ ತನಿಖೆ ವೇಳೆ ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣಕ್ಕೆ ನೆರೆ ರಾಜ್ಯದ ನಂಟು ಕಂಡುಬಂದಿದ್ದು, ಕೇರಳ ಮೂಲದ ವ್ಯಕ್ತಿಗೆ ನೋಟಿಸ್ ಕೊಡಲಾಗಿದೆ. 2 ಬಾರಿ ನೋಟಿಸ್ ನೀಡಿದ್ರೂ ಆತ ವಿಚಾರಣೆಗೆ ಹಾಜರಾಗಿಲ್ಲ ಎನ್ನಲಾಗಿದ್ದು, ಈತ ಕೃಪಾ ಆಳ್ವಾ ಸಂಪರ್ಕದಲ್ಲಿದ್ದ ಎಂಬುದು ಗೊತ್ತಾಗಿದೆ. ಇದೇ ವ್ಯಕ್ತಿಯ ಮೂಲಕ ಸ್ಟಿಂಗ್ ಆಪರೇಷನ್ನಲ್ಲಿದ್ದ ಮಹಿಳೆ ಕೃಪಾ ಆಳ್ವಾರನ್ನು ಸಂಪರ್ಕಿಸಿದ್ದಳು. ಕೃಪಾ ಆಳ್ವಾ ಮಕ್ಕಳ ಆಯೋಗದಲ್ಲಿದ್ದ ಸಂದರ್ಭದಲ್ಲಿ ಕೇರಳದ ಈತ ಕಚೇರಿಯಲ್ಲಿ ಭಾಷಾಂತರನಾಗಿ ಕೆಲಸ ಮಾಡ್ತಿದ್ದ ಮಾಹಿತಿ ಸಿಕ್ಕಿದೆ. ಆದ್ರೆ ಈ ವ್ಯಕ್ತಿಗೂ ಸ್ಟಿಂಗ್ನಲ್ಲಿದ್ದ ಮಹಿಳೆ ಸಂಪರ್ಕ ಇರೋದು ನಿಜಾನಾ? ಕೃಪಾ ಆಳ್ವಾ ಬಳಿ ಮಹಿಳೆಯನ್ನ ಕರೆತಂದಿದ್ದು ಇದೇ ವ್ಯಕ್ತಿನಾ? ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
