200 ಚಿತ್ರಗಳಲ್ಲಿ ನಟಿಸಿ ರಾಜಕೀಯಕ್ಕೆ ಬಂದು ಡುಮ್ಮಿಯಾಗಿದ್ದ ಖುಷ್ಬೂ ಈಗ ತೂಕ ಇಳಿಸಿಕೊಂಡು ಮೊದಲಿನಂತೆ ಸುಂದರಿ ಅನಿಸುತ್ತಿದ್ದಾರೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 07, 2021 | 7:34 PM

ನಟಿಯಾಗಿದ್ದಾಗ ತೆಳ್ಳಗೆ, ಬೆಳ್ಳಗೆ ಮುದ್ದುಮುದ್ದಾಗಿದ್ದ ಖುಷ್ಬೂ ರಾಜಕೀಯಕ್ಕೆ ಇಳಿದ ಮೇಲೆ ತೂಕ ಹೆಚ್ಚಿಸಿಕೊಂಡು ಡುಮ್ಮಿ ಅನಿಸತೊಡಗಿದ್ದರು. ಅವರ ಆಪ್ತ ಮೂಲಗಳ ಪ್ರಕಾರ ತೂಕ 100 ಕೆ ಜಿ ಸಮೀಪಕ್ಕೆ ಬಂದಿತ್ತು.

18ನೇ ವಯಸ್ಸಿಗೆ ಚಿತ್ರರಂಗಕ್ಕೆ ಕಾಲಿಟ್ಟು ಮುಖದಲ್ಲಿ ಹದಿಹರೆಯದ ತಾಜಾತನ, ಆಕರ್ಷಕ ರೂಪ ಮತ್ತು ಅಷ್ಟೇ ಸೊಗಸಾದ ಮೈಮಾಟದೊಂದಿಗೆ ಪಡ್ಡೆಗಳನ್ನು ನಿದ್ರೆಗೆಡುವಂತೆ ಮಾಡಿದ್ದ ಖುಷ್ಬೂ ಸುಂದರ್ ಅವರ ವ್ಯಕ್ತಿತ್ವ ಮತ್ತು ವೃತ್ತಿ ಬದುಕಿನ ಬಗ್ಗೆ ಹೇಳಲಾರಂಭಿಸಿದರೆ, ಸಮಯ ಸಾಕಾಗಲಾರದು. ಯಾಕೆಂದರೆ, ದಕ್ಷಿಣ ಭಾರತದ ಎಲ್ಲ ಬಾಷೆಗಳು (ಕನ್ನಡದಲ್ಲಿ ಸುಮಾರು 25) ಸೇರಿ ಸುಮಾರು 200 ಚಿತ್ರಗಳಲ್ಲಿ ನಟಿಸಿದ್ದಾರೆ. ಹಿಂದಿಯಲ್ಲಿ ಸುಮಾರು 25 ಚಿತ್ರಗಳು ಅವರ ಹೆಸರಿಗಿವೆ. ಟಿವಿಯಲ್ಲಿ ಅಂಕರ್ ಆಗಿ ಕೆಲಸ ಮಾಡಿದ್ದಾರೆ, ಧಾರಾವಾಹಿಗಳಲ್ಲಿ ನಟಿಸಿದ್ದಾರೆ, ಹಲವಾರು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಇದು ಸಾಲದೆಂಬಂತೆ 2010 ರಲ್ಲಿ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟ ಅವರು ಮೊದಲಿಗೆ ಡಿಎಮ್ಕೆ ಪಕ್ಷದ ಕಾರ್ಯಕರ್ತರಾಗಿ 4 ವರ್ಷ ಕೆಲಸ ಮಾಡಿದರು, ಆಮೇಲೆ ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸೇರಿ ಪಕ್ಷದ ರಾಷ್ಟ್ರೀಯ ಬಾತ್ಮೀದಾರರಾಗಿ ಕೆಲಸ ಮಾಡಿದರು. ಈ ಪಕ್ಷದಿಂದಲೂ ಭ್ರಮನಿರಸನಗೊಂಡ ಖುಷ್ಬೂ 2020 ರಲ್ಲಿ ಅದಕ್ಕೆ ವಿದಾಯ ಹೇಳಿ ಬಿಜೆಪಿಯನ್ನು ಅಪ್ಪಿಕೊಂಡರು, 2021 ರಲ್ಲಿ ತಮಿಳುನಾಡು ವಿಧಾನ ಸಭೆಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರು.

ನಟಿಯಾಗಿದ್ದಾಗ ತೆಳ್ಳಗೆ, ಬೆಳ್ಳಗೆ ಮುದ್ದುಮುದ್ದಾಗಿದ್ದ ಖುಷ್ಬೂ ರಾಜಕೀಯಕ್ಕೆ ಇಳಿದ ಮೇಲೆ ತೂಕ ಹೆಚ್ಚಿಸಿಕೊಂಡು ಡುಮ್ಮಿ ಅನಿಸತೊಡಗಿದ್ದರು. ಅವರ ಆಪ್ತ ಮೂಲಗಳ ಪ್ರಕಾರ ತೂಕ 100 ಕೆ ಜಿ ಸಮೀಪಕ್ಕೆ ಬಂದಿತ್ತು. ಜನರೆಲ್ಲ ತಮ್ಮ ತೂಕ ಕುರಿತು ಕಾಮೆಂಟ್ ಮಾಡಲಾರಂಭಿಸಿದ ಮೇಲೆ ಅದನ್ನು ಇಳಿಸಿಕೊಳ್ಳುವವ ಗಟ್ಟಿ ನಿರ್ಧಾರ ಮಾಡಿ ಈಗ ಮೊದಲಿನ ಹಾಗೆ ಕಾಣತೊಡಗಿದ್ದಾರೆ.

ಸಾಮಾನ್ಯವಾಗಿ 50 ರ ನಂತರ (ಖುಷ್ಬೂಗೆ ಈಗ 51 ರ ಪ್ರಾಯ) ತೂಕ ಇಳಿಸುವುದು ಬಹಳ ಕಷ್ಟ. ಆದರೆ, ಅವರು ಛಲ ಬಿಡದ ತ್ರಿವಿಕ್ರಮನಂತೆ ತಮ್ಮ ದೇಹವನ್ನು ಕರಗಿಸಿ ಸುಮಾರು 25 ಕೆಜಿಗಳಷ್ಟು ತೂಕ ಇಳಿಸಿಕೊಂಡು ವಯಸ್ಸು ಅರ್ಧ ಶತಕದ ಗಡಿ ದಾಟಿದ್ದರೂ 30ರ ತರುಣಿಯಂತೆ ಕಾಣುತ್ತಿದ್ದಾರೆ. ನೀವೇ ಗಮನಿಸಿ.

ಇದನ್ನೂ ಓದಿ:   Viral Video: ಜಿಮ್​ನಲ್ಲಿ ಹುಡುಗಿಯನ್ನು ಇಂಪ್ರೆಸ್ ಮಾಡಲು ಟ್ರೆಡ್‌ಮಿಲ್‌ ಮೇಲೆ ಕಾಲಿಟ್ಟ ಹುಡುಗ; ತಮಾಷೆಯ ವಿಡಿಯೋ ವೈರಲ್