ನನಗೆ ತ್ರಿವಿಕ್ರಮ್ ಪರಿಚಯವೇ ಇರಲಿಲ್ಲ: ಆ ಘಟನೆ ನೆನೆದ ಕಿಚ್ಚ ಸುದೀಪ್

Updated on: Jan 29, 2025 | 7:52 PM

ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಎಂದರೆ ಬರೀ ಕ್ರಿಕೆಟ್ ಅಲ್ಲ. ಅದು ಕಲಾವಿದರ ನಡುವಿನ ಬಾಂಧವ್ಯಕ್ಕೂ ಕಾರಣ ಆಗಿದೆ. ಕನ್ನಡ ಮಾತ್ರವಲ್ಲದೇ ಪರಭಾಷೆಯ ಚಿತ್ರರಂಗದ ಸೆಲೆಬ್ರಿಟಿಗಳ ನಡುವೆ ನಂಟು ಬೆಳೆಯಲು ಕೂಡ ಸಿಸಿಎಲ್​ ಕಾರಣವಾಗಿದೆ. ಈ ಬಗ್ಗೆ ಕಿಚ್ಚ ಸುದೀಪ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.

ತ್ರಿವಿಕ್ರಮ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್​ 11’ ಶೋನಲ್ಲಿ ರನ್ನರ್​ ಅಪ್ ಆದರು. ಕಿಚ್ಚ ಸುದೀಪ್ ಅವರಿಗೆ ತ್ರಿವಿಕ್ರಮ್ ಪರಿಚಯ ಆಗಿದ್ದು ಸಿಸಿಎಲ್​ ಮೂಲಕ. ಅದಕ್ಕೂ ಮೊದಲು ಅವರಿಗೆ ಪರಿಚಯವೇ ಇರಲಿಲ್ಲ. ಆ ಬಗ್ಗೆ ಸುದೀಪ್ ಅವರು ಪ್ರೆಸ್​ಮೀಟ್​ನಲ್ಲಿ ಮಾತಾಡಿದ್ದಾರೆ. ‘ಕರಣ್, ತ್ರಿವಿಕ್ರಮ್, ರಾಜೀವ್, ಜೆಕೆ​ ಯಾರು ಎಂಬ ಪರಿಚಯ ನನಗೆ ಇರಲಿಲ್ಲ. ಕ್ರಿಕೆಟ್​ಗೆ ಬಂದಾಗ ಕ್ಲೋಸ್​ ಆದರು’ ಎಂದು ಸುದೀಪ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More