ಜೈಲಿನಿಂದ ಬಿಡುಗಡೆ ಆಗ್ತಿದ್ದಂತೆ ಎಚ್‌.ಡಿ ರೇವಣ್ಣ ಟೆಂಪಲ್‌ ರನ್‌: ಹೇಳಿದ್ದೇನು?

|

Updated on: May 14, 2024 | 7:05 PM

ಮಾಜಿ ಸಚಿವ ಎಚ್​ಡಿ ರೇವಣ್ಣ ಅವರು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಪರಪ್ಪನ ಅಗ್ರಹಾರದಿಂದ ರೇವಣ್ಣ ನೇರವಾಗಿ ತಮ್ಮ ತಂದೆ ಎಚ್​ಡಿ ದೇವೇಗೌಡ ಅವರ ನಿವಾಸಕ್ಕೆ ಆಗಮಿಸಿದ್ದು, ಪೂಜೆ ಪುನಸ್ಕಾರ ಮಾಡಿದರು. ಬಳಿಕ ಬಸವಗುಡಿಯ ಆಂಜನೇಯ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಇನ್ನು ಈ ವೇಳೆ ಮಾಧ್ಯಮಗಳಿಗೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರು, (ಮೇ 14): ಮಹಿಳೆ ಕಿಡ್ನಾಪ್ ಪ್ರಕರಣದಲ್ಲಿ ಜೈಲು ಸೇರಿದ್ದ ಜೆಡಿಎಸ್ ಶಾಸಕ ಎಚ್‌.ಡಿ ರೇವಣ್ಣ ಅವರಿಗೆ ಜಾಮೀನು ಸಿಕ್ಕಿದ್ದು, ಇಂದು (ಮೇ 14) ಬಿಡುಗಡೆ ಆಗಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್ ಆದ ರೇವಣ್ಣ ಅವರು ಮೊದಲಿಗೆ ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದರು. ದೇವೇಗೌಡರ ನಿವಾಸದಲ್ಲಿ ಕುಟುಂಬಸ್ಥರ ಜೊತೆ ಮಾತನಾಡಿದ ಬಳಿಕ ತಮ್ಮ ಟೆಂಪಲ್ ರನ್ ಶುರು ಮಾಡಿದ್ದಾರೆ. ಮೊದಲಿಗೆ ರೇವಣ್ಣ, ದೇವೇಗೌಡ್ರ ನಿವಾಸದಿಂದ ನೇರವಾಗಿ ಬಸವನಗುಡಿಯ ಕಾರಂಜಿ ಆಂಜನೇಯ ಸ್ವಾಮಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದಾದ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ರೇವಣ್ಣ ಅವರು ನಾನು ಹೆಚ್ಚಿಗೆ ಏನು ಹೇಳಲ್ಲ. ನನಗೆ ನ್ಯಾಯಾಂಗದ ಮೇಲೆ ನಂಬಿಕೆ ಇದ್ದು, ನ್ಯಾಯಾಂಗವನ್ನ ನಾನು ಗೌರವಿಸುತ್ತೇನೆ. ನನಗೆ ದೇವರ ಮೇಲೆಯೂ ನಂಬಿಕೆ ಇದೆ. ಈ ಆಪಾದನೆಯಿಂದ ಹೊರ ಬರುತ್ತೇನೆ. 11 ದಿನದ ನ್ಯಾಯಾಂಗದ ಆದೇಶ ಪಾಲಿಸಿದ್ದೇನೆ. ಉಳಿದ ಯಾವುದಕ್ಕೂ ರಿಯಾಕ್ಟ್ ಮಾಡಲ್ಲ ಎಂದಿದ್ದಾರೆ.