ರಸ್ತೆ ಸರಿಪಡಿಸೋದು ನಮ್ಮ ಅಜೆಂಡಾ ಎಂದ ಉದ್ಯಮಿ ಕಿರಣ್ ಮಜುಂದಾರ್ ಶಾ
ಡಿಸಿಎಂ ಡಿಕೆ ಶಿವಕುಮಾರ್ ಅವರ ಹೇಳಿಕೆಗೆ ಕಿರಣ್ ಮಜುಂದಾರ್-ಶಾ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ. ತಮ್ಮ ಮಾತು ಸತ್ಯವಲ್ಲ ಎಂದಿರುವ ಅವರು, ಮೋಹನ್ ದಾಸ್ ಪೈ ಅವರೊಂದಿಗೆ ತಾವು ಬಿಜೆಪಿ ಮತ್ತು ಜೆಡಿಎಸ್ ಸರ್ಕಾರಗಳ ಅವಧಿಯಲ್ಲೂ ಬೆಂಗಳೂರಿನ ಹದಗೆಟ್ಟ ಮೂಲಸೌಕರ್ಯಗಳನ್ನು ಟೀಕಿಸಿದ್ದಾಗಿ ತಿಳಿಸಿದ್ದಾರೆ.
ಬೆಂಗಳೂರು, ಅಕ್ಟೋಬರ್ 19: ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಉದ್ಯಮಿ ಕಿರಣ್ ಮಜೂಂದಾರ್ ಶಾ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಮಧ್ಯೆ ತಿಕ್ಕಾಟಕ್ಕೆ ಕಾರಣವಾಗಿದೆ. ಬಿಜೆಪಿ ಆಡಳಿತಾವಧಿಯಲ್ಲಿ ಅವರು ಯಾಕೆ ಬಾಯಿ ತೆರೆಯಲಿಲ್ಲ. ಅವರೊಂದಿಗೆ ಇವರು ಕೆಲವು ವೈಯಕ್ತಿಕ ಅಜೆಂಡಾ ಹೊದಿದ್ದಾರೆ ಎಂದಿದ್ದರು. ಈ ಬಗ್ಗೆ ತಿರುಗೇಟು ನೀಡಿರುವ ಉದ್ಯಮಿ ಕಿರಣ್ ಮಜೂಂದಾರ್ ಶಾ, ಡಿಕೆ ಶಿವಕುಮಾರ್ ಮಾತು ಸತ್ಯವಲ್ಲ. ಪೈ ಮತ್ತು ನಾನು ಇಬ್ಬರೂ ಈ ಹಿಂದಿನಿಂದಲ್ಲೂ ಟೀಕಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Oct 19, 2025 01:47 PM
Latest Videos
ಅಮೆರಿಕದ ವ್ಯಾಪಾರ ಒಪ್ಪಂದವು ಕೃಷಿ ವಲಯವನ್ನು ರಕ್ಷಿಸುತ್ತೆ: ಪಿಯೂಷ್ ಗೋಯಲ್
ಡ್ಯಾನ್ಸ್ ಬಳಿಕ ಪ್ರೀತಮ್ ಆಡಿದ ಮಾತಿಗೆ ಸುಸ್ತಾದ ಆ್ಯಂಕರ್ ಅನುಶ್ರೀ
ಪತ್ನಿಯ ಚಿಕಿತ್ಸೆಗೆಂದು ಇಟ್ಟಿದ್ದ ಸಾಲದ ಹಣವನ್ನೇ ಹೊತ್ತೊಯ್ದ ಕದೀಮರು!
ಎಸ್ಐಆರ್ ವಿರುದ್ಧದ ಅರ್ಜಿಯ ಬಗ್ಗೆ ಖುದ್ದು ವಾದ ಮಾಡಲು ಬಂದ ಮಮತಾ

