Kitchen Vastu Tips: ಅಡುಗೆ ಮನೆಯಲ್ಲಿ ಪಾತ್ರೆ ತೊಳೆದ ಮೇಲೆ ಹೇಗೆ ಇಡಬೇಕು
ಮನೆಯಲ್ಲಿ ಅಡುಗೆ ಮನೆ ತುಂಬಾ ಮುಖ್ಯವಾದದ್ದು. ಅಡುಗೆ ಇಲ್ಲದೆ ಜೀವನವಿಲ್ಲ. ನಮ್ಮ ಆರೋಗ್ಯ ಕಾಪಾಡುವ ಆಹಾರ ತಯಾರಾಗುವ ಜಾಗದಲ್ಲಿ ವಾಸ್ತು ದೋಷವಿದ್ದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ. ಹೀಗಾಗಿ ಅಡುಗೆ ಮನೆಯ ವಾಸ್ತು ಅತಿ ಮುಖ್ಯ. ಅಡುಗೆ ಮನೆ ಯಾವ ದಿಕ್ಕಿನಲ್ಲಿರಬೇಕು. ಪಾತ್ರ-ಸಾಮಾನುಗಳನ್ನು ಹೇಗೆ ಜೋಡಿಸಬೇಕು ಎಂಬ ಎಲ್ಲಾ ಮಾಹಿತಿಯನ್ನು ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.
ಮನೆಯ ಅಂದಕ್ಕೆ ಎಂದು ತಂದಿಡುವ ವಸ್ತುಗಳಿಂದ ಹಿಡಿದು ಮನೆಯಲ್ಲಿ ಅರೆಂಜ್ ಮಾಡುವ ಎಲ್ಲಾ ವಸ್ತುಗಳು ಕೂಡ ವಾಸ್ತು ಪ್ರಕಾರ ಮುಖ್ಯ. ವಸ್ತುಗಳನ್ನು ಜೋಡಿಸುವ ಮೇಲೆಯೂ ಶುಭ-ಲಾಭಗಳು ನಿರ್ಣಯವಾಗುತ್ತವೆ. ವಾಸ್ತು ಶಾಸ್ತ್ರದಲ್ಲಿ ಮನೆಯ ಪ್ರತಿಯೊಂದು ಕೋಣೆಗಳೂ ವಾಸ್ತು ನಿಯಮದ ಪ್ರಕಾರ ಇರಬೇಕು. ಅದರಂತೆ ಅಡುಗೆ ಕೋಣೆ ಕೂಡ. ಆರೋಗ್ಯದಲ್ಲಿ ಆಹಾರ ಪ್ರಮುಖ ಪಾತ್ರವಹಿಸಿದಂತೆ ಅಡುಗೆ ಮನೆಯ ವಾಸ್ತುವೂ ನಮ್ಮ ಆರೋಗ್ಯ ಹಾಗೂ ಮನೆಯ ಸಮೃದ್ಧಿಗೆ ಪೂರಕವಾಗಿರಬೇಕು. ಮನೆಯ ವಾಸ್ತು ಸರಿಯಿಲ್ಲದಿದ್ದರೆ ಹಲವಾರು ಸಮಸ್ಯೆಗಳು ಬರುತ್ತದೆ. ನೆಮ್ಮದಿ ಇರುವುದಿಲ್ಲ, ಆರ್ಥಿಕವಾಗಿ ನಷ್ಟವಾಗುತ್ತದೆ. ಹಾಗಾಗಿ ಮನೆಯಲ್ಲಿ ವಾಸ್ತು ಬಹಳ ಮುಖ್ಯ. ಅಡುಗೆ ಮನೆಯಲ್ಲಿ ಪಾತ್ರೆ ತೊಳೆದ ಮೇಲೆ ಹೇಗೆ ಇಡಬೇಕು. ಇದರಿಂದ ಏನು ಲಾಭ. ಹೀಗೆ ಏಕೆ ಮಾಡಬೇಕು ಎಂಬ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಈ ವಿಡಿಯೋದಲ್ಲಿ ಮಾಹಿತಿ ನೀಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ
Published on: Feb 27, 2024 07:08 AM
Latest Videos