Loading video

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಸಚಿವ ಸ್ಥಾನ ತ್ಯಜಿಸಲು ಸಿದ್ಧ ಎಂದು ಮತ್ತೊಮ್ಮೆ ಹೇಳಿದ ಕೆಎನ್ ರಾಜಣ್ಣ

Updated on: Jun 26, 2025 | 3:33 PM

ಆಳಂದ್ ಶಾಸಕ ಬಿಆರ್ ಪಾಟೀಲ್ ಸಮಾಜವಾದಿ ಹಿನ್ನೆಲೆಯಿಂದ ಬಂದವರು, ಹಾಗಾಗಿ ಅವರೇನಾದರೂ ಹೇಳಿದರೆ ಎಲ್ಲರೂ ಗಂಭೀರವಾಗಿ ತಗೋತಾರೆ, ಅದಲ್ಲದೆ ಮುಖ್ಯಮಂತ್ರಿಯವರೊಂದಿಗೆ ಅವರಿಗೆ ವಿಶೇಷ ಸಲುಗೆ ಇದೆ, ಖಾಸಗಿಯಾಗಿ ಅವರು ಹೋಗೋ ಬಾರೋ ಅಂತ ಮಾತಾಡಿಕೊಳ್ಳುತ್ತಾರೆ, ಸಲುಗೆಯಿಂದಲೇ ಸಿದ್ದರಾಮಯ್ಯ ಬಗ್ಗೆ ಮಾತಾಡಿರಬಹುದು, ಅದಕ್ಕೆ ವಿಪರೀತ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ರಾಜಣ್ಣ ಹೇಳಿದರು.

ಬೆಂಗಳೂರು, ಜೂನ್ 26: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಹಕಾರ ಸಚಿವ ಕೆಎನ್ ರಾಜಣ್ಣ, ಕಾಂಗ್ರೆಸ್ ನಲ್ಲಿ ಪವರ್ ಸೆಂಟರ್ ಗಳ ಜಾಸ್ತಿಯಿವೆ, ಅವು ಜಾಸ್ತಿಯಾದಷ್ಟು ಪಕ್ಷಕ್ಕೆ ಒಳಿತು, ಹಾಗಾದಲ್ಲಿ ಮಾತ್ರ ಯಾರೂ ಏಕಪಕ್ಷೀಯವಾಗಿ ನಿರ್ಧಾರಗಳನ್ಮು ತೆಗೆದುಕೊಂಡು ಬೇರೆಯವರ ಮೇಲೆ ಹೇರಲಾಗಲ್ಲ ಎಂದರು. ಕೆಪಿಸಿಸಿ ಅಧ್ಯಕ್ಷನಾಗುವ (KPCC president) ಇಂಗಿತವನ್ನು ಮತ್ತೊಮ್ಮೆ ವ್ಯಕ್ತಪಡಿಸಿದ ರಾಜಣ್ಣ, ಅಧ್ಯಕ್ಷಗಿರಿಯನ್ನು ಕೊಟ್ಟರೆ ಸ್ವೀಕರಿಸುತ್ತೇನೆ ಮತ್ತು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ ಎಂದು ಹೇಳಿದರು. ಶಾಸಕ ರಾಜು ಕಾಗೆ ಮಾಡಿರುವ ಆಪಾದನೆಗೆ ರಾಜಣ್ಣ, ಅವರು ಬೆಂಗಳೂರಿಗೆ ಬರೋದು ಕಮ್ಮಿ, ಯಾವ ಸಚಿವ ಸಿಕ್ಕಿಲ್ಲ, ಮಾತಾಡಿಸಿಲ್ಲ ಅಂತ ಹೇಳಿದರೆ, ಸಿಎಲ್​ಪಿ ಸಭೆಯಲ್ಲಿ ಚರ್ಚಿಸಬಹುದು ಎಂದು ಹೇಳಿದರು.

ಇದನ್ನೂ ಓದಿ:  ಶಿವಕುಮಾರ್ 2028ರಲ್ಲಿ ಚೀಫ್ ಮಿನಿಸ್ಟ್ರಾಗಲಿ ಇಲ್ಲ ಪ್ರೈಮ್ ಮಿನಿಸ್ಟರ್, ಯಾರು ಬೇಡವೆನ್ನುತ್ತಾರೆ: ರಾಜಣ್ಣ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ