ಸಿಎಂ ಕುರ್ಚಿ ಕದನ: ಸಿದ್ದರಾಮಯ್ಯ ಭೇಟಿ ಬಳಿಕ ಬಿಗ್ ಅಪ್ಡೇಟ್ ಕೊಟ್ಟ ರಾಜಣ್ಣ

Updated on: Dec 23, 2025 | 10:36 PM

ರಾಜಕೀಯ ವಿರೋಧಿಯಾಗಿದ್ದ ಸಿದ್ದರಾಮಯ್ಯನವರ ಅತ್ಯಾಪ್ತ ಕೆಎನ್ ರಾಜಣ್ಣ ಅವರನ್ನು ಡಿಕೆ ಶಿವಕುಮಾರ್ ಎರಡು ಬಾರಿ ಭೇಟಿ ಗಾಳ ಹಾಕಲು ಯತ್ನಿಸಿದ್ದಾರೆ. ಆದ್ರೆ ಇದಕ್ಕೆ ರಾಜಣ್ಣ ಸೊಪ್ಪು ಹಾಕಿಲ್ಲ. ಡಿಕೆಶಿ ಭೇಟಿ ಬಳಿಕ ಇದೀಗ ರಾಜಣ್ಣ ಇಂದು (ಡಿಸೆಂಬರ್ 23) ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ರಹಸ್ಯ ಮಾತುಕತೆ ಮಾಡಿದ್ದಾರೆ.

ಬೆಂಗಳೂರು, (ಡಿಸೆಂಬರ್ 23): ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ (Siddaramaiah)  ಹಾಗೂ ಡಿಕೆ ಶಿವಕುಮಾರ್ (DK Shivakumar) ನಡುವಿನ ಮುಸುಕಿನ ಗುದ್ದಾಟ ಮುಂದುವರೆದಿದೆ. ಹೈಕಮಾಂಡ್ ಹೇಳಿದಂತೆ ಕೇಳುತ್ತೇನೆಂದು ಸಿದ್ದರಾಮಯ್ಯ ಕಡ್ಡಿ ಮುರಿದಂತೆ ಹೇಳಿದ್ದಾರೆ. ಇತ್ತ ಡಿಕೆ ಶಿವಕುಮಾರ್ ಹೈಕಮಾಂಡ್ ನಾಯರನ್ನು ಭೇಟಿ ಮಾಡಿ ಮನವೊಲಿಸವು ಕಸರತ್ತು ನಡೆಸಿದ್ದಾರೆ. ಇದರ ನಡುವೆ ಇತ್ತ ರಾಜ್ಯ ಕಾಂಗ್ರೆಸ್​​ನಲ್ಲಿ ಮಹತ್ವದ ಬೆಳವಣಿಗೆಗಳು ನಡೆದಿವೆ. ರಾಜಕೀಯ ವಿರೋಧಿಯಾಗಿದ್ದ ಸಿದ್ದರಾಮಯ್ಯನವರ ಅತ್ಯಾಪ್ತ ಕೆಎನ್ ರಾಜಣ್ಣ ಅವರನ್ನು ಡಿಕೆ ಶಿವಕುಮಾರ್ ಎರಡು ಬಾರಿ ಭೇಟಿ ಗಾಳ ಹಾಕಲು ಯತ್ನಿಸಿದ್ದಾರೆ. ಆದ್ರೆ ಇದಕ್ಕೆ ರಾಜಣ್ಣ ಸೊಪ್ಪು ಹಾಕಿಲ್ಲ. ಡಿಕೆಶಿ ಭೇಟಿ ಬಳಿಕ ಇದೀಗ ರಾಜಣ್ಣ ಇಂದು (ಡಿಸೆಂಬರ್ 23) ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ರಹಸ್ಯ ಮಾತುಕತೆ ಮಾಡಿದ್ದಾರೆ.

ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ರಾಜಣ್ಣ, ರಾಜ್ಯದಲ್ಲಿ ಗೊಂದಲ ನಿವಾರಣೆ ಮಾಡುವ ಕೆಲಸ ಆಗಬೇಕು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದು ಸರಿಯಾಗಿದೆ. ಹೈಕಮಾಂಡ್ ಗೊಂದಲ ಬಗೆಹರಿಸಬೇಕಾಗಿದೆ. ರಾಹುಲ್ ಗಾಂಧಿ ಹೇಳಿದ್ರೆ ಸಿಎಂ ಸ್ಥಾನ ಬಿಡುವುದಾಗಿ ಸಿಎಂ ಸಿದ್ದರಾಮಯ್ಯ ಈಗಾಗಲೇ ಹೇಳಿದ್ದಾರೆ. ಹಾಗೆಯೇ ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡ ಹೇಳಿಕೆ ನೀಡಿದ್ದಾರೆ. ಗೊಂದಲದಿಂದ ಆಡಳಿತದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಒಪ್ಪಂದ ಆಗಿಲ್ಲವೆಂದು ಸಿಎಂ ಸಿದ್ದರಾಮಯ್ಯನವರು ಹೇಳಿದ್ದಾರೆ. ಒಪ್ಪಂದ ಆಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳುತ್ತಿದ್ದಾರೆ. ಒಪ್ಪಂದದ ವಿಚಾರವನ್ನು ತಳ್ಳಿ ಹಾಕುವಂತಿಲ್ಲ. ಎಐಸಿಸಿ ಅಧ್ಯಕ್ಷರು ಬಂದಾಗ ಎಲ್ಲರೂ ಭೇಟಿಯಾಗುವುದು ಸಹಜ.
ಡಿಸಿಎಂ ಡಿ.ಕೆ.ಶಿವಕುಮಾರ್ ಆಗಿದ್ದು ಬೇರೆ, ಪತ್ರ ಬರೆದಿದ್ದು ಬೇರೆ ಎಂದಿದ್ದಾರೆ.

ಒಂದು ವೇಳೆ ರಾಹುಲ್ ಗಾಂಧಿ ಹೇಳಿದ್ರೆ ಸಿದ್ದರಾಮಯ್ಯನವರ ಸಿಎಂ ಸ್ಥಾನವನ್ನು ಬಿಟ್ಟುಕೊಡುತ್ತಾರಾ?  ಸಿಎಂ ಬಿಟ್ಟು ಕೊಡುವಂತೆ ರಾಹುಲ್ ಗಾಂಧಿ ಹೇಳಿದರೆ ಸಿದ್ದರಾಮಯ್ಯ ಬೆಂಬಲಿಗರು ಸುಮ್ನೆ ಇರುತ್ತಾರೆಯೇ? ಹೀಗೆ ಹತ್ತು ಹಲವು ಪ್ರಶ್ನೆಗಳು ಉದ್ಭವಿಸಿದ್ದು, ಬೀಸೋ ದೊಣ್ಣೆಯಿಂದ ಪಾರಾಗಲು ಸಿದ್ದರಾಮಯ್ಯ ರಾಹುಲ್ ಹೆಸರೇಳುಕೊಂಡು ಹೋಗುತ್ತಿದ್ದಾರೆ. ಹೀಗಾಗಿ ಡಿಕೆಶಿ ಸಹ ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕ ಕಡೆಯಿಂದ ರಾಹುಲ್ ಗಾಂಧಿ ಮನವೊಲಿಸುವ ಯತ್ನ ನಡೆಸಿದ್ದಾರೆ ಎನ್ನುವುದು ತಿಳಿದುಬಂದಿದ್ದು, ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ಬಂದು ನಿಲ್ಲಲಿದೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ