AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯರನ್ನು ಕಡೆಗಣಿಸಿದ್ರೆ  ದೊಡ್ಡ ಬ್ಲಂಡರ್, ಸ್ವಪಕ್ಷದ ನಾಯಕರಿಗೆ ರಾಜಣ್ಣ ಖಡಕ್ ಎಚ್ಚರಿಕೆ

ಸಿದ್ದರಾಮಯ್ಯರನ್ನು ಕಡೆಗಣಿಸಿದ್ರೆ ದೊಡ್ಡ ಬ್ಲಂಡರ್, ಸ್ವಪಕ್ಷದ ನಾಯಕರಿಗೆ ರಾಜಣ್ಣ ಖಡಕ್ ಎಚ್ಚರಿಕೆ

ರಮೇಶ್ ಬಿ. ಜವಳಗೇರಾ
|

Updated on: Jun 30, 2026 | 6:36 PM

Share

ಮುಖ್ಯಾಂಶಗಳು

  • ಸಿದ್ದರಾಮಯ್ಯರನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪಕ್ಕೆ ಎನ್.ರಾಜಣ್ಣ ಹೇಳಿಕೆ
  • ಸಿದ್ದರಾಮಯ್ಯರನ್ನು ಕಡೆಗಣಿಸಿದರೆ ಅದು ಒಂದು ದೊಡ್ಡ ಬ್ಲಂಡರ್
  • ಸಿದ್ದರಾಮಯ್ಯರನ್ನು ವಿಶ್ವಾಸಕ್ಕೆ ತಗೊಂಡು ಹೋದ್ರೆನೇ ನಾವು 2028ಕ್ಕೆ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದ ರಾಜಣ್ಣ

ಸಿದ್ದರಾಮಯ್ಯನ ಸೈಡ್ ಲೈನ್ ಗೆ ಸರಿಸೋಕೆ ಆಗಲ್ಲ. ಅವರು ಮಾಸ್ ಲೀಡರ್. ಯಾರೆಲ್ಲ ಜನರಿಂದ ಮಾಸ್ ಲೀಡರ್ ಆಗಿದ್ದಾರೆ ಅವರನ್ನು ಏನೂ ಮಾಡಲು ಆಗಲ್ಲ . ಅವರನ್ನ ಯಾವತ್ತೂ ಕೂಡ ಹಿಂದೆ ಹಾಕಲು ಆಗಲ್ಲ ಎಂದು ಖಡಕ್ ಆಗಿ ಹೇಳಿದರು. ಸಿದ್ದರಾಮಯ್ಯರನ್ನು ಸೈಡ್ ಲೈನ್ ಮಾಡುವಂತದ್ದು ಅಥವಾ ಅವರನ್ನ ದೂರ ಇಟ್ಟು ಪಕ್ಷ ಸಂಘಟನೆ ಮಾಡ್ತೀವಿ ಅಂತ ಯಾರಾದರೂ ಹೋದ್ರೆ ದೊಡ್ಡ ಬ್ಲಂಡರ್ ಆಗುತ್ತೆ. ಸಿದ್ದರಾಮಯ್ಯರನ್ನು ವಿಶ್ವಾಸಕ್ಕೆ ತಗೊಂಡು ಹೋದ್ರೆನೇ ನಾವು 2028ಕ್ಕೆ ಮತ್ತೆ ಅಧಿಕಾರಕ್ಕೆ ಬರುವ ಎಲ್ಲಾ ಅವಕಾಶಗಳು ಇದ್ದಾವೆ ಎಂದು ಹೇಳಿದರು.

ಬೆಂಗಳೂರು, (ಜೂನ್ 30): ಮಾಜಿ ಸಿಎಂ ಸಿದ್ದರಾಮಯ್ಯರನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಸಂಬಂದ ಮಾಜಿ ಸಚಿವ ಕೆಎನ್ ರಾಜಣ್ಣ ಪ್ರತಿಕ್ರಿಯಿಸಿದ್ದು, ಸರ್ಕಾರದ ಕಾರ್ಯಕ್ರಮಗಳಿಗೆ ಒಂದು ಪ್ರೋಟೋಕಾಲ್ ಇರುತ್ತದೆ. ಆ ಪ್ರೋಟೋಕಾಲ್ ಅನ್ವಯ ಮಾಡಿದ್ದಾರೆ. ಲೋಪ ಆಗಿದ್ರೆ ಸಂಬಂಧಪಟ್ಟವರ ವಿರುದ್ಧ ಕ್ರಮ ತೆಗೆದುಕೊಳ್ತಾರೆ. ಬೇರೆಯವರ ಪ್ರಶ್ನೆ ನನಗೆ ಗೊತ್ತಿಲ್ಲ, ನನ್ನ ಪ್ರಶ್ನೆ ನಾನೇ ಹೇಳ್ತೀನಿ. ನಾನು ಯಾರ ನೆರಳಲ್ಲೂ ಕೂಡ ಹೊರಗಡೆ ಬರುವಂಥದ್ದು ಆಗಲಿ. ಇನ್ನೊಬ್ಬರ ನೆರಳಿಗೆ ಸೇರಿಕೊಳ್ಳುವಂಥದ್ದು ಆಗಲಿ, ಆ ಪ್ರಯತ್ನ ಇಲ್ಲ. ಸಿದ್ದರಾಮಯ್ಯನ ಸೈಡ್ ಲೈನ್ ಗೆ ಸರಿಸೋಕೆ ಆಗಲ್ಲ. ಅವರು ಮಾಸ್ ಲೀಡರ್. ಯಾರೆಲ್ಲ ಜನರಿಂದ ಮಾಸ್ ಲೀಡರ್ ಆಗಿದ್ದಾರೆ ಅವರನ್ನು ಏನೂ ಮಾಡಲು ಆಗಲ್ಲ . ಅವರನ್ನ ಯಾವತ್ತೂ ಕೂಡ ಹಿಂದೆ ಹಾಕಲು ಆಗಲ್ಲ ಎಂದು ಖಡಕ್ ಆಗಿ ಹೇಳಿದರು.

ಸಿದ್ದರಾಮಯ್ಯರನ್ನು ಸೈಡ್ ಲೈನ್ ಮಾಡುವಂತದ್ದು ಅಥವಾ ಅವರನ್ನ ದೂರ ಇಟ್ಟು ಪಕ್ಷ ಸಂಘಟನೆ ಮಾಡ್ತೀವಿ ಅಂತ ಯಾರಾದರೂ ಹೋದ್ರೆ ದೊಡ್ಡ ಬ್ಲಂಡರ್ ಆಗುತ್ತೆ. ಸಿದ್ದರಾಮಯ್ಯರನ್ನು ವಿಶ್ವಾಸಕ್ಕೆ ತಗೊಂಡು ಹೋದ್ರೆನೇ ನಾವು 2028ಕ್ಕೆ ಮತ್ತೆ ಅಧಿಕಾರಕ್ಕೆ ಬರುವ ಎಲ್ಲಾ ಅವಕಾಶಗಳು ಇದ್ದಾವೆ ಎಂದು ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us