ಓದಲು ಹೋದ ಮಕ್ಕಳಿಗೆ ಅಡುಗೆ, ಕ್ಲೀನಿಂಗ್ ಕೆಲಸ: ಕೋಲಾರದ ಖಾಸಗಿ ಶಾಲೆಯ ಕರಾಳ ಮುಖ ಬಯಲು!

Edited By:

Updated on: Sep 06, 2026 | 12:02 PM

ಕೋಲಾರದ ಶ್ರೀ ವೇಣು ವಿದ್ಯಾ ಸಂಸ್ಥೆ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲೆಯಲ್ಲಿ ಮಕ್ಕಳಿಗೆ ಅಡುಗೆ ಮಾಡುವ, ಸ್ವಚ್ಛತಾ ಕಾರ್ಯಗಳಂತಹ ಕೆಲಸಗಳನ್ನು ಮಾಡಿಸಲಾಗುತ್ತಿದೆ. ಇದರಿಂದ ಮಕ್ಕಳ ಆರೋಗ್ಯ ಹದಗೆಡುತ್ತಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಪ್ರಶ್ನಿಸಿದಾಗ ಟಿಸಿ ನೀಡುವ ಬೆದರಿಕೆ ಹಾಕಲಾಗುತ್ತಿದೆ. ಪೋಷಕರು ಕ್ರಮಕ್ಕೆ ಆಗ್ರಹಿಸಿದ್ದಾರೆ.

ಕೋಲಾರ, ಸೆಪ್ಟೆಂಬರ್ 06: ಶ್ರೀ ವೇಣು ವಿದ್ಯಾ ಸಂಸ್ಥೆಯು ವಿದ್ಯಾರ್ಥಿಗಳಿಂದಲೇ ಅಡುಗೆ ಮತ್ತು ಸ್ವಚ್ಛತಾ ಕಾರ್ಯಗಳನ್ನು ಮಾಡಿಸುತ್ತಿದೆ ಎಂದು ಆರೋಪಿಸಿ ಪೋಷಕರು ಪ್ರತಿಭಟನೆ ನಡೆಸಿದ್ದಾರೆ. ಈ ಖಾಸಗಿ ವಸತಿ ಶಾಲೆಯಲ್ಲಿ ಮಕ್ಕಳು ಓದುವುದರ ಬದಲಿಗೆ ಶೌಚಾಲಯ ಸ್ವಚ್ಛಗೊಳಿಸುವುದು, ಅಡುಗೆ ಮಾಡುವುದು, ಪಾತ್ರೆ ತೊಳೆಯುವುದು ಮುಂತಾದ ಕೆಲಸಗಳಲ್ಲಿ ತೊಡಗಿದ್ದಾರೆ ಎಂದು ಪೋಷಕರು ದೂರಿದ್ದಾರೆ.

ಶಾಲೆಯಲ್ಲಿ ಸ್ವಚ್ಛತೆ ಇಲ್ಲದಿರುವುದರಿಂದ ಮತ್ತು ಸರಿಯಾದ ಆಹಾರ ನೀಡದಿರುವುದರಿಂದ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಓರ್ವ ಪೋಷಕಿ ತಮ್ಮ ಮಗು ಅನಾರೋಗ್ಯಕ್ಕೊಳಗಾಗಿದ್ದನ್ನು ಪ್ರಶ್ನಿಸಿದಾಗ, ಶಾಲಾ ಆಡಳಿತ ಮಂಡಳಿ ಟಿಸಿ ನೀಡಿ ಹೊರಹಾಕುವ ಬೆದರಿಕೆ ಹಾಕಿದೆ ಎಂದು ಹೇಳಿಕೊಂಡಿದ್ದಾರೆ. ಮಕ್ಕಳ ಕೈನಲ್ಲೇ ಅಡುಗೆ ಮಾಡಿಸುವುದು, ಕ್ಲೀನಿಂಗ್ ಕೆಲಸ ಮಾಡಿಸುವುದರಿಂದ ಅವರ ಭವಿಷ್ಯಕ್ಕೆ ಧಕ್ಕೆಯಾಗುತ್ತದೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಶಾಲೆಯ ವಿರುದ್ಧ ಶಿಕ್ಷಣ ಇಲಾಖೆಗೆ ದೂರು ನೀಡಲು ಪೋಷಕರು ಮುಂದಾಗಿದ್ದಾರೆ. ಮಕ್ಕಳನ್ನ ದುಡ್ಡು ಕೊಟ್ಟು ಸೇರಿಸಿದರೆ ಅವರನ್ನ ಕೆಲಸದವರಂತೆ ನಡೆಸಿಕೊಳ್ಳಲಾಗುತ್ತಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us