ಮೃತ ಕೋತಿಗೆ ವೈಕುಂಠ ಸಮಾರಾಧನೆ: ನೂರಾರು ಜನರಿಗೆ ಅನ್ನಸಂತರ್ಪಣೆ

Edited By:

Updated on: Aug 04, 2026 | 12:49 PM

ಕೋಲಾರ ತಾಲೂಕಿನ ತೊಟ್ಲಿ ಗ್ರಾಮದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕೋತಿಗೆ ಗ್ರಾಮಸ್ಥರು ಆಂಜನೇಯನ ಪ್ರತಿರೂಪವೆಂದು ನಂಬಿ ಶಾಸ್ತ್ರೋಕ್ತವಾಗಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. 11ನೇ ದಿನದ 'ವೈಕುಂಠ ಸಮಾರಾಧನೆ'ಯನ್ನು ವೈಭವದಿಂದ ಆಚರಿಸಿ, ಮಹಾ ಪ್ರಸಾದ ವಿನಿಯೋಗ ಮಾಡಿದ್ದಾರೆ. ಇದು ಭಾರತೀಯ ಗ್ರಾಮೀಣ ಸಂಸ್ಕೃತಿ ಮತ್ತು ಪ್ರಾಣಿ ಪ್ರೀತಿಯ ಅಪರೂಪದ ಸಂಗಮವಾಗಿದೆ.

ಕೋಲಾರ ಆ 4: ಕೋತಿಯನ್ನು ಆಂಜನೇಯನ ಪ್ರತಿರೂಪವೆಂದು ಪೂಜಿಸುವ ಭಾರತೀಯ ಕೃಷಿ ಹಾಗೂ ಗ್ರಾಮೀಣ ಸಂಸ್ಕೃತಿಯ ಅಪರೂಪದ ಭಕ್ತಿಪ್ರಧಾನ ಘಟನೆಯೊಂದು ಕೋಲಾರ ತಾಲೂಕಿನ ತೊಟ್ಲಿ ಗ್ರಾಮದಲ್ಲಿ ನಡೆದಿದೆ. ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಕೋತಿಯೊಂದಕ್ಕೆ ಗ್ರಾಮಸ್ಥರೆಲ್ಲರೂ ಸೇರಿ ಸಕಲ ಶಾಸ್ತ್ರೋಕ್ತವಾಗಿ ಅಂತ್ಯಸಂಸ್ಕಾರ ನೆರವೇರಿಸಿದ್ದಲ್ಲದೆ, ಇದೀಗ 11ನೇ ದಿನದ ‘ವೈಕುಂಠ ಸಮಾರಾಧನೆ’ ಕಾರ್ಯಕ್ರಮವನ್ನೂ ಅತ್ಯಂತ ವೈಭವದಿಂದ ನೆರವೇರಿಸಿದ್ದಾರೆ. ಕೆಲವು ದಿನಗಳ ಹಿಂದೆ ತೊಟ್ಲಿ ಗ್ರಾಮದ ವ್ಯಾಪ್ತಿಯಲ್ಲಿ ರಸ್ತೆ ಅಪಘಾತಕ್ಕೀಡಾಗಿ ಮೃತಪಟ್ಟಿದ್ದ ಕೋತಿಯನ್ನು ಕಂಡ ಗ್ರಾಮಸ್ಥರು, ಅದನ್ನು ಕೇವಲ ಪ್ರಾಣಿ ಎಂದು ಭಾವಿಸದೆ ಶ್ರೀ ಆಂಜನೇಯ ಸ್ವಾಮಿಯ ಪ್ರತಿರೂಪವೆಂದು ನಂಬಿ ಭಕ್ತಿಯಿಂದ ವಿಧಿವಿಧಾನಗಳ ಪ್ರಕಾರ ಅಂತ್ಯಸಂಸ್ಕಾರ ನೆರವೇರಿಸಿದ್ದರು. ಅಂತ್ಯಸಂಸ್ಕಾರ ಮುಗಿದ 11ನೇ ದಿನದಂದು ಕೋತಿಯ ಸಮಾಧಿ ಸ್ಥಳವನ್ನು ಹೂವುಗಳಿಂದ ಶೃಂಗರಿಸಿ, ವಿಶೇಷ ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ವೈಕುಂಠ ಸಮಾರಾಧನೆಯ ಅಂಗವಾಗಿ ಗ್ರಾಮಸ್ಥರೆಲ್ಲರೂ ಒಂದಾಗಿ ಸೇರಿ ನೂರಾರು ಜನರಿಗೆ ಆಸರೆಯಾಗಿ ಮಹಾ ಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ (ಊಟದ ವ್ಯವಸ್ಥೆ) ಏರ್ಪಡಿಸಿದ್ದರು. ಪ್ರಾಣಿಯೊಂದರ ಮೇಲಿರುವ ಭಕ್ತಿ ಹಾಗೂ ವಾತ್ಸಲ್ಯಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us