ಕೊಪ್ಪಳದ ಅಜ್ಜನ ಜಾತ್ರೆಗೆ ಅದ್ದೂರಿ ಚಾಲನೆ: ಎಲ್ಲೆಲ್ಲೂ ಭಕ್ತಗಣ, ವಿಡಿಯೋ ನೋಡಿ
ದಕ್ಷಿಣ ಕುಂಭಮೇಳ ಎಂದೇ ಸುಪ್ರಸಿದ್ದವಾಗಿರುವ ಕೊಪ್ಪಳದ ಗವಿಮಠದ ಅಜ್ಜನ ಜಾತ್ರೆಗೆ ಅದ್ದೂರಿ ಚಾಲನೆ ಸಿಕ್ಕಿದೆ. ಭಕ್ತಿ, ಭಾವದಿಂದ ಎಳೆಯುವ ಭವ್ಯ ರಥೋತ್ಸವಕ್ಕೆ ಸುತ್ತೂರು ಮಠದ ಶ್ರೀಗಳು ಚಾಲನೆ ನೀಡಿದ್ದಾರೆ. ರಥೋತ್ಸವಕ್ಕೆ ಚಾಲನೆ ಕೊಟ್ಟ ಬಳಿಕ ಗವಿಮಠದ ಶ್ರೀಗಳು ಆರ್ಶಿವಚನ ನೀಡಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಕೂಡ ಜಾತ್ರೆಯಲ್ಲಿ ಭಾಗವಹಿಸಿದ್ದರು.
ಕೊಪ್ಪಳ, ಜನವರಿ 27: ದಿಕ್ಕು ದಿಕ್ಕಿನಲ್ಲೂ ಜನ. ಎಲ್ಲೆಲ್ಲೂ ಭಕ್ತಗಣ. ಭಕ್ತ ಸಾಗರವೇ ತುಂಬಿ ತುಳುಕುತ್ತಿದೆ. ನಡುವೆ ಭಕ್ತಿ, ಭಾವದ ನೌಕೆ ಸಾಗುತ್ತಿದೆ. ತೇರಿನಲ್ಲಿ ವಿರಾಜಮಾನನಾಗಿರುವ ಗವಿಸಿದ್ದೇಶ್ವರನಿಗೆ ಎಲ್ಲರೂ ಪರಾಕ್ ಹಾಕಿದ್ದಾರೆ. ದಕ್ಷಿಣ ಕುಂಭಮೇಳ ಎಂದೇ ಸುಪ್ರಸಿದ್ದವಾಗಿರುವ ಕೊಪ್ಪಳದ ಗವಿಮಠದ ಅಜ್ಜನ ಜಾತ್ರೆ (gavisiddeshwar fair) ಗೆ ಅದ್ದೂರಿ ಚಾಲನೆ ಸಿಕ್ಕಿದೆ. ಭಕ್ತಿ, ಭಾವದಿಂದ ಎಳೆಯುವ ಭವ್ಯ ರಥೋತ್ಸವಕ್ಕೆ ಸುತ್ತೂರು ಮಠದ ಶ್ರೀಗಳು ಚಾಲನೆ ನೀಡಿದ್ದಾರೆ. ರಥೋತ್ಸವಕ್ಕೆ ಚಾಲನೆ ಕೊಟ್ಟ ಬಳಿಕ ಗವಿಮಠದ ಶ್ರೀಗಳು ಆರ್ಶಿವಚನ ನೀಡಿದ್ರು. ಭಕ್ತರ ಹೃದಯದಲ್ಲಿ ಗವಿಸಿದ್ದೇಶ್ವರ ಇದ್ದಾನೆ ಎಂದು ಹೇಳಿದ್ದಾರೆ. ಇನ್ನು ಡಿಸಿಎಂ ಡಿಕೆ ಶಿವಕುಮಾರ್ ಕೂಡ ಜಾತ್ರೆಯಲ್ಲಿ ಭಾಗವಹಿಸಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.