ಗವಿಮಠದ ಜಾತ್ರೆಯಲ್ಲಿ ಭಕ್ತ ಸಾಗರ: ಜನರ ನಿಯಂತ್ರಣಕ್ಕೆ ಖುದ್ದು ಅಖಾಡಕ್ಕಿಳಿದ ಎಸ್ಪಿ
ಕೊಪ್ಪಳದ ಗವಿಮಠ ಜಾತ್ರೆಯಲ್ಲಿ ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ್ದರಿಂದ ದಾಸೋಹದ ಬಳಿ ಜನಸಂದಣಿ ಹೆಚ್ಚಾಗಿತ್ತು. ಇದನ್ನು ನಿಯಂತ್ರಿಸಲು ಕೊಪ್ಪಳ ಎಸ್ಪಿ ಸ್ವತಃ ಚೇರ್ ಮೇಲೆ ನಿಂತು ಭಕ್ತರಿಗೆ ಮಾರ್ಗದರ್ಶನ ನೀಡಿದರು. ದಾಖಲೆಗಳಿಗೆ ಸಹಿ ಹಾಕುತ್ತಾ, ಪೊಲೀಸರೊಂದಿಗೆ ಬ್ಯಾರಿಕೇಡ್ ಬಳಸಿ ಸುವ್ಯವಸ್ಥೆ ಕಾಪಾಡಿದರು.
ಕೊಪ್ಪಳ, ಜನವರಿ 07: ಗವಿಮಠದ ಜಾತ್ರೆಗೆ ಈ ಬಾರಿ ಭಕ್ತರ ಸಂಖ್ಯೆ ನಿರೀಕ್ಷೆಗಿಂತಲೂ ಹೆಚ್ಚಾಗಿ ಆಗಮಿಸಿದ ಪರಿಣಾಮ, ದಾಸೋಹದಲ್ಲಿ ನೂಕು ನುಗ್ಗಲು ಕಂಡುಬಂತು. ಇದನ್ನು ಗಮನಿಸಿದ ಕೊಪ್ಪಳದ ಪೊಲೀಸ್ ವರಿಷ್ಠಾಧಿಕಾರಿ ಸ್ವತಃ ಅಖಾಡಕ್ಕಿಳಿದು ಗಮನ ಸೆಳೆದರು. ಚೇರ್ ಮೇಲೆ ನಿಂತುಕೊಂಡು ಭಕ್ತರನ್ನ ಡಾ. ರಾಮ್ ಎಲ್. ಅರಸಿದ್ದಿ ನಿಯಂತ್ರಿಸಿದ್ದು, ಅಲ್ಲೇ ಹಲವು ಪ್ರಮುಖ ಕಡತಗಳಿಗೆ ಸಹಿ ಹಾಕಿದ ದೃಶ್ಯಗಳು ಕೂಡ ಕಂಡುಬಂದವು. ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ಜನರನ್ನು ಸಾಲಾಗಿ ನಿಲ್ಲಿಸಿ, ಸರಾಗವಾಗಿ ದಾಸೋಹ ಮತ್ತು ಪ್ರಸಾದ ವಿತರಣೆಗೆ ಅನುಕೂಲ ಮಾಡಿಕೊಟ್ಟರು.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Jan 07, 2026 09:35 AM
