ಕೊಪ್ಪಳ: ‘ನಾಳೆ ಇರ್ತಿನೋ ಇಲ್ವೋ’ ಎಂದು ರೀಲ್ಸ್ ಮಾಡಿದ್ದ ಸ್ವಾಮೀಜಿ ಸಾವು
‘ನಾಳೆ ಇರ್ತಿನೋ ಇಲ್ವೋ, ಏನ ಮಾಡ್ತಿನೋ ಗೊತ್ತಿಲ್ಲ’ ಎಂದು ರೀಲ್ಸ್ ಮಾಡಿದ್ದ ಸ್ವಾಮೀಜಿ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಬಳಿ ನಡೆದಿದೆ. ಆಂಧ್ರ ಮೂಲದ ಲಕ್ಷ್ಮಯ್ಯ ಮೃತ ಸ್ವಾಮೀಜಿ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕೊಪ್ಪಳ, ಸೆಪ್ಟೆಂಬರ್ 08: ‘ನಾಳೆ ಇರ್ತಿನೋ ಇಲ್ವೋ, ಏನ ಮಾಡ್ತಿನೋ ಗೊತ್ತಿಲ್ಲ’ ಎಂದು ರೀಲ್ಸ್ ಮಾಡಿದ್ದ ಸ್ವಾಮೀಜಿ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಬಳಿ ನಡೆದಿದೆ. ಆಂಧ್ರ ಮೂಲದ ಲಕ್ಷ್ಮಯ್ಯ ಮೃತ ಸ್ವಾಮೀಜಿ. ಸ್ನಾನ ಮಾಡಲು ಹೋದಾಗ ನೀರಿನಲ್ಲಿ ಮುಳುಗಿದ್ದರು. ಬಳಿಕ ಸ್ಥಳೀಯರು ರಕ್ಷಣೆ ಮಾಡಿದ್ದರು. ಬಳಿಕ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
