AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಲಿ ಬಂದಿದೆ ಎಂದು ಎಐ ವಿಡಿಯೋ ಹರಿಬಿಟ್ಟ ಯುವಕ! ಅರಣ್ಯ ಸಿಬ್ಬಂದಿ ಮಾಡಿದ್ದೇನು ಗೊತ್ತಾ?

ಹುಲಿ ಬಂದಿದೆ ಎಂದು ಎಐ ವಿಡಿಯೋ ಹರಿಬಿಟ್ಟ ಯುವಕ! ಅರಣ್ಯ ಸಿಬ್ಬಂದಿ ಮಾಡಿದ್ದೇನು ಗೊತ್ತಾ?

ಶಿವಕುಮಾರ್ ಪತ್ತಾರ್
| Edited By: |

Updated on: Sep 06, 2026 | 10:21 AM

Share

ಕೊಪ್ಪಳ ತಾಲೂಕಿನ ಕವಳಿ ಗ್ರಾಮದಲ್ಲಿ ಮನೆಯಲ್ಲಿ ಕೆಲಸ ತಪ್ಪಿಸಿಕೊಳ್ಳಲು ಎಐ (AI) ತಂತ್ರಜ್ಞಾನ ಬಳಸಿ ಹುಲಿ ಬಂದಿದೆ ಎಂದು ನಕಲಿ ವಿಡಿಯೋ ಹರಿಬಿಟ್ಟು ಆತಂಕ ಸೃಷ್ಟಿಸಿದ್ದ ಈರಣ್ಣ ಎಂಬ ಯುವಕನಿಗೆ ಅರಣ್ಯಾಧಿಕಾರಿಗಳು ತಕ್ಕ ಶಾಸ್ತಿ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿದ ಈತನಿಗೆ ಸ್ಥಳದಲ್ಲೇ 50 ಬಸ್ಕಿ ಹೊಡೆಯುವ ಶಿಕ್ಷೆ ವಿಧಿಸಿ ಎಚ್ಚರಿಕೆ ನೀಡಿದ್ದಾರೆ.

ಕೊಪ್ಪಳ, ಸೆಪ್ಟೆಂಬರ್ 06: ಮನೆಯವರು ಕೆಲಸಕ್ಕೆ ಹೋಗು ಎಂದಿದ್ದಕ್ಕೆ ತಪ್ಪಿಸಿಕೊಳ್ಳಲು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ‘ಹುಲಿ ಬಂದಿದೆ’ ಎಂದು ನಕಲಿ ವಿಡಿಯೋ ಹರಿಬಿಟ್ಟಿದ್ದ ಯುವಕನಿಗೆ ಅರಣ್ಯ ಇಲಾಖೆ ತಕ್ಕ ಶಾಸ್ತಿ ಮಾಡಿದೆ. ಕೊಪ್ಪಳ ತಾಲೂಕಿನ ಕವಳಿ ಗ್ರಾಮದ ಈರಣ್ಣ ಎಂಬ ಯುವಕ, ತೋಟದಲ್ಲಿ ಹುಲಿ ಬಂದಿರುವಂತೆ ಎಐ ವಿಡಿಯೋ ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದನು. ಇದು ಗ್ರಾಮಸ್ಥರಲ್ಲಿ ತೀವ್ರ ಆತಂಕ ಸೃಷ್ಟಿಸಿತ್ತು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅರಣ್ಯಾಧಿಕಾರಿಗಳು ಪರಿಶೀಲಿಸಿದಾಗ ಇದು ಎಐ ಕೃತ್ಯ ಎಂಬುದು ಬಯಲಾಗಿದೆ. ಸುಳ್ಳು ಸುದ್ದಿ ಹರಡಿ ಭೀತಿ ಹುಟ್ಟಿಸಿದ್ದಕ್ಕೆ ಅಧಿಕಾರಿಗಳು ಯುವಕನಿಗೆ ಸ್ಥಳದಲ್ಲೇ 50 ಬಸ್ಕಿ ಹೊಡೆಯುವ ಶಿಕ್ಷೆ ವಿಧಿಸಿ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us