ಯೋಗೇಶ್ವರ್ರನ್ನು ಮುಖ್ಯಮಂತ್ರಿ ಮನೆಗೆ ತಮ್ಮ ಕಾರಲ್ಲೇ ಕರೆದೊಯ್ದ ಡಿಕೆ ಶಿವಕುಮಾರ್
ಇಂದು ಬೆಳ್ಳಂಬೆಳಗ್ಗೆಯೇ ಡಿಕೆ ಸುರೇಶ್ ತಮ್ಮ ಅಣ್ಣನ ಮನೆಗೆ ಬಂದಾಗ ಮಹತ್ವದ ಘಟನೆಯೊಂದು ನಡೆಯಲಿರುವ ಸೂಚನೆ ಮಾಧ್ಯಮದವರಿಗೆ ಸಿಕ್ಕಿತ್ತು. ನಿನ್ನೆ ಯೋಗೇಶ್ವರ್ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಹೆಚ್ಡಿ ಕುಮಾರಸ್ವಾಮಿ ಬೇಸ್ತು ಬಿದ್ದಿರೊದು ಸತ್ಯ.
ಬೆಂಗಳೂರು: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ಮೊದಲ ಸುತ್ತಿನ ಗೆಲುವು ದಕ್ಕಿದೆ. ನಿನ್ನೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಹೇಳುತ್ತಿದ್ದ ಸಿಪಿ ಯೋಗೇಶ್ವರ್ ಇವತ್ತು ಬೆಳಗ್ಗೆಯೇ ಶಿವಕುಮಾರ್ ನಿವಾಸದ ಕದ ತಟ್ಟಿದರು! ನಂತರ ಶಿವಕುಮಾರ್ ಅವರು ಯೋಗೇಶ್ವರ್ ಅವರನ್ನು ತಮ್ಮ ಕಾರಲ್ಲಿ ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಕರೆದೊಯ್ದರು. ಯೋಗೇಶ್ವರ್ ಕಾಂಗ್ರೆಸ್ ಪಕ್ಷ ಸೇರಿದರೆ ಟಿಕೆಟ್ ಅವರಿಗೆ ನಿಶ್ಚಿತ ಅಂತ ಬೇರೆ ಹೇಳಬೇಕೇ?
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಯೋಗೇಶ್ವರ್ಗಾಗಿ ಕಾದು ಕುಳಿತ ಕಾಂಗ್ರೆಸ್, ಒಂದು ವೇಳೆ ಕೈಕೊಟ್ಟರೆ ಪ್ಲಾನ್ ಬಿ ರೆಡಿ
Published on: Oct 23, 2024 10:44 AM
Latest Videos