ಯೋಗೇಶ್ವರ್​​​ಗಾಗಿ ಕಾದು ಕುಳಿತ ಕಾಂಗ್ರೆಸ್, ಒಂದು ವೇಳೆ ಕೈಕೊಟ್ಟರೆ ಪ್ಲಾನ್ ಬಿ ರೆಡಿ

ಕುಮಾರಸ್ವಾಮಿ ನೀಡಿದ್ದ ಆಫರ್​ ದಿಕ್ಕರಿಸಿ ಸಿಪಿ ಯೋಗೇಶ್ವರ್​ ಬಿಜೆಪಿ ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಚನ್ನಪಟ್ಟಣದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಇದರಿಂದ ದಳಪತಿಗಳಿಗೆ ದಿಕ್ಕುತೋಚದಂತಾಗಿದೆ. ಎನ್​ಡಿಎ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ರಾಜ್ಯ ಬಿಜೆಪಿ ನಾಯಕರು ಮತ್ತು ಕುಮಾರಸ್ವಾಮಿ ನಡುವೆ ಕೊಂಚ ಮಟ್ಟಿಗೆ ಅಸಮಾಧಾನ ಸ್ಫೋಟಗೊಂಡಂತಿದೆ. ಇದರ ಮಧ್ಯ ಕಾಂಗ್ರೆಸ್​​ ತನ್ನದೇ ಆದ ಲೆಕ್ಕಾಚಾರವನ್ನು ಹಾಕಿದೆ.

ಯೋಗೇಶ್ವರ್​​​ಗಾಗಿ ಕಾದು ಕುಳಿತ ಕಾಂಗ್ರೆಸ್, ಒಂದು ವೇಳೆ ಕೈಕೊಟ್ಟರೆ ಪ್ಲಾನ್ ಬಿ ರೆಡಿ
Follow us
ಪ್ರಸನ್ನ ಗಾಂವ್ಕರ್​
| Updated By: ರಮೇಶ್ ಬಿ. ಜವಳಗೇರಾ

Updated on: Oct 22, 2024 | 8:58 PM

ಬೆಂಗಳೂರು, (ಅಕ್ಟೋಬರ್ 22): ಚನ್ನಪಟ್ಟಣ ಎನ್ನೋ ಗೊಂಬೆಯ ನಾಡಿನಲ್ಲಿ ರಾಜಕೀಯದ್ದೇ ಚದುರಂಗದಾಟ ನಡೆದಿದೆ. ಲೆಕ್ಕಾಚಾರಗಳ ರಹಸ್ಯ ಭೇಟಿಗಳ ನಡುವೆ ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿ ಯಾರೂ ಎಂಬುದು ಇನ್ನೂ ಸಸ್ ಸಸ್ಪೆನ್ಸ್ ಆಗಿಯೇ ಉಳಿದಿದೆ. ಹೌದು… ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಬಿಜೆಪಿಯಿಂದ ಅಥವಾ ಕಾಂಗ್ರೆಸ್ ನಿಂದ ಅಭ್ಯರ್ಥಿ ಯಾರು ಎಂಬುದಕ್ಕೆ ಇವತ್ತೇ ಕ್ಲೈಮ್ಯಾಕ್ಸ್ ಎಂದು ಭಾವಿಸಲಾಗಿತ್ತು. ಆದರೆ ಇವತ್ತು ಇಡೀ ದಿನ ಅಭ್ಯರ್ಥಿ ಯಾರು ಎಂಬ ಸಸ್ಪೆನ್ಸ್ ರಿವೀಲ್ ಆಗಿಲ್ಲ. ಇವತ್ತು ಬೆಳಗ್ಗೆ ದಿಂದ ಬಿಜೆಪಿ ಪಾಳಯದಿಂದ ಏನಾದರೂ ಒಂದು ಮೆಸೇಜ್ ಬರಬಹುದು ಎಂದು ಸಿಪಿ ಯೋಗೇಶ್ವರ್ ಕಾಯುತ್ತ ಕುಳಿತಿದ್ದರು. ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದ ಸಿಪಿ ಯೋಗೇಶ್ವರ್ ಇನ್ನೂ ಕೂಡ ತಾನು ಎನ್.ಡಿ.ಎ ಅಭ್ಯರ್ಥಿಯೇ ಆಗಬೇಕು ಎಂಬ ಲೆಕ್ಕಾಚಾರದಲ್ಲಿದ್ದಾರೆ.

ಜೆಡಿಎಸ್ ನ ಸಿಂಬಲ್ ನಲ್ಲಿ ಸ್ಪರ್ಧೆ ಮಾಡುವುದಕ್ಕೆ ಸಿಪಿ ಯೋಗೀಶ್ವರ್ ಸಿದ್ಧರಿಲ್ಲ. ಚನ್ನಪಟ್ಟಣ ಕ್ಷೇತ್ರವನ್ನು ಬಿಟ್ಟು ಕೊಡೋದಕ್ಕೆ ಎಚ್ ಡಿ ಕುಮಾರಸ್ವಾಮಿ ರೆಡಿ ಇಲ್ಲ. ಹೀಗಾಗಿ ಅತ್ತ ಜೆಡಿಎಸ್ ಸಭೆಯ ನಡುವೆಯೂ ಸಿಪಿ ಯೋಗೇಶ್ವರ್ ಬಿಜೆಪಿ ನಾಯಕರ ಮೆಸೇಜಿಗೆ ಕಾದು ಕುಳಿತಿದ್ದರು. ಯೋಗೇಶ್ವರ್ ನಡೆ ಹೀಗೆ ನಿಗೂಢವಾಗಿದ್ದರೆ. ಯೋಗೀಶ್ವರ್ ಕಡೆ ಮುಖಮಾಡಿ ನಿಂತದ್ದು ಮತ್ತೊಂದು ರಾಷ್ಟ್ರೀಯ ಪಕ್ಷ ಕಾಂಗ್ರೆಸ್.

ಇದನ್ನೂ ಓದಿ: ಯೋಗೇಶ್ವರ್ ಪ್ರಭಾವಿ ನಾಯಕ ಕಾಂಗ್ರೆಸ್​ಗೆ ಬಂದರೆ ಪಕ್ಷಕ್ಕೆ ಅನುಕೂಲ: ಹೆಚ್​ಸಿ ಬಾಲಕೃಷ್ಣ

ಯೋಗೇಶ್ವರ್​ಗಾಗಿ ಬಾಗಿಲು ತೆರೆದ ಕಾಂಗ್ರೆಸ್

ಯೋಗೀಶ್ವರನ ಬರಮಾಡಿಕೊಳ್ಳುವುದಕ್ಕೆ ಕಾಂಗ್ರೆಸ್ ರೆಡ್ ಕಾರ್ಪೆಟ್ ಹಾಕಿ ಬಾಗಿಲು ತೆರೆದು ನಿಂತಿದೆ. ಯೋಗೀಶ್ವರ್ ಪಕ್ಷಕ್ಕೆ ಬರಬಹುದು ಎಂಬ ಕಾರಣಕ್ಕೆ ನಿನ್ನೆ(ಅ.21) ತಡರಾತ್ರಿವರೆಗೂ ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಆಪ್ತ ಶಾಸಕರ ಜೊತೆಗೆ ಮೀಟಿಂಗ್ ಮಾಡಿದ್ದಾರೆ. ಇಂದು ಬೆಳಗ್ಗೆಯ ಹೊತ್ತಿಗೆ ಸಿಪಿ ಯೋಗೀಶ್ವರ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಗ್ರೀನ್ ಸಿಗ್ನಲ್ ನೀಡಬಹುದು ಎಂದು ಕಾಂಗ್ರೆಸ್ ಕೂಡ ಕಾದಿತ್ತು. ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಾತುಕತೆಗಳು ಹೈಕಮಾಂಡ್ ಮಟ್ಟದಲ್ಲೂ ನಡೆದಿದ್ದು ಸಿಎಂ ಕೂಡ ಯೋಗೇಶ್ ಅವರಿಗೆ ಸ್ವಾಗತ ಕೋರಿದ್ದಾರೆ. ಆದ್ರೆ ಯಾವಾಗ ಮಧ್ಯಾಹ್ನದ ವೇಳೆಗೂ ಯೋಗೇಶ್ವರ್​​​ ಕಾಂಗ್ರೆಸ್ ಸೇರುವ ಬಗ್ಗೆ ಮೆಸೇಜ್ ಬರಲಿಲ್ಲವೋ ಆಗ ಕಾಂಗ್ರೆಸ್ ತನ್ನ ಪ್ಲಾನ್ ಬಿ ಅನ್ನ ಯೋಚನೆ ಮಾಡಿದೆ.

ಕಾಂಗ್ರೆಸ್ ಪ್ಲಾನ್ ಬಿ ರೆಡಿ

ಯೋಗೀಶ್ವರನ ಸೇರಿಸಿಕೊಳ್ಳಲು ಕಾಂಗ್ರೆಸ್ ತುದಿಗಳಲ್ಲಿ ನಿಂತಿರೋದು ಸತ್ಯ ಎ​ಚ್‍ಡಿ ಕುಮಾರಸ್ವಾಮಿಯನ್ನು ಬಗ್ಗು ಬಡಿಯಬೇಕು ಅಂದ್ರೆ ಅದಕ್ಕೆ ಯೋಗೀಶ್ವರ್ ಮತ್ತು ಕಾಂಗ್ರೆಸ್ ಪಕ್ಷದ ಕಾಂಬಿನೇಷನ್ ಸೂಕ್ತ ಎಂಬ ಲೆಕ್ಕಾಚಾರ ಡಿಕೆ ಸಹೋದರರದ್ದು. ಆದರೆ ಯೋಗೀಶ್ವರ್ ಜೆಡಿಎಸ್ ಬಿಜೆಪಿ ಒಕ್ಕೂಟದ ಅಭ್ಯರ್ಥಿಯಾದರೆ ಆಗ ಕಾಂಗ್ರೆಸ್ ಪ್ಲಾನ್ ಬದಲಾಗಲಿದೆ. ಒಂದು ಕಡೆ ಡಿಕೆ ಸುರೇಶ್ ಕೂಡ ಚುನಾವಣೆ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ರೆ ಮತ್ತೊಬ್ಬ ಅಭ್ಯರ್ಥಿ ರಘುನಂದನ್ ರಾಮಣ್ಣ ಚುನಾವಣೆಗೆ ತಯಾರಿ ಮಾಡಿಕೊಳ್ಳುವಂತೆ, ಡಿಕೆ ಬ್ರದರ್ಸ್ ಸೂಚಿಸಿದ್ದಾರೆ.

ಅಕಸ್ಮಾತ್ ಯೋಗೀಶ್ವರ್ ಪಕ್ಷೇತರವಾಗಿ ನಿಂತು ಜೆಡಿಎಸ್ ಕೂಡ ತನ್ನ ಕ್ಯಾಂಡಿಡೇಟ್ ಇಳಿಸಿದರೆ ಆಗ ಡಿಕೆ ಸುರೇಶ್ ಸ್ವಲ್ಪ ಮಟ್ಟಿಗೆ ರಿಸ್ಕ್ ಎದುರಿಸಬಹುದು ಅಥವಾ ಇದು ಯಾವ ಗೊಂದಲವು ಬೇಡವೇ ಬೇಡ ಎಂದು ರಘುನಂದನ್ ರಾಮಣ್ಣ ಅವರನ್ನು  ಚನ್ನಪಟ್ಟಣದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಸಾಧ್ಯತೆ ಇದೆ.

ಇಲ್ಲಿ ಮತ್ತೊಂದು ವಿಷಯ ಅತ್ಯಂತ ಗಮನಹರವಾದ್ದು ಪ್ರತಿ ಬಾರಿಯೂ ಕಾಂಗ್ರೆಸ್ ನೇರ ನೇರವಾಗಿ ಅಭ್ಯರ್ಥಿಯನ್ನ ಕಣಕ್ಕಿಳಿಸುತ್ತಿತ್ತು. ಆದರೆ, ಸದ್ಯ ಜೆಡಿಎಸ್ ಬಿಜೆಪಿ ಮೈತ್ರಿ ನಾಯಕರ ನಡೆ ನೋಡಿಕೊಂಡು ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಡಿಸೈಡ್ ಮಾಡಲಿದೆ. ಕಾಂಗ್ರೆಸ್ ಕಡೆ ಸಿಪಿ ಯೋಗೀಶ್ವರ್ ಬಂದರೆ ಯೋಗೇಶ್ವರ್ ಅಭ್ಯರ್ಥಿ ಆಗ್ತಾರೆ. ಇಲ್ಲದೆ ಹೋದರೆ ಕಾಂಗ್ರೆಸ್ ನ ಸ್ಟ್ರಾಟಜೀ ಸಂಪೂರ್ಣವಾಗಿ ಬದಲಾಗಲಿದೆ. ಕಾಂಗ್ರೆಸ್ ನಾಯಕರಿಗೆ ಅದರಲ್ಲೂ ಡಿಕೆ ಸಹೋದರರಿಗೆ ಚನ್ನಪಟ್ಟಣದಲ್ಲಿ ಕುಮಾರಸ್ವಾಮಿಗೆ ಮತ್ತು ಜೆಡಿಎಸ್ ಗೆ ಮಣ್ಣುಮುಕ್ಕಿಸಬೇಕು ಅನ್ನೋ ಜಿದ್ದಂತು ಇದ್ದೇ ಇದೆ