ಡಿಕೆ ಶಿವಕುಮಾರ ಮಾನಸಿಕ ಮತ್ತು ದೈಹಿಕವಾಗಿ ಬಳಲಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ

ಡಿಕೆ ಶಿವಕುಮಾರ ಮಾನಸಿಕ ಮತ್ತು ದೈಹಿಕವಾಗಿ ಬಳಲಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 16, 2022 | 2:45 PM

ಈ ಸಂದರ್ಭದಲ್ಲಿ ಟಿವಿ9 ಕನ್ನಡ ವಾಹಿನಿಯ ಪ್ರತಿನಿಧಿಯೊಂದಿಗೆ ಮಾತಾಡುವಾಗ ಶಿವಕುಮಾರ ವಿಪರೀತ ದಣಿದಿದ್ದರು ಮತ್ತು ನಡೆಯುವಾಗ ಅವರ ಹೆಜ್ಜೆ ತಪ್ಪುತಿತ್ತು. ಆಯತಪ್ಪಿ ಹಿಂದಕ್ಕೆ ಬೀಳಲಿದ್ದ ಅವರನ್ನು ಕಾರ್ಯಕರ್ತರು ಹಿಡಿಯುತ್ತಾರೆ.

Bengaluru:  ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಅವರು ನಿಸ್ಸಂದೇಹವಾಗಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಬಳಲುತ್ತಿದ್ದಾರೆ ಅನ್ನೋದಿಕ್ಕೆ ಈ ವಿಡಿಯೋ ಸಾಕ್ಷಿ ಮಾರಾಯ್ರೇ. ನ್ಯಾಶನಲ್ ಹೆರಾಲ್ಡ್ (National Herald) ಪತ್ರಿಕೆಗೆ ಸಂಬಂಧಿಸಿದಂತೆ ಹಣ ದುರುಪಯೋಗ ಪ್ರಕರಣದ ಹಿನ್ನೆಲೆಯಲ್ಲಿ ರಾಹುಲ್ ಮತ್ತು ಸೋನಿಯಾ ಗಾಂಧಿಯವರನ್ನು (Sonia Gandhi) ಈಡಿ (ED) ವಿಚಾರಣೆಗೆ ಕರೆದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಶಿವಕುಮಾರ ನೇತೃತ್ವದಲ್ಲಿ ರಾಜ ಭವನ ಚಲೋ ರ್ಯಾಲಿ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಟಿವಿ9 ಕನ್ನಡ ವಾಹಿನಿಯ ಪ್ರತಿನಿಧಿಯೊಂದಿಗೆ ಮಾತಾಡುವಾಗ ಶಿವಕುಮಾರ ವಿಪರೀತ ದಣಿದಿದ್ದರು ಮತ್ತು ನಡೆಯುವಾಗ ಅವರ ಹೆಜ್ಜೆ ತಪ್ಪುತಿತ್ತು. ಆಯತಪ್ಪಿ ಹಿಂದಕ್ಕೆ ಬೀಳಲಿದ್ದ ಅವರನ್ನು ಕಾರ್ಯಕರ್ತರು ಹಿಡಿಯುತ್ತಾರೆ. ಭಾರತ್ ಜೋಡೋ ಆಂದೋಲನ ಕಾಂಗ್ರೆಸ್ ಪಕ್ಷ ಆರಂಭಿಸಿರುವುದರಿಂದಲೇ ಕೇಂದ್ರ ಸರ್ಕಾರ ನಮಗೆ ತೊಂದರೆ ನೀಡುತ್ತಿದೆ ಎಂದು ಅವರು ಹೇಳುತ್ತಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.